ಮಹಾವತಾರ್ ಸೀರೀಸ್‌ನಲ್ಲಿ 7 ಸಿನಿಮಾ ಘೋಷಿಸಿದ ಹೊಂಬಾಳೆ ಫಿಲಂಸ್

Published : Jun 26, 2025, 11:27 AM IST
Film Theater

ಸಾರಾಂಶ

‘ಮಹಾವತಾರ ನರಸಿಂಹ’, ‘ಮಹಾವತಾರ ಪರಶುರಾಮ’, ‘ಮಹಾವತಾರ ರಘುನಂದನ್’, ‘ಮಹಾವತಾರ ದ್ವಾರಕಾಧೀಶ’, ‘ಮಹಾವತಾರ ಗೋಕುಲಾನಂದ’, ‘ಮಹಾವತಾರ ಕಲ್ಕಿ ಭಾಗ 1’ ಹಾಗೂ ‘ಮಹಾವತಾರ ಕಲ್ಕಿ ಭಾಗ 2’ ಈ ಸೀರೀಸ್‌ನ ಚಿತ್ರಗಳು.

‘ಮಹಾವತಾರ ನರಸಿಂಹ’, ‘ಮಹಾವತಾರ ಪರಶುರಾಮ’, ‘ಮಹಾವತಾರ ರಘುನಂದನ್’, ‘ಮಹಾವತಾರ ದ್ವಾರಕಾಧೀಶ’, ‘ಮಹಾವತಾರ ಗೋಕುಲಾನಂದ’, ‘ಮಹಾವತಾರ ಕಲ್ಕಿ ಭಾಗ 1’ ಹಾಗೂ ‘ಮಹಾವತಾರ ಕಲ್ಕಿ ಭಾಗ 2’ ಈ ಸೀರೀಸ್‌ನ ಚಿತ್ರಗಳು.

ವಿಶೇಷ ಅಂದರೆ ಈ ಸಿನಿಮಾಗಳ ಹೆಸರು ಹೆಸರು ಘೋಷಿಸುವುದರ ಜೊತೆಗೆ ಸಿನಿಮಾ ಬಿಡುಗಡೆ ದಿನಾಂಕವನ್ನೂ ಹೊಂಬಾಳೆ ಫಿಲಂಸ್‌ ಪ್ರಕಟಿಸಿದೆ.

ಈ ಸರಣಿಯ ಮೊದಲ ಸಿನಿಮಾ ‘ಮಹಾವತಾರ ನರಸಿಂಹ’ ಜು. 25ಕ್ಕೆ 3ಡಿಯಲ್ಲಿ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕೊನೆಯ ಸಿನಿಮಾ ‘ಮಹಾವತಾರ ಕಲ್ಕಿ ಭಾಗ 2’ ಇನ್ನೂ 12 ವರ್ಷ ನಂತರ ಅಂದರೆ 2037ಕ್ಕೆ ಬಿಡುಗಡೆಯಾಗಲಿದೆ. ಅಲ್ಲಿಯವರೆಗೆ ಪ್ರತೀ ಎರಡು ವರ್ಷಗಳಿಗೊಮ್ಮೆ ಈ ಸೀರೀಸ್‌ನ ಸಿನಿಮಾಗಳು ತೆರೆ ಕಾಣಲಿವೆ.

ಎಲ್ಲ ಸಿನಿಮಾಗಳೂ ವಿಷ್ಣುವಿನ ವಿವಿಧ ಅವತಾರಗಳನ್ನು ಆಧರಿಸಿರುವುದು ವಿಶೇಷ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಈ ಸರಣಿಗಳ ನಿರ್ದೇಶಕ ಅಶ್ವಿನ್ ಕುಮಾರ್, ‘ ಭಾರತದ ಪರಂಪರೆಯನ್ನು ಹಿಂದೆಂದೂ ನೋಡಿರದ ಸಿನಿಮಾಟಿಕ್ ಜರ್ನಿ ಮೂಲಕ ಹಿರಿತೆರೆಗೆ ತರುತ್ತಿದ್ದೇವೆ. ಮಹಾವತಾರ ಯೂನಿವರ್ಸ್ ಮೂಲಕ ಅಲೌಕಿಕ ಅನುಭವ ಪ್ರಾರಂಭವಾಗುತ್ತದೆ. ಈಗ ಭಾರತ ಘರ್ಜಿಸಲಿದೆ!’ ಎಂದು ಹೇಳಿದ್ದಾರೆ.

‘ಅನಿಮೇಶನ್‌ ತಂತ್ರಜ್ಞಾನದಲ್ಲಿ ಈ ಸಿನಿಮಾಗಳು ನಿರ್ಮಾಣಗೊಳ್ಳುತ್ತಿದ್ದು, ಇವು ಕಾಮಿಕ್ಸ್, ವಿಡಿಯೋ ಗೇಮ್‌ಗಳು, ಡಿಜಿಟಲ್ ಸ್ಟೋರಿ ಟೆಲ್ಲಿಂಗ್‌ ಮೊದಲಾದ ಪ್ಲಾಟ್‌ಫಾರ್ಮ್‌ಗಳಲ್ಲೂ ಕಾಣಿಸಿಕೊಳ್ಳಲಿವೆ’ ಎಂದು ಹೊಂಬಾಳೆ ಫಿಲಂಸ್‌ ತಿಳಿಸಿದೆ.

ಹೊಂಬಾಳೆ ಫಿಲಂಸ್‌ ಪ್ರಸ್ತುತಪಡಿಸುವ ಈ ಸಿನಿಮಾವನ್ನು ಶಿಲ್ಪಾ ಧವನ್, ಕುಶಾಲ್ ದೇಸಾಯಿ ಮತ್ತು ಚೈತನ್ಯ ದೇಸಾಯಿ ನಿರ್ಮಿಸುತ್ತಿದ್ದಾರೆ.

PREV
Read more Articles on