ಧ್ರುವ ಸರ್ಜಾ ನಟನೆಯ ಮುಂದಿನ ಚಿತ್ರಕ್ಕೆ ಕಿರಣ್‌ ರಾಜ್‌ ನಿರ್ದೇಶನ

Published : Mar 02, 2026, 01:36 PM IST
South Actor Dhruva Sarja

ಸಾರಾಂಶ

ನಟ ಧ್ರುವ ಸರ್ಜಾ ಅವರ ಅಭಿನಯದ ಮುಂದಿನ ಚಿತ್ರವನ್ನು ಕಿರಣ್‌ರಾಜ್‌ ಕೆ ಅವರು ನಿರ್ದೇಶಿಸಿದ್ದಾರೆ. ಈ ಕುರಿತು ಈಗಾಗಲೇ ಇಬ್ಬರ ನಡುವೆ ಮಾತುಕತೆ ಆಗಿದ್ದು, ಸದ್ಯದಲ್ಲೇ ಚಿತ್ರಕ್ಕೆ ಪ್ರೀ- ಪ್ರೊಡಕ್ಷನ್‌ ಕೆಲಸಗಳು ಶುರುವಾಗಲಿವೆ

 ಸಿನಿವಾರ್ತೆ

ನಟ ಧ್ರುವ ಸರ್ಜಾ ಅವರ ಅಭಿನಯದ ಮುಂದಿನ ಚಿತ್ರವನ್ನು ಕಿರಣ್‌ರಾಜ್‌ ಕೆ ಅವರು ನಿರ್ದೇಶಿಸಿದ್ದಾರೆ. ಈ ಕುರಿತು ಈಗಾಗಲೇ ಇಬ್ಬರ ನಡುವೆ ಮಾತುಕತೆ ಆಗಿದ್ದು, ಸದ್ಯದಲ್ಲೇ ಚಿತ್ರಕ್ಕೆ ಪ್ರೀ- ಪ್ರೊಡಕ್ಷನ್‌ ಕೆಲಸಗಳು ಶುರುವಾಗಲಿವೆ. 

ಧ್ರುವ ಸರ್ಜಾ ಅವರು ಕೇಳಿ ಒಪ್ಪಿಕೊಂಡಿದ್ದಾರೆ

ಈಗಾಗಲೇ ಚಿತ್ರಕಥೆಯನ್ನು ಮುಗಿಸಿದ್ದು, ಈ ಕತೆಯನ್ನು ಧ್ರುವ ಸರ್ಜಾ ಅವರು ಕೇಳಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಧ್ರುವ ಸರ್ಜಾ ಅವರು ‘ಕ್ರಿಮಿನಲ್’ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದ ನಂತರ ಕಿರಣ್‌ರಾಜ್‌ ನಿರ್ದೇಶನದ ಚಿತ್ರಕ್ಕೆ ಜೊತೆಯಾಗಲಿದ್ದಾರೆ.

‘777 ಚಾರ್ಲಿ’ ಚಿತ್ರ ನಿರ್ದೇಶಿಸಿ ಯಶಸ್ಸು ಕಂಡವರು.

ನಿರ್ದೇಶಕ ಕಿರಣ್‌ರಾಜ್‌ ಅವರು ರಕ್ಷಿತ್‌ ಶೆಟ್ಟಿ ನಟನೆಯಲ್ಲಿ ‘777 ಚಾರ್ಲಿ’ ಚಿತ್ರ ನಿರ್ದೇಶಿಸಿ ಯಶಸ್ಸು ಕಂಡವರು. ಈಗ ಇವರ ಚಿತ್ರಕ್ಕೆ ಧ್ರುವ ಸರ್ಜಾ ಅವರು ಜೊತೆಯಾಗುತ್ತಿದ್ದಾರೆ. ಈ ಚಿತ್ರ ಎರಡ್ಮೂರು ತಿಂಗಳಲ್ಲಿ ಶೂಟಿಂಗ್‌ ಸೆಟ್‌ಗೆ ಹೋಗಲಿದೆಯಂತೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ರೊಮ್ಯಾಂಟಿಕ್‌ ಕಾಮಿಡಿ ಚಿತ್ರದಲ್ಲಿ ನಟ ಸುದೀಪ್‌-ಇದು ತೆಲುಗು ನಿರ್ದೇಶಕನ ಕನ್ನಡ ಸಿನಿಮಾ
ಒಳ್ಳೆಯ ಸಿನಿಮಾ ಮಾಡಿದರೆ ಎಲ್ಲವೂ ಒಳ್ಳೆಯದಾಗುತ್ತದೆ: ಸತೀಶ್ ನೀನಾಸಂ