;Resize=(412,232))
ದರ್ಶನ್ ನಟನೆಯ ‘ಡೆವಿಲ್ ದಿ ಹೀರೋ’ ಸಿನಿಮಾ ಈ ವರ್ಷ ಕ್ರಿಸ್‌ಮಸ್‌ಗೆ ಬಿಡುಗಡೆಯಾಗಲಿದೆ. ದರ್ಶನ್ ಅಧಿಕೃತವಾಗಿ ಸಿನಿಮಾ ಬಿಡುಗಡೆಯನ್ನು ಘೋಷಿಸಿದ್ದಾರೆ. ‘ಡೆವಿಲ್ ಚಿತ್ರವು ಇದೇ ಕ್ರಿಸ್ಮಸ್ 2024ಕ್ಕೆ ಬೆಳ್ಳಿತೆರೆಯ ಮೇಲೆ ಬರಲಿದೆ. ನಿಮ್ಮ ಪ್ರೀತಿ-ಹಾರೈಕೆ ಸದಾ ಕನ್ನಡ ಚಿತ್ರಗಳ ಮೇಲಿರಲಿ’ ಎಂದು ದರ್ಶನ್ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ.
ಕಳೆದ ವರ್ಷ ಕ್ರಿಸ್‌ಮಸ್ ಹಬ್ಬದಂದೇ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ರಿಲೀಸ್ ಕಂಡು ಗಲ್ಲಾಪಟ್ಟಿಗೆ ದೋಚಿತ್ತು. ಈ ವರ್ಷವೂ ಕ್ರಿಸ್‌ಮಸ್ ವೇಳೆಗೆ ದರ್ಶನ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಪ್ರಕಾಶ್ ವೀರ್ ನಿರ್ದೇಶನದ ಈ ಸಿನಿಮಾವನ್ನು ಜೈಮಾತಾ ಕಂಬೈನ್ಸ್ ಹಾಗೂ ವೈಷ್ಣೋ ಸ್ಟುಡಿಯೋಸ್ ನಿರ್ಮಿಸುತ್ತಿವೆ.