ಡೆವಿಲ್‌ ಟ್ರೇಲರ್‌ಗೆ ಅದ್ದೂರಿ ವೆಲ್‌ಕಮ್‌, ಕೆಲವೇ ಗಂಟೆಗಳಲ್ಲಿ 3 ಮಿಲಿಯನ್‌ ವೀಕ್ಷಣೆ

Published : Dec 06, 2025, 12:50 PM IST
actor darshan

ಸಾರಾಂಶ

ದರ್ಶನ್‌ ನಟನೆಯ ‘ಡೆವಿಲ್‌’ ಚಿತ್ರದ ಟ್ರೇಲರ್‌ಗೆ ಅದ್ದೂರಿ ವೆಲ್‌ಕಮ್‌ ದೊರೆತಿದೆ. ಕೆಲವೇ ಗಂಟೆಗಳಲ್ಲಿ ಟ್ರೇಲರ್‌ ಮೂರು ಮಿಲಿಯನ್‌ ವೀಕ್ಷಣೆ ಕಂಡಿದೆ.  ದರ್ಶನ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿರುವ, ಪವರ್‌ಫುಲ್‌ ಡೈಲಾಗ್‌ಗಳಿಂದ ತುಂಬಿರುವ ಚಿತ್ರದ ಟ್ರೇಲರನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

 ಸಿನಿವಾರ್ತೆ

ದರ್ಶನ್‌ ನಟನೆಯ ‘ಡೆವಿಲ್‌’ ಚಿತ್ರದ ಟ್ರೇಲರ್‌ಗೆ ಅದ್ದೂರಿ ವೆಲ್‌ಕಮ್‌ ದೊರೆತಿದೆ. ಕೆಲವೇ ಗಂಟೆಗಳಲ್ಲಿ ಟ್ರೇಲರ್‌ ಮೂರು ಮಿಲಿಯನ್‌ ವೀಕ್ಷಣೆ ಕಂಡಿದೆ.

ಪವರ್‌ಫುಲ್‌ ಡೈಲಾಗ್‌ಗಳಿಂದ ತುಂಬಿರುವ ಚಿತ್ರ

ದರ್ಶನ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿರುವ, ಪವರ್‌ಫುಲ್‌ ಡೈಲಾಗ್‌ಗಳಿಂದ ತುಂಬಿರುವ ಚಿತ್ರದ ಟ್ರೇಲರನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ‘ಸೂರ್ಯಂಗೆ ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ, ನಾನು ಬರ್ತಿದೀನಿ ಚಿನ್ನ’, ‘ಲುಕ್‌ನಲ್ಲಿ ಹೀರೋನೇ.. ಕಿಕ್‌ನಲ್ಲಿದ್ದರೆ ಫುಲ್ ಆನ್ ಡೆವಿಲ್’ ಎಂಬ ಸಂಭಾಷಣೆಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಸಿನಿಮಾ ರಿಲೀಸ್‌ (ಡಿ.11) ಗೆ ಕ್ಷಣಗಣನೆ

ಸಿನಿಮಾ ರಿಲೀಸ್‌ (ಡಿ.11) ಗೆ ಕ್ಷಣಗಣನೆ ಆರಂಭವಾಗಿದ್ದು, ಇದೀಗ ವಿಲನ್ ಶೇಡ್​​ನಲ್ಲಿ, ಪ್ಲೇ ಬಾಯ್ ಆಗಿ, ರೊಮ್ಯಾಂಟಿಕ್ ಆಗಿ ಹಲವು ರೀತಿ ಕಾಣಿಸಿಕೊಂಡಿರುವ ದರ್ಶನ್‌ ಪಾತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಜೊತೆಗೆ ಗಿಲ್ಲಿ ನಟನ ಪಾತ್ರವೂ ಹೈಲೈಟ್‌ ಆಗಿದೆ.

ಅಚ್ಯುತ್‌ ಕುಮಾರ್‌, ಮಹೇಶ್ ಮಂಜ್ರೇಕರ್, ರಚನಾ ರೈ, ಶರ್ಮಿಳಾ ಮಾಂಡ್ರೆ, ಅಚ್ಯುತ್ ಕುಮಾರ್, ವಿನಯ್ ಗೌಡ, ಚಂದು ಸೇರಿದಂತೆ ದೊಡ್ಡ ತಾರಾಗಣವಿರುವುದು ರಿವೀಲ್‌ ಆಗಿದೆ. ಪ್ರಕಾಶ್‌ ವೀರ್‌ ಈ ಸಿನಿಮಾ ನಿರ್ದೇಶಿಸಿ, ನಿರ್ಮಿಸಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಈ ಸಲದ ಚಿತ್ರೋತ್ಸವಕ್ಕೆ 2 ಲಕ್ಷ ಮಂದಿ ಬರುತ್ತಾರೆ: ಸಾಧು ಕೋಕಿಲ
ಕನ್ನಡಕ್ಕೆ ಹೊಸತನದ ಕತೆ ಕೊಟ್ಟ ಲ್ಯಾಂಡ್‌ಲಾರ್ಡ್‌