ಭ್ರೂಣಹತ್ಯೆಯ ಕಥಾಹಂದರವುಳ್ಳ ಸಿನಿಮಾ ‘ತಾರಿಣಿ’ ಮಾ. 29ಕ್ಕೆ ತೆರೆ ಕಾಣುತ್ತಿದೆ. ಈಗಾಗಲೇ ಹಲವು ಚಲನ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಪಡೆದಿರುವ ಈ ಚಿತ್ರದಲ್ಲಿ ನಟಿ ಮಮತಾ ರಾಹುತ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ನಿಜ ಜೀವನದಲ್ಲಿ ಗರ್ಭಿಣಿಯಾಗಿದ್ದಾಗಲೇ ಈ ಸಿನಿಮಾದಲ್ಲೂ ಅವರು ಗರ್ಭಿಣಿ ಪಾತ್ರ ಮಾಡಿರುವುದು ವಿಶೇಷ. ಇದೊಂದು ನೈಜ ಘಟನೆ ಆಧರಿತ ಚಿತ್ರವಾಗಿದ್ದು, ಸಿದ್ದು ಪೂರ್ಣಚಂದ್ರ ನಿರ್ದೇಶಕರು. ಡಾ. ಸುರೇಶ್ ಕೋಟ್ಯಾನ್ ಚಿತ್ರಾಪು ಈ ಸಿನಿಮಾ ನಿರ್ಮಿಸಿದ್ದಾರೆ. ರೋಹಿತ್, ಭವಾನಿ ಪ್ರಕಾಶ್, ಸುಧಾ ಪ್ರಸನ್ನ, ಡಾ. ಸುರೇಶ್ ಚಿತ್ರಾಪು, ಪ್ರಮಿಳಾ ಸುಬ್ರಹ್ಮಣ್ಯಂ, ವಿಜಯಲಕ್ಷ್ಮೀ, ಬೇಬಿ ನಿಶಿತಾ, ಬೇಬಿ ರಿಧಿ, ಪ್ರಿನ್ಸ್ ಜಿತಿನ್ ಕೋಟ್ಯಾನ್ ನಟಿಸಿದ್ದಾರೆ.