ಫ್ಯೂಜನ್‌ ಸೀರೆಯ ಕಲರ್‌ಫುಲ್‌ ವೈಬ್‌ - ವಾರ್ಡ್‌ರೋಬ್‌ನಲ್ಲಿ ಚಿತ್ರ ವಿಚಿತ್ರ ಕಾಂಬಿನೇಶನ್‌

Published : Oct 24, 2025, 01:32 PM IST
5 Blazer Saree fusion Style for office wear

ಸಾರಾಂಶ

ಸೀರೆಗೆ ಮ್ಯಾಚಿಂಗ್‌ ಬ್ಲೌಸ್‌ ಹಾಕೋದಾ, ಕಾಂಟ್ರಾಸ್ಟ್‌ ಕಲರ್‌ ಟ್ರೈ ಮಾಡೋದು ಅನ್ನೋದು ಸೀರೆ ಉಡೋ ನೀರೆಯರ ತಲೆ ಸಿಡಿಸುವ ಪ್ರಶ್ನೆ. ಇವರ ಸಮಸ್ಯೆಗೆ ಬಾಲಿವುಡ್‌ ಸೆಲೆಬ್ರಿಟಿಗಳು ಚೆಂದದ ಪರಿಹಾರ ಕೊಟ್ಟಿದ್ದಾರೆ.

 ಸೀರೆಗೆ ಮ್ಯಾಚಿಂಗ್‌ ಬ್ಲೌಸ್‌ ಹಾಕೋದಾ, ಕಾಂಟ್ರಾಸ್ಟ್‌ ಕಲರ್‌ ಟ್ರೈ ಮಾಡೋದು ಅನ್ನೋದು ಸೀರೆ ಉಡೋ ನೀರೆಯರ ತಲೆ ಸಿಡಿಸುವ ಪ್ರಶ್ನೆ. ಇವರ ಸಮಸ್ಯೆಗೆ ಬಾಲಿವುಡ್‌ ಸೆಲೆಬ್ರಿಟಿಗಳು ಚೆಂದದ ಪರಿಹಾರ ಕೊಟ್ಟಿದ್ದಾರೆ.

ಸೀರೆಗೂ ಬ್ಲೌಸ್‌ಗೂ ಸಂಬಂಧ ಕಲ್ಪಿಸಬೇಡಿ ಅನ್ನುತ್ತಲೇ ಫ್ಯೂಜನ್‌ ಸ್ಟೈಲ್‌ನ ಮೊರೆ ಹೋಗಿದ್ದಾರೆ. ಬಿಡಿಬಿಡಿಯಾಗಿ ನೋಡಿದರೆ ಈ ಸೀರೆಗೂ, ಬ್ಲೌಸ್‌ಗೂ ತಾಳಮೇಳ ಸರಿಹೋಗುತ್ತಿಲ್ಲವಲ್ಲ ಅನಿಸುತ್ತೆ, ಅದೇ ನೀಳಕಾಯದ ಚೆಲುವೆಯೊಬ್ಬಳು ನೀಟಾಗಿ ನೆರಿಗೆ ಹಿಡಿದು ಭಿನ್ನ ಕಾಂಬಿನೇಶನ್‌ನ ಸೀರೆ ಬ್ಲೌಸ್‌ ಉಟ್ಟುಕೊಂಡು ನಿಂತರೆ, ‘ಅರೆ! ಎಂಥಾ ಲುಕ್‌’ ಅಂತ ಅಯಾಚಿತವಾಗಿ ಹುಡುಗ ಶಿಳ್ಳೆ ಹೊಡೆಯಬೇಕು, ಅಂಥಾ ಚೆಂದ ಈ ಸ್ಟೈಲಿಗೆ..

ತಾನಾಯ್ತು, ತನ್ನ ಸಂಸಾರ ಆಯ್ತು ಅಂದಿದ್ದ ಚೆಲುವೆ ಸೋನಂ ಇದ್ದಕ್ಕಿದ್ದಂತೆ ಈ ಫ್ಯೂಜನ್‌ ಸ್ಟೈಲ್‌ನಲ್ಲಿ ಕಾಣಿಸಿಕೊಂಡದ್ದೇ ಹಲವರು ಈ ಸ್ಟೈಲಿಗೆ ಫಿದಾ ಆಗಿದ್ದಾರೆ. ಓವರ್‌ ಕೋಟ್‌ ಮೇಲೆ ಕಲಾತ್ಮಕ ಸೀರೆ ಈ ಚೆಲುವೆ ಜೊತೆ ಕಾಂಪಿಟಿಶನ್‌ಗೆ ನಿಂತಂತಿದೆ ಅನ್ನೋ ಕಾಮೆಂಟ್‌ಗಳು ಬರ್ತಿವೆ. ‘ಸ್ತ್ರೀ 2’ ಚೆಲುವೆ ಶ್ರದ್ಧಾ ಕಪೂರ್‌ ಕೂಡ ಸೊಗಸಾದ ಫ್ಯೂಜನ್‌ ಸೀರೆಯಲ್ಲಿ ಫ್ಯಾನ್ಸ್‌ ಮನ ಗೆದ್ದಿದ್ದಾರೆ. ಕಪ್ಪು ಬಣ್ಣದ ಕೋಟಿನಂಥಾ ಟಾಪ್‌ ಮೇಲೆ ಕೆಂಪು ಬಣ್ಣದ ಸೀರೆ ಶಾನೆ ಪಸಂದಾಗಿ ಕಣ್ಮನ ಸೆಳೆದಿದೆ.

ಒಟ್ಟಿನಲ್ಲಿ ಸದಾ ಹೊಸ ಸ್ಟೈಲಿನ ತುಡಿತದಲ್ಲಿರುವ ಅರಳು ಕಂಗಳ ಚೆಲುವೆಯರಿಗೆ ಹೇಳಿ ಮಾಡಿಸಿದ ಉಡುಗೆ ಇದು.

PREV
Read more Articles on

Recommended Stories

2025ರಲ್ಲಿ ಅತಿ ಹೆಚ್ಚು ಗಳಿಕೆ ದಾಖಲಿಸಿದ ಭಾರತೀಯ ಸಿನಿಮಾ
ಕೆಜಿಎಫ್‌ ಬರವಣಿಗೆ ವೇಳೆ ದಿಲ್‌ಮಾರ್‌ ಹೊಳೆಯಿತು : ನಿರ್ದೇಶಕ ಚಂದ್ರಮೌಳಿ