ಬೆಂಗಳೂರು : ಬುದ್ಧಿವಂತರ ಆಟ ಎಂದು ಪರಿಗಣಿಸಲಾಗುವ ಚದುರಂಗದ ಆಟದಿಂದ ಬುದ್ಧಿವಂತಿಕೆ, ತಾಳ್ಮೆ ಹೆಚ್ಚುತ್ತದೆ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ತಿಳಿಸಿದರು.
ಅಂತಾರಾಷ್ಟ್ರೀಯ ದಿನಾಚರಣೆ ಅಂಗವಾಗಿ ಕರ್ನಾಟಕ ವಿಧಾನ ಮಂಡಲ ಮತ್ತು ಅಖಿಲ ಭಾರತ ಚೆಸ್ ಫೆಡರೇಷನ್ ಸಹಯೋಗದಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಧಾನಸೌಧ ಚೆಸ್ ಹಬ್ಬ ಮತ್ತು ಲೆಜಿಸ್ಲೇಚರ್ ಕಪ್ 2024ಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಪಿ.ಅನಂತ್, ಶಾಸಕ ಅಜಯ್ ಸಿಂಗ್, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ, ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮೀ ಇತರರಿದ್ದರು.
ಚೆಸ್‌ಗೆ ಶಾಸಕರ ಗೈರು: ಶಾಸಕರು ಹಾಗೂ ವಿಧಾನಸೌಧ ಅಧಿಕಾರಿಗಳಿಗೆ ಚೆಸ್ ಸ್ಪರ್ಧೆ ಏರ್ಪಡಿಸಿದ್ದರೂ, ಯಾವೊಬ್ಬ ಶಾಸಕರೂ ಚೆಸ್ ಹಬ್ಬದಲ್ಲಿ ಪಾಲ್ಗೊಳ್ಳಲಿಲ್ಲ. ಅಲ್ಲದೆ, ಕೆಲ ಅಧಿಕಾರಿಗಳಷ್ಟೇ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.