ಸಿನಿವಾರ್ತೆ

ಯಶ್‌ ‘ಟಾಕ್ಸಿಕ್‌’ ಚಿತ್ರದ ಟ್ರೇಲರ್‌ ಆ.8ಕ್ಕೆ ಬಿಡುಗಡೆ ಆಗುತ್ತಿದೆ. ಚಿತ್ರತಂಡ ಅಧಿಕೃತವಾಗಿ ಟ್ರೇಲರ್‌ ಬಿಡುಗಡೆ ದಿನಾಂಕ ಘೋಷಿಸಿದೆ.

ಸಿನಿಮಾ ಕುರಿತು ಯಶ್, ‘1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂತು. ಆದರೆ, ಭಾರತದ ಗೋವಾ ರಾಜ್ಯ 1961ರ ವರೆಗೂ ಪೋರ್ಚುಗೀಸರ ನಿಯಂತ್ರಣದಲ್ಲೇ ಇತ್ತು. ‘ಟಾಕ್ಸಿಕ್‌’ ಸಿನಿಮಾದ ಕತೆಯನ್ನು ಈ ಹಿನ್ನೆಲೆಯಲ್ಲಿ ಹೇಳಲಾಗಿದೆ. 

 ಪೋರ್ಚುಗೀಸರು ಮತ್ತು ಭಾರತೀಯರ ನಡುವೆ ಪವರ್‌ಗಾಗಿ ಸಂಘರ್ಷಗಳು ನಡೆಯುತ್ತಿದ್ದವು. ಗ್ಯಾಂಗ್‌ಸ್ಟರ್‌ಗಳು, ಗನ್‌, ಆ್ಯಕ್ಷನ್‌ ಹೀಗೆ ತುಂಬಾ ತಿರುವುಗಳಿರುವ ಅಂಶಗಳು ಚಿತ್ರದಲ್ಲಿವೆ. ಗಾಢವಾದ ಪ್ರೇಮ ಕತೆಯ ಜೊತೆಗೆ ಬ್ರದರ್‌, ಸಿಸ್ಟರ್‌ ಸೆಂಟಿಮೆಂಟ್‌ ಇದೆ. ಇದರ ಜೊತೆಗೆ ಅಪ್ಪ-ಮಗನ ರಿವೇಂಜ್‌ ಸ್ಟೋರಿಯನ್ನೂ ಕೂಡ ನೋಡಬಹುದು’ ಎಂದಿದ್ದಾರೆ.


ಆ.26ರಂದು ಸಿನಿಮಾ ರಿಲೀಸ್ ಆಗುತ್ತಿದೆ.