ಸಿಂಪಲ್ ಸುನಿ ಹೊಸ ಸಿನಿಮಾ ದೇವರು ರುಜು ಮಾಡಿದನು ಗೆ ದಿವಿತಾ ರೈ ಹಾಗೂ ಕೀರ್ತಿ ನಾಯಕಿಯರು.
ಕನ್ನಡಪ್ರಭ ಸಿನಿವಾರ್ತೆನಿರ್ದೇಶಕ ಸಿಂಪಲ್ ಸುನಿ ನಿರ್ದೇಶನದ ಹೊಸ ಸಿನಿಮಾ ‘ದೇವರು ರುಜು ಮಾಡಿದನು’ ಸೆಟ್ಟೇರಿದೆ. ವಿರಾಜ್ ಈ ಚಿತ್ರದ ನಾಯಕ. ದಿವಿತಾ ಹಾಗೂ ಕೀರ್ತಿ ಕೃಷ್ಣ ನಾಯಕಿಯರು.
ಕೀರ್ತಿ ಮಾತನಾಡಿ, ‘ಚಿಕ್ಕವಯಸ್ಸಿಂದ ಸುನಿ ಸಿನಿಮಾ ನೋಡಿ ಬೆಳೆದವಳು. ಅವರ ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಸಿನಿಮಾ ಬಂದಾಗ ಹತ್ತು ಹನ್ನೊಂದು ವರ್ಷದವಳಿದ್ದೆ. ಆಗ ಕಥೆ ಅರ್ಥ ಆಗಿರಲಿಲ್ಲ. ಹಾಡು ಬಹಳ ಇಷ್ಟವಾಗಿತ್ತು. ಹತ್ತು ವರ್ಷದ ನಂತರ ಅವರ ಮೂಲಕವೇ ಲಾಂಚ್ ಆಗುತ್ತಿರುವುದು ಖುಷಿ ಕೊಟ್ಟಿದೆ. ಸಿನಿಮಾದಲ್ಲಿ ಶ್ರಾವ್ಯಾ ಎಂಬ ಹಳ್ಳಿಯ ಮುಗ್ಧ ಸಂಗೀತ ಕಲಾವಿದೆಯ ಪಾತ್ರ ನನ್ನದು’ ಎಂದರು. ದಿವಿತಾ ರೈ ಗೋವಾದ ಮಾಡರ್ನ್ ಹಾಡುಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ಸಿಂಪಲ್ ಸುನಿ, ‘ಸಂಗೀತವೇ ಉಸಿರು ಎಂದು ಜೀವಿಸುವ ಇಬ್ಬರು ನಾಯಕಿಯರು ಹಾಗೂ ಸಂಗೀತ ಇಷ್ಟವಿಲ್ಲದಿದ್ದರೂ ಅದನ್ನು ಪ್ರೀತಿಸುವ ನಾಯಕ. ಈ ಬಗೆಯಲ್ಲಿ ಸೊಗಸಾದ ಸಂಗೀತದ ಕಥೆ ಜೊತೆಗೆ ರಕ್ತ ಚರಿತ್ರೆಯನ್ನು ಹೇಳುತ್ತಿದ್ದೇನೆ’ ಎಂದು ಹೇಳಿದರು.
ನಾಯಕ ವಿರಾಜ್, ‘ಚಿಕ್ಕವನಿದ್ದಾಗಲೇ ನಟನೆಯ ಅಮಲೇರಿಸಿಕೊಂಡಿದ್ದೆ. ಪ್ರೇಕ್ಷಕರ ಚಪ್ಪಾಳೆ ಎಲ್ಲಕ್ಕಿಂತ ಹೆಚ್ಚಿನ ತೃಪ್ತಿ ಕೊಡುತ್ತಿತ್ತು. ಇದೀಗ ನಟನಾಗಿ ಮತ್ತೊಂದು ಹಂತಕ್ಕೇರಿರುವುದು ಖುಷಿ ಕೊಟ್ಟಿದೆ’ ಎಂದರು. ಗೋವಿಂದ್ ರಾಜ್ ಸಿಟಿ ಈ ಚಿತ್ರದ ನಿರ್ಮಾಪಕರು.
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.