)
ಆರ್. ಕೇಶವಮೂರ್ತಿ
ಕೃಷ್ಣಂ ಪ್ರಣಯ ಸಖಿ ಚಿತ್ರದ ಯಶಸ್ಸಿನಲ್ಲಿ ಸೈಲೆಂಟ್ ಆಗಿಬಿಟ್ಟಿದ್ದೀರಲ್ಲ?
ಅಯ್ಯೋ ಎಲ್ಲಿ ಸೈಲೆಂಟ್ ಆಗಿದ್ದೇನೆ! ಹೊಸ ಚಿತ್ರದ್ದು 12 ದಿನಗಳ ಶೂಟಿಂಗ್ ಮುಗಿಸಿದ್ದೇನೆ. ಮತ್ತೊಂದು ಶೆಡ್ಯೂಲ್ ಚಿತ್ರೀಕರಣಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೇನೆ.ಯಾವ ಚಿತ್ರದ ಶೂಟಿಂಗ್‌ನಲ್ಲಿದ್ದೀರಿ?
ರೆಟ್ರೂ ರೀತಿ ಸಿನಿಮಾ ಅಲ್ವಾ, ಯಾವ ರೀತಿ ಇರುತ್ತದೆ ಸಿನಿಮಾ?
ರಮೇಶ್ ಅರವಿಂದ್ ಅವರ ಜತೆಗಿನ ನಿಮ್ಮ ಕೆಲಸ ಹೇಗಿದೆ?
ಕೃಷ್ಣಂ ಪ್ರಣಯ ಸಖಿ ಚಿತ್ರದ ಯಶಸ್ಸಿನ ಬಗ್ಗೆ ಏನು ಹೇಳುತ್ತೀರಿ?
ಕೃಷ್ಣಂ ಪ್ರಣಯ ಸಖಿ ಚಿತ್ರದ ಪಾರ್ಟ್ 2 ಬರಲಿದೆಯೇ?
ನಿಮ್ಮ ಸಿನಿಮಾ ಮತ್ತೆ ಯಾವಾಗ ಪ್ರೇಕ್ಷಕರ ಮುಂದೆ?
ಕತೆಗಳ ಆಯ್ಕೆಯಲ್ಲಿ ಏನಾದರೂ ಬದಲಾವಣೆ ಮಾಡಿಕೊಂಡಿದ್ದೀರಾ?
ಹಾಗೇನು ಇಲ್ಲ. ಕಲಾವಿದನಾಗಿ ಎಲ್ಲಾ ರೀತಿಯ ಕತೆಗಳನ್ನು ಕೇಳಬೇಕು. ಯಾವ ಕತೆ ಗೆಲ್ಲುತ್ತದೆ ಎಂಬುದು ಮೊದಲೇ ಗೊತ್ತಾಗಲ್ಲ. ನನ್ನ ಪ್ರಕಾರ ಒಳ್ಳೆಯ ಸಿನಿಮಾ ಅಥವಾ ಕತೆ ಎಂದರೆ ಕಲಾವಿದನನ್ನು ತೃಪ್ತಿ ಪಡಿಸಬೇಕು, ಪ್ರೇಕ್ಷಕನನ್ನು ಚಿತ್ರಮಂದಿರಕ್ಕೆ ಕರೆಸಿ ಎಂಗೇಜ್ ಮಾಡಿಸಬೇಕು, ನಿರ್ಮಾಪಕನಿಗೆ ಕಾಸು ಬರಬೇಕು.ಈಗ ಚಿತ್ರ ಮಾಡುವುದಕ್ಕಿರುವ ಅನುಕೂಲತೆಗಳೇನು?
ಭಾಷೆಯ ಬೇಲಿ ಇಲ್ಲ. ಕತೆಗಳಿಗೆ, ಕಲಾವಿದರಿಗೆ ಯಾವ ಬೌಂಡರಿಯೂ ಇಲ್ಲ. ಒಳ್ಳೆಯ ಸಿನಿಮಾ ಮಾಡಿದರೆ ಯಾವುದೇ ಭಾಷೆಯ ಪ್ರೇಕ್ಷಕರನ್ನೂ ಬೇಕಾದರೂ ತಲುಪಬಹುದು.ಇತ್ತೀಚೆಗೆ ನೀವು ನೋಡಿದ ಸಿನಿಮಾಗಳು ಯಾವುವು?
ಶೂಟಿಂಗ್ ಒತ್ತಡದಲ್ಲಿ ನೋಡಕ್ಕೆ ಆಗುತ್ತಿಲ್ಲ. ನೋಡಿದರೂ ಪೂರ್ತಿ ನೋಡುತ್ತಿಲ್ಲ. ಹೆಚ್ಚು ಹೆಚ್ಚು ಪುಸ್ತಕ ಓದುತ್ತಿದ್ದೇನೆ. ನನ್ನ ಓದು ಕತೆಗಳನ್ನು ಕೇಳಕ್ಕೆ, ನನ್ನ ಪಾತ್ರಗಳನ್ನು ಡಿಸೈನ್ ಮಾಡಿಕೊಳ್ಳುವುದಕ್ಕೆ ಅನುಕೂಲ ಆಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಾಲೆಡ್ಜ್‌ಗಾಗಿ ಓದುತ್ತಿದ್ದೇನೆ.ತುಳು ಚಿತ್ರ ನಿರ್ಮಾಣ ಮಾಡುತ್ತಿದ್ದೀರಲ್ಲ?
ಹೌದು. ಅದರ ಎಲ್ಲಾ ಜವಾಬ್ದಾರಿ ನನ್ನ ಪತ್ನಿ ಶಿಲ್ಪಾ ಅವರದ್ದು. ಅವರೇ ಆ ಚಿತ್ರಕ್ಕೆ ನಿರ್ಮಾಪಕರು. ಈಗ ಸ್ಕ್ರಿಪ್ಟ್ ಫೈನಲ್ ಆಗಿದೆ. ಮಂಗಳೂರಿನ ಹೊಸ ಪ್ರತಿಭೆ ನಿತ್ಯ ಪ್ರಕಾಶ್ ಎಂಬುವವರನ್ನು ಈ ಚಿತ್ರದ ಮೂಲಕ ಪರಿಚಯಿಸುತ್ತಿದ್ದೇವೆ.ತುಳು ಚಿತ್ರ ನಿರ್ಮಾಣ ಮಾಡೋ ಐಡಿಯಾ ನಿಮ್ಮದಾ ಅಥವಾ ಮನೆಯವರದ್ದಾ?
ಈ ಯೋಚನೆ ಶಿಲ್ಪಾ ಅವರದ್ದೇ. ಅವರ ಮಾತೃ ಭಾಷೆ ತುಳು. ನಮ್ಮ ಮಾತೃ ಭಾಷೆಯಲ್ಲೊಂದು ಚಿತ್ರ ನಿರ್ಮಿಸಬೇಕು ಎಂದು ಕೇಳಿದರು. ನಾನು ಮಾಡು ಅಂತ ಹೇಳಿದೆ. ನನಗೂ ಖುಷಿ ಆಗಿದೆ. ಗೋಲ್ಡನ್ ಮೂವೀಸ್ ಮೂಲಕ ಚಿತ್ರ ನಿರ್ಮಿಸುತ್ತಿದ್ದೇವೆ. ಕತೆ ಕೇಳಿದ್ದಾರೆ. ಎಕ್ಸೈಟ್ ಆಗಿದ್ದಾರೆ. ಫನ್ ಆಂಡ್ ಎಮೋಷನ್ ಇರುವ ಕತೆ.