ಕನ್ನಡಪ್ರಭ ಸಿನಿವಾರ್ತೆ
ಸ್ಯಾಂಡಲ್‌ವುಡ್‌ನ ತಾರಾ ಜೋಡಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ‘ಕೃಷ್ಣ ಮಿಲನ ಪ್ರೀತಿಯ ಗೂಡಿಗೆ ಪುಟ್ಟ ಕಂದಮ್ಮನ ಆಗಮನವಾಗಲಿದೆ’ ಎಂದು ಈ ಜೋಡಿ ತಿಳಿಸಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಇವರು ಹೊಸ ಅತಿಥಿಯನ್ನು ಬರಮಾಡಿಕೊಳ್ಳಲಿದ್ದಾರೆ.3 ವರ್ಷಗಳ ಕೆಳಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ಅದಕ್ಕೂ ಕೆಲ ವರ್ಷಗಳ ಮೊದಲೇ ಪ್ರೀತಿಯಲ್ಲಿ ಬಿದ್ದಿತ್ತು. ‘ಲವ್ ಮಾಕ್ಟೇಲ್’ ಸಿನಿಮಾದ ಬಳಿಕ ಇವರಿಬ್ಬರ ವೃತ್ತಿ ಜೀವನದ ಗ್ರಾಫ್ ಮೇಲಕ್ಕೇರಿತ್ತು.