ಚಿಕ್ಕಣ್ಣ ಮದುವೆಗೆ ದರ್ಶನ್‌ಗೆ ಆಹ್ವಾನವಿಲ್ಲ

Published : Aug 27, 2026, 12:31 PM IST
Chikkanna

ಸಾರಾಂಶ

ಯಶ್‌ ಅವರನ್ನು ನಾನು ಭಯ್ಯಾ ಅಂತ ಕರೀತೀನಿ. ಅವರಿಗೆ ಆಮಂತ್ರಣ ಪತ್ರಿಕೆ ಕೊಡಲು ಹೋಗಿದ್ದಾಗ ಗಂಡ ಹೇಗಿರ್ಬೇಕು, ಏನೇನು ತಪ್ಪು ಮಾಡಬಾರದು ಅನ್ನೋದನ್ನು ರಾಧಿಕಾ ಹತ್ರ ಕೇಳ್ಕೊಂಡು ಬಿಡಪ್ಪ ಅಂದ್ರು. ಮದುವೆ ಆದಮೇಲೆ ಹೆಂಡತಿ ಜೊತೆಗೆ ಟಾಕ್ಸಿಕ್‌ ಸಿನಿಮಾ ನೋಡ್ತೀನಿ ’

ಸಿನಿವಾರ್ತೆ 

‘ನನ್ನದು ಮನೆಯವರು ನೋಡಿ ನಿಶ್ಚಯಿಸಿದ ಮದುವೆ. ಆದರೆ ಮದುವೆ ಫಿಕ್ಸ್ ಆದಮೇಲೆ ಲವ್‌ ಆಗೋಯ್ತು. ಹೀಗಾಗಿ ಅರೇಂಜ್ಡ್‌ ಕಮ್‌ ಲವ್‌ ಮ್ಯಾರೇಜ್‌. ಯಶ್‌ ಅವರನ್ನು ನಾನು ಭಯ್ಯಾ ಅಂತ ಕರೀತೀನಿ. ಅವರಿಗೆ ಆಮಂತ್ರಣ ಪತ್ರಿಕೆ ಕೊಡಲು ಹೋಗಿದ್ದಾಗ ಗಂಡ ಹೇಗಿರ್ಬೇಕು, ಏನೇನು ತಪ್ಪು ಮಾಡಬಾರದು ಅನ್ನೋದನ್ನು ರಾಧಿಕಾ ಹತ್ರ ಕೇಳ್ಕೊಂಡು ಬಿಡಪ್ಪ ಅಂದ್ರು. ಮದುವೆ ಆದಮೇಲೆ ಹೆಂಡತಿ ಜೊತೆಗೆ ಟಾಕ್ಸಿಕ್‌ ಸಿನಿಮಾ ನೋಡ್ತೀನಿ ’

- ಹೀಗೆ ಹೇಳಿದ್ದು ಹಾಸ್ಯನಟ ಚಿಕ್ಕಣ್ಣ.

ತನ್ನ ಮದುವೆ ಕುರಿತಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮದುವೆಗೆ ದರ್ಶನ್‌ ಅವರಿಗೆ ಆಮಂತ್ರಣ ಪತ್ರಿಕೆ ನೀಡಿಲ್ಲ. ದರ್ಶನ್‌ ಅವರ ಪ್ರಕರಣದಲ್ಲಿ ನಾನು ಸಾಕ್ಷಿಯಾಗಿರುವುದರಿಂದ ಅವರು ಜೈಲಲ್ಲಿ ಇದ್ದರೂ, ಹೊರಗಿದ್ದರೂ ಅವರನ್ನು ಮದುವೆಗೆ ಕರೆಯುವಂತಿಲ್ಲ’ ಎಂದರು.

ಆಗಸ್ಟ್‌ 29 ಹಾಗೂ 30ಕ್ಕೆ ಮೈಸೂರಿನಲ್ಲಿ ಚಿಕ್ಕಣ್ಣ ಹಾಗೂ ಪಾವನಾ ಮದುವೆ ನಡೆಯಲಿದೆ. ಚಿಕ್ಕಣ್ಣ ಅವರ ಭಾವೀ ಪತ್ನಿ ಪಾವನಾ ಉದ್ಯಮಿಯಾಗಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಯಶ್‌ ಟಾಕ್ಸಿಕ್‌ ಮೊದಲ ದಿನದ ಕಲೆಕ್ಷನ್ ರು.125 ಕೋಟಿ
ಹೇಗಿದೆ ಟಾಕ್ಸಿಕ್ : ರಣರಣ ರಣರಂಗದ ನಡುವೆ ಪ್ರೇಮ, ಕಾಮ, ನಿರ್ನಾಮ