;Resize=(412,232))
ಬ್ರ್ಯಾಟ್ ನಾಯಕಿ ಸಂದರ್ಶನ
ಕೇಶವ
ನಾನು ಮೂಲತಃ ಬೆಂಗಳೂರು ಹುಡುಗಿ. ನಮ್ಮದು ಬ್ಯುಸಿನೆಸ್ ಕುಟುಂಬ. ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬಿಬಿಎ ಓದಿದ್ದೇನೆ. ಕಾಲೇಜಿನಲ್ಲಿ ಓದುವಾಗಲೇ ಸಿನಿಮಾಗಳಲ್ಲಿ ನಟಿಸುವ ಆಸಕ್ತಿ ಬೆಳೆಸಿಕೊಂಡಿದ್ದೆ. ಓದುವ ಜತೆಗೆ ನಟನೆಯ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದೆ. ಹೀಗೆ ಕಾಲೇಜು ದಿನಗಳ ಆಸಕ್ತಿ ನನ್ನ ಚಿತ್ರರಂಗಕ್ಕೆ ಕರೆದುಕೊಂಡು ಬಂತು.
ಕನ್ನಡದಲ್ಲಿ ‘ಬ್ರ್ಯಾಟ್’ ನನಗೆ ಮೊದಲ ಸಿನಿಮಾ. ತೆಲುಗಿನಲ್ಲಿ ಒಂದು ಸಿನಿಮಾ ಮಾಡಿದ್ದೇನೆ. ರಾಜ್ ತರುಣ್ ಅಭಿನಯದ ‘ಭಲೇ ಉನ್ನಾಡೆ’ ಎನ್ನುವ ಚಿತ್ರದಲ್ಲಿ ನಟಿಸಿದ್ದೇನೆ. ಆ ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರದ ನಂತರ ನನಗೆ ‘ಬ್ರ್ಯಾಟ್’ ಸಿನಿಮಾ ಅವಕಾಶ ಸಿಕ್ಕಿದ್ದು.
ಹೆಚ್ಚು ಮಾತನಾಡದ, ಸಿಂಪಲ್ ಹಾಗೂ ಸೈಲೆಂಟ್ ಹುಡುಗಿ ಪಾತ್ರ ನನ್ನದು. ತುಂಬಾ ಜನ ಹೆಣ್ಣು ಮಕ್ಕಳು ನನ್ನ ಪಾತ್ರವನ್ನು ಅವರಿಗೇ ಕನೆಕ್ಟ್ ಮಾಡಿಕೊಳ್ಳುತ್ತಾರೆ. ಅಷ್ಟು ಸಹಜವಾಗಿ ನನ್ನ ಪಾತ್ರ ಮೂಡಿ ಬಂದಿದೆ. ಇದಕ್ಕೆ ಕಾರಣ ನಿರ್ದೇಶಕ ಶಶಾಂಕ್ ಅವರು. ಅವರಿಗೆ ತಮ್ಮ ಕತೆ, ಪಾತ್ರಗಳು ಹಾಗೂ ಸನ್ನಿವೇಶಗಳು ಮತ್ತು ಆ ದಿನ ಯಾವುದನ್ನು ಶೂಟ್ ಮಾಡಬೇಕು ಎನ್ನುವ ತುಂಬಾ ಕ್ಲ್ಯಾರಿಟಿ ಇರುತ್ತದೆ.
ನಾನು ಕಾಲೇಜಿನಲ್ಲಿರುವಾಗಲೇ ಸಿನಿಮಾಗಳಿಗೆ ಹೋಗಿ ಆಡಿಷನ್ ಕೊಡುತ್ತಿದ್ದೆ. ಆ ಪ್ರಯತ್ನದಲ್ಲಿ ಶಶಾಂಕ್ ಅವರ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಕ್ಕೂ ಆಡಿಷನ್ ಕೊಟ್ಟಿದ್ದೆ. ಆ ಚಿತ್ರದಲ್ಲಿ ಬೃಂದಾ ಆಚಾರ್ಯ ಮಾಡಿದ ಪಾತ್ರ ನಾನು ಮಾಡಬೇಕಿತ್ತು. ಆದರೆ, ನನಗೆ ಅವಕಾಶ ಸಿಗಲಿಲ್ಲ. ಈ ಆಡಿಷನ್ ನನ್ನ ‘ಬ್ರ್ಯಾಟ್’ಗೆ ಕನೆಕ್ಟ್ ಮಾಡಿತು.
ಅಯ್ಯೋ ಹಾಗೇನು ಇಲ್ಲ. ಈ ಚಿತ್ರದಲ್ಲಿನ ಪಾತ್ರಕ್ಕೆ ನಾನು ಸೂಟ್ ಆಗುತ್ತೇನೆ ಎಂದು ನಿರ್ದೇಶಕ ಶಶಾಂಕ್ ಹೇಳಿದ ಮೇಲೆ ನಾನು ‘ಬ್ರ್ಯಾಟ್’ ಚಿತ್ರಕ್ಕೆ ನಾಯಕಿ ಆಗಿದ್ದು. ಹೀಗಾಗಿ ನಾನು ನಾಯಕಿ ಆಗಿದ್ದರ ಹಿಂದೆ ಯಾವ ಶಿಫಾರಸ್ಸು, ರಿಯಾಯಿತಿಯೂ ಇಲ್ಲ.
ಇದು ಕಂಪ್ಲೀಟ್ ಆ್ಯಕ್ಷನ್ ಹಾಗೂ ಡ್ರಾಮಾ ಸಿನಿಮಾ. ಕ್ರಿಕೆಟ್, ಯಂಗ್ ಜನರೇಷನ್ ಸುತ್ತಾ ಸಿನಿಮಾ ಸಾಗುತ್ತದೆ. ಕತೆಗೆ ಕ್ರಿಕೆಟ್ ಹೇಗೆ ಸಂಬಂಧ ಎಂಬುದು ಸಿನಿಮಾ ನೋಡಿ ತಿಳಿಯಬೇಕು.
ಈ ಚಿತ್ರದ ಮೊದಲ ದಿನ ಚಿತ್ರೀಕರಣ ಮಾಡಿದ್ದು ಕೆಫೆಯಲ್ಲಿ ಬರುವ ದೃಶ್ಯ. ಆಗ ನಾನು ತುಂಬಾ ನರ್ವಸ್ ಆಗಿದ್ದೆ. ಡಾರ್ಲಿಂಗ್ ಕೃಷ್ಣ ಅವರೇ ಕಂಫರ್ಟ್ ಮಾಡಿದರು. ಹೀಗೆ ಪ್ರತಿ ಹಂತದಲ್ಲೂ ಸಪೋರ್ಟ್ ಮಾಡುತ್ತಿದ್ದರು. ಗುಡ್ ಫ್ರೆಂಡ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡಷ್ಟು ಖುಷಿ ಆಗಿದೆ.