ಸಿನಿವಾರ್ತೆ
ಜನಪ್ರಿಯ ತಾರಾ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ವಿವಾಹದ ಆಮಂತ್ರಣ ಪತ್ರಿಕೆ ಕೊನೆಗೂ ಹೊರಬಿದ್ದಿದೆ. ಫೆ.26ರಂದು ಉದಯಪುರದ ಅರಮನೆಯಲ್ಲಿ ತೀರಾ ಖಾಸಗಿಯಾಗಿ ಈ ಜೋಡಿ ಮದುವೆಯಾಗುತ್ತಿದ್ದು, ಆತ್ಮೀಯರಿಗಷ್ಟೇ ಆಹ್ವಾನ ಹೋಗಿದೆ. ಆಪ್ತವಲಯಗಳ ಪ್ರಕಾರ ಸಿನಿಮಾ ರಂಗದ ಯಾರೊಬ್ಬರನ್ನೂ ಮದುವೆಗೆ ಕರೆದಿಲ್ಲ.
ಮದುವೆ ಮನೆಯಲ್ಲಿ ಫೋನ್‌ಗೆ ನಿಷೇಧ
ಮದುವೆ ಮನೆಯಲ್ಲಿ ಫೋನ್‌ಗೆ ನಿಷೇಧವಿದೆ. ವೆಡ್ಡಿಂಗ್ ಫೋಟೋಗ್ರಾಫರ್‌ಗಳೂ ಫೋಟೋಗಳನ್ನು ಎಲ್ಲೂ ಬಹಿರಂಗ ಪಡಿಸದಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಮಾರ್ಚ್ 4ರಂದು ಹೈದಾರಾಬಾದ್‌ನಲ್ಲಿ ಅದ್ದೂರಿ ರಿಸೆಪ್ಷನ್
ಮಾರ್ಚ್ 4ರಂದು ಹೈದಾರಾಬಾದ್‌ನಲ್ಲಿ ಅದ್ದೂರಿ ರಿಸೆಪ್ಷನ್ ಆಯೋಜಿಸಿದೆ. ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನ ತಾಜ್ ಕೃಷ್ಣದಲ್ಲಿ ಅದ್ದೂರಿ ಆರತಕ್ಷತೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾರತೀಯ ಚಿತ್ರರಂಗದ ಅನೇಕ ಗಣ್ಯರು, ಪ್ರತಿಷ್ಠಿತರು ಭಾಗಿಯಾಗುವ ಸಾಧ್ಯತೆ ಇದೆ.
ಈಗಾಗಲೇ ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಅವರ ಮನೆಗಳಲ್ಲಿ ವಿವಾಹಪೂರ್ವ ಕಾರ್ಯಕ್ರಮಗಳು ವಿಧ್ಯುಕ್ತವಾಗಿ ನಡೆದಿವೆ ಎನ್ನಲಾಗಿದೆ. ಇನ್ನೂ ಈ ಜೋಡಿ ತಮ್ಮ ವಿವಾಹದ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ.
