‘ಮ್ಯಾಟ್ನಿ ಚಿತ್ರಕ್ಕೆ ಬಿಡುಗಡೆ ದಿನ ಮಾರ್ನಿಂಗ್ ಶೋಗೆ ಹೋಗಿ. ಮ್ಯಾಟ್ನಿವರೆಗೂ ಕಾಯಬೇಡಿ. ನೀನಾಸಂ ಸತೀಶ್ ಅವರ ಚಿತ್ರರಂಗದ ಪ್ರಯಾಣ ತುಂಬಾ ದೊಡ್ಡದು. ರಚಿತಾ ಕೂಡ ಹತ್ತು ವರ್ಷದಿಂದ ಚಿತ್ರರಂಗದಲ್ಲಿ ಇದ್ದಾರೆ.
ಒಳ್ಳೆಯದಾಗಲಿ’ ಎಂದರು ದರ್ಶನ್.ಸತೀಶ್ ನೀನಾಸಂ, ರಚಿತಾ ರಾಮ್, ಅದಿತಿ ಪ್ರಭುದೇವ ನಟನೆಯ ‘ಮ್ಯಾಟ್ನಿ’ ಚಿತ್ರದ ಟ್ರೇಲರ್ ರಿಲೀಸ್ ಮಾಡಿ ಅವರು ಮಾತನಾಡಿದರು.
ಮನೋಹರ ಕಾಂಪಲ್ಲಿ ನಿರ್ದೇಶನದ, ಪಾರ್ವತಿ ಗೌಡ ನಿರ್ಮಾಣದ ‘ಮ್ಯಾಟ್ನಿ’ ಸಿನಿಮಾ ಏ.5ರಂದು ಬಿಡುಗಡೆ ಆಗಲಿದೆ. ಈಗ ಟ್ರೇಲರ್ ಬಿಡುಗಡೆ ಆಗಿದ್ದು, ಕುತೂಹಲ ಹುಟ್ಟಿಸಿದೆ.
ನೀನಾಸಂ ಸತೀಶ್, ‘ದರ್ಶನ್ ಅವರು ಯಾಕೆ ಮ್ಯಾಟ್ನಿ ಸಿನಿಮಾ ರಿಲೀಸ್ ಮಾಡಿಲ್ಲ, ಮೊದಲು ರಿಲೀಸ್ ಮಾಡಿ ಎಂದು ಹೇಳಿದ್ದರು. ಈಗ ಟ್ರೇಲರ್ ರಿಲೀಸ್ ಮಾಡಿದ್ದಾರೆ.
ನಮ್ಮ ಚಿತ್ರಕ್ಕೆ ದೊಡ್ಡ ಬಲ ಬಂದಿದೆ’ ಎಂದರು.ರಚಿತಾ, ‘10 ವರ್ಷದ ಬಳಿಕ ಮೊದಲ ಬಾರಿಗೆ ನನ್ನ ಸಿನಿಮಾದ ಟ್ರೇಲರನ್ನು ದರ್ಶನ್ ಸಾರ್ ರಿಲೀಸ್ ಮಾಡಿದ್ದಾರೆ, ಖುಷಿಯಾಗಿದೆ’ ಎಂದರು. ಶಿವರಾಜ್ ಕೆಆರ್ ಪೇಟೆ, ನಾಗಭೂಷಣ್, ಪೂರ್ಣಚಂದ್ರ ತೇಜಸ್ವಿ, ಪೂರ್ಣ ಮೈಸೂರು ಇದ್ದರು.
ನನಗೆ ಹಾರರ್ ಕಾಮಿಡಿ ಇಷ್ಟ. ಮ್ಯಾಟ್ನಿ ಕೂಡ ಹಾರರ್ ಕಾಮಿಡಿ. ನಮ್ಮ ಟಗರು ಪಲ್ಯ ಚಿತ್ರದ ಟ್ರೇಲರ್ ರಿಲೀಸ್‌ಗೆ ದರ್ಶನ್ ಬಂದಿದ್ದರು. ಆ ಚಿತ್ರ ಗೆದ್ದಿತ್ತು. ಈ ಸಿನಿಮಾ ಕೂಡ ಗೆಲ್ಲುತ್ತದೆ.- ಡಾಲಿ ಧನಂಜಯ್