ಕಾನ್‌ಸ್ಟೇಬಲ್‌ ಸರೋಜಾ ಖ್ಯಾತಿಯ ನಟಿ ಜತೆ ಬಿಪ್ಲಬ್‌ ವಿವಾಹನವದೆಹಲಿ: ತ್ರಿಪುರದ ಮಾಜಿ ಸಿಎಂ, ಸಂಸದ ಬಿಪ್ಲಬ್ ದೇವ್‌ (54), ಕನ್ನಡದ ನಟಿ ತ್ರಿವೇಣಿ ರಾವ್‌ ಅವರೊಂದಿಗೆ ವಿವಾಹವಾಗಿದ್ದಾರೆ. ಆದರೆ ಇಬ್ಬರೂ ಇನ್ನೂ ತಮ್ಮ ಮದುವೆ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದರೆ ಇಬ್ಬರು ಒಟ್ಟಿಗೆ ಇರುವ ಫೋಟೋಗಳು ವೈರಲ್‌ ಆಗಿವೆ.

2001ರಲ್ಲಿ ನೀತಿ ದೇವ್‌ ಅವರನ್ನು ಮದುವೆಯಾಗಿದ್ದ ಬಿಪ್ಲಬ್‌ಗೆ ಇಬ್ಬರು ಮಕ್ಕಳಿದ್ದಾರೆ. ಕೆಲ ತಿಂಗಳುಗಳ ಹಿಂದಷ್ಟೇ ತಮ್ಮ ಮೊದಲ ಪತ್ನಿಯಿಂದ ಬಿಪ್ಲಬ್‌ ವಿಚ್ಛೇದನ ಪಡೆದುಕೊಂಡಿದ್ದರು. ಇದರ ಬೆನ್ನಲ್ಲೇ ದೆಹಲಿಯಲ್ಲಿ ಜೂ.19ರಂದು ತ್ರಿವೇಣಿ ಅವರ ಜತೆ ಮದುವೆಯಾಗಿದ್ದಾರೆ ಎನ್ನಲಾಗಿದೆ. ಜೊತೆಗೆ ಜೂ. 24ಕ್ಕೆ ಅಗರ್ತಾಲಾದಲ್ಲಿ ಜೋಡಿ ಅದ್ಧೂರಿ ಆರತಕ್ಷತೆ ಮಾಡಿಕೊಳ್ಳಲಿದ್ದು, ಹಲವು ರಾಜಕೀಯ ನಾಯಕರು ಸಾಕ್ಷಿಯಾಗುವ ಸಾಧ್ಯತೆಯಿದೆ.

ಬೆಂಗಳೂರು ಮೂಲದ ತ್ರಿವೇಣಿ ದಕ್ಷಿಣ ಭಾರತದ ಹಲವು ಸಿನೆಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಶಿವರಾಜ್‌ ಕುಮಾರ್‌ ಅಭಿನಯಿಸಿದ್ದ ಟಗರು ಚಿತ್ರದಲ್ಲಿ ಕಾನ್‌ಸ್ಟೇಬಲ್‌ ಸರೋಜಾ ಪಾತ್ರದಲ್ಲಿ ಅಭಿನಯಿಸಿದ್ದು, ಅವರಿಗೆ ಹೆಚ್ಚಿನ ಜನಪ್ರಿಯತೆ ತಂದು ಕೊಟ್ಟಿತ್ತು. ಅದಲ್ಲದೇ ರಾಜ ಮಾರ್ತಾಂಡ, ಜಮಾಲಿಗುಡ್ಡ ಸೇರಿ ಹಲವು ಚಿತ್ರಗಳಲ್ಲೂ ಅಭಿನಯಿಸಿದ್ದರು.

==

ಕನ್ನಡದ ನಟಿ ತ್ರಿವೇಣಿ ತ್ರಿಪುರ ಮಾಜಿ ಸಿಎಂ ಮದ್ವೆ


ನವದೆಹಲಿ: ತ್ರಿಪುರದ ಮಾಜಿ ಸಿಎಂ, ಸಂಸದ ಬಿಪ್ಲಬ್ ದೇವ್‌ (54), ಕನ್ನಡದ ನಟಿಯೊಬ್ಬರನ್ನು ವಿವಾಹವಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದರೆ ಇಬ್ಬರೂ ಇನ್ನೂ ತಮ್ಮ ಮದುವೆ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದರೆ ನಟಿಯ ಜೊತೆಗಿನ ಮಾಜಿ ಸಿಎಂ ಫೋಟೋ ವೈರಲ್‌ ಆಗಿವೆ.2001ರಲ್ಲಿ ನೀತಿ ದೇವ್‌ ಅವರನ್ನು ಮದುವೆಯಾಗಿದ್ದ ಬಿಪ್ಲಬ್‌ಗೆ ಇಬ್ಬರು ಮಕ್ಕಳಿದ್ದಾರೆ. ಕೆಲ ತಿಂಗಳುಗಳ ಹಿಂದಷ್ಟೇ ತಮ್ಮ ಮೊದಲ ಪತ್ನಿಯಿಂದ ಬಿಪ್ಲಬ್‌ ವಿಚ್ಛೇದನ ಪಡೆದುಕೊಂಡಿದ್ದರು. ಇದರ ಬೆನ್ನಲ್ಲೇ ದೆಹಲಿಯಲ್ಲಿ ಜೂ.19ರಂದು ನಟಿಯನ್ನು ವರಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಜೂ. 24ಕ್ಕೆ ಅಗರ್ತಾಲಾದಲ್ಲಿ ಜೋಡಿ ಅದ್ಧೂರಿ ಆರತಕ್ಷತೆ ಮಾಡಿಕೊಳ್ಳಲಿದ್ದು, ಹಲವು ರಾಜಕೀಯ ನಾಯಕರು ಸಾಕ್ಷಿಯಾಗುವ ಸಾಧ್ಯತೆಯಿದೆ.ಬೆಂಗಳೂರು ಮೂಲದ ನಟಿ, ಕನ್ನಡದಲ್ಲಿ ಶಿವರಾಜ್‌ ಕುಮಾರ್‌ ಅಭಿನಯಿಸಿದ್ದ ಟಗರು ಹಾಗೂ ರಾಜ ಮಾರ್ತಾಂಡ, ಜಮಾಲಿಗುಡ್ಡ ಸೇರಿ ಹಲವು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.