;Resize=(412,232))
2025ರ ಅತೀ ಹೆಚ್ಚಿನ ಗಳಿಕೆಯ ಸಿನಿಮಾ ಎನ್ನುವ ಹೆಗ್ಗಳಿಕೆ ಪಾತ್ರವಾಗಿರುವ ‘ಕಾಂತಾರ 1’ ಕರ್ನಾಟಕದಲ್ಲೇ 250 ಕೋಟಿ ಗಳಿಕೆ ಮಾಡಿದೆ. ಇದೀಗ ಚಿತ್ರತಂಡವು ನವೆಂಬರ್ 1 ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ಕಾಂತಾರ 1’ ಚಿತ್ರದ ಟಿಕೆಟ್ ಬೆಲೆ ಕಡಿಮೆ ಮಾಡಿದೆ.
ಹೀಗಾಗಿ ನಾಳೆಯಿಂದ ರಿಷಬ್ ಶೆಟ್ಟಿ ನಟನೆ, ನಿರ್ದೇಶನ, ಹೊಂಬಾಳೆ ಫಿಲಮ್ಸ್ ನಿರ್ಮಾಣದ ‘ಕಾಂತಾರ 1’ ಚಿತ್ರವನ್ನು ರಾಜ್ಯದ ಎಲ್ಲಾ ಸಿಂಗಲ್ ಸ್ಕ್ರೀನ್‌ಗಳಲ್ಲಿ 99 ರು. ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ 150 ರು.ಗೆ ನೋಡಬಹುದು. ಅಕ್ಟೋಬರ್ 31ರಿಂದಲೇ ಈ ಹೊಸ ಆಫರ್ ಜಾರಿಗೆ ಬರಲಿದೆ.
ಇಂದಿನಿಂದ ಪ್ರೈಮ್ ವೀಡಿಯೋದಲ್ಲಿಯೂ ಕಾಂತಾರ 1 ಸಿನಿಮಾವನ್ನು ವೀಕ್ಷಿಸಬಹುದು. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಿನಿಮಾ ನೋಡಬಹುದು.