ಕನ್ನಡಪ್ರಭ ಸಿನಿವಾರ್ತೆ
ಈ ಸಂದರ್ಭ ನಿರ್ದೇಶಕ ಪವನ್‌ಕುಮಾರ್, ‘ಇಂದಿನ ಸನ್ನಿವೇಶದಲ್ಲಿ 25 ದಿನಗಳ ಪ್ರದರ್ಶನ ಸುಲಭ ಸಾಧ್ಯವಲ್ಲ. ನಮ್ಮ ಚಿತ್ರ ಉತ್ತರ ಕರ್ನಾಟಕದಲ್ಲಿ ಸತತ ಪ್ರದರ್ಶನ ಕಂಡಿರುವುದು ಖುಷಿಯ ವಿಚಾರ. ತಮಿಳು, ತೆಲುಗು ಡಬ್ಬಿಂಗ್ ರೈಟ್ಸ್ ಮಾರಾಟವಾಗಿದೆ’ ಎಂದರು.ನಟಿ ಅದ್ವಿತಿ ಶೆಟ್ಟಿ, ‘ಸರಿಯಾದ ಅವಕಾಶ ಸಿಗದೇ ಇನ್ನೇನು ಚಿತ್ರರಂಗದಿಂದ ಹೊರ ನಡೆಯಬೇಕು ಎಂಬ ಯೋಚನೆಯಲ್ಲಿದ್ದಾಗ ಈ ಸಿನಿಮಾದ ಆಫರ್ ಬಂತು. ಇದರಲ್ಲಿ ನಟಿಸುತ್ತಿರುವಾಗಲೇ ಎರಡು ಚಿತ್ರಗಳಿಗೆ ಸಹಿ ಮಾಡಿದೆ. ಒಬ್ಬ ಕಲಾವಿದೆಗೆ 25ನೇ ದಿನದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವುದು ಬಹಳ ಖುಷಿ ಕೊಡುವ ವಿಚಾರ. ನನ್ನ ಅಪ್ಪ ಈಗ ಇದ್ದಿದ್ದರೆ ತುಂಬ ಖುಷಿಪಡುತ್ತಿದ್ದರು’ ಎಂದು ಭಾವುಕರಾದರು. ನಿರ್ಮಾಪಕ ಸಂತೋಷ್ ಗುರುಬಂಡಿ, ಕಲಾವಿದರಾದ ರವೀಂದ್ರನಾಥ್, ನಾಗೇಂದ್ರ ಅರಸ್, ಯತಿರಾಜ್, ಇಂಚರ, ಸಂಗೀತ ನಿರ್ದೇಶಕ ವಿನು ಮನಸು ಹಾಜರಿದ್ದರು. ನಿರ್ದೇಶಕ ಸಂಘದ ಅಧ್ಯಕ್ಷ ಎನ್ನಾರ್ ಕೆ ವಿಶ್ವನಾಥ್, ಬಿಗ್‌ಬಾಸ್ ಸ್ಪರ್ಧಿ ರೂಪೇಶ್ ಚಿತ್ರತಂಡಕ್ಕೆ ಶುಭ ಹಾರೈಸಿದರು.