;Resize=(412,232))
ಭರ್ಜರಿ ರೂ.3000 ಕೋಟಿ ಕಲೆಕ್ಷನ್ ಮಾಡಿರುವ ಧುರಂಧರ್ 1 ಹಾಗೂ ಧುರಂಧರ್ 2 ಸಿನಿಮಾದ ಮುಂದಿನ ಭಾಗದ ಬಗ್ಗೆ ಇದೀಗ ಸಹ ನಿರ್ಮಾಪಕಿ ಜ್ಯೋತಿ ದೇಶಪಾಂಡೆ ಸುಳಿವು ಕೊಟ್ಟಿದ್ದಾರೆ.
ಸಂದರ್ಶನವೊಂದರಲ್ಲಿ ಅವರು, ‘ಈ ವಷಾಂತ್ಯದ ಹೊತ್ತಿಗೆ ಸರ್ಪ್ರೈಸ್ ಕೊಡ್ತೀವಿ, ಇನ್ನೂ ಕೆಲಸ ಶುರು ಆಗಿಲ್ಲ. ಸದ್ಯಕ್ಕೆ ತಯಾರಿ ನಡೆಯುತ್ತಿದೆ’ ಎಂದಿದ್ದಾರೆ. ‘ಧುರಂಧರ್’ ಸಿನಿಮಾದ ಮೂರನೇ ಭಾಗ ಬರುವ ಸುದ್ದಿಗೆ ಈ ಮಾತು ಪುಷ್ಠಿ ನೀಡಿದೆ.
ಆದರೆ ಈ ಹಿಂದೆ ನಿರ್ದೇಶಕ ಆದಿತ್ಯ ಧರ್ ಸೇರಿದಂತೆ ಚಿತ್ರತಂಡದವರು ಮೂರನೇ ಭಾಗ ಬರುವುದಿಲ್ಲ ಎಂದು ಹೇಳಿದ್ದರು. ಆದರೆ ಇದೀಗ ಅಭಿಮಾನಿಗಳು ‘ಧುರಂಧರ್ 3’ಗೆ ಪಟ್ಟು ಹಿಡಿದಿರುವ ಕಾರಣ ಅವರು ಮನಸ್ಸು ಬದಲಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನೊಂದೆಡೆ ‘ಧುರಂಧರ್ 1 ಹಾಗೂ 2’ ಸಿನಿಮಾ ಮೇಕಿಂಗ್ ಅನ್ನು ಇಟ್ಟುಕೊಂಡು ನಿರ್ದೇಶಕ ಆದಿತ್ಯ ಧರ್ ಡಾಕ್ಯುಮೆಂಟರಿ ಮಾಡಲು ಯೋಜಿಸಿದ್ದು, ಅದನ್ನು ಥೇಟರಿಗೆ ರಿಲೀಸ್ ಮಾಡುವ ಬಗ್ಗೆಯೂ ಮಾತು ಹೇಳಿಬಂದಿದೆ.