ಚಿತ್ರರಂಗ ಬೆಳಗುವ ಐಡಿಯಾಗಳು: ಖ್ಯಾತ ನಿರ್ದೇಶಕರು ನೀಡಿದ ಗೆಲುವಿನ ಸೂತ್ರ

Follow Us

ಸಾರಾಂಶ

ಚಿತ್ರರಂಗ ಸೋಲುತ್ತಿದೆ. ಸೋಲುಗಳಿಂದ ಕಂಗೆಟ್ಟಿದೆ. ಪರಿಹಾರ ಕಾಣದೇ ಇದ್ದರೆ ಮತ್ತಷ್ಟು ಬಸವಳಿಯಲಿದೆ. ಈ ನಿಟ್ಟಿನಲ್ಲಿ ಚಿತ್ರರಂಗವನ್ನು ಮತ್ತೆ ಗೆಲುವಿನ ಪಥದಲ್ಲಿ ಕರೆದೊಯ್ಯಲು ಬೇಕಾಗುವ ಕೆಲವು ಐಡಿಯಾಗಳನ್ನು ಖ್ಯಾತ ನಿರ್ದೇಶಕರು ನೀಡಿದ್ದಾರೆ.

ಚಿತ್ರರಂಗ ಸೋಲುತ್ತಿದೆ. ಸೋಲುಗಳಿಂದ ಕಂಗೆಟ್ಟಿದೆ. ಪರಿಹಾರ ಕಾಣದೇ ಇದ್ದರೆ ಮತ್ತಷ್ಟು ಬಸವಳಿಯಲಿದೆ. ಈ ನಿಟ್ಟಿನಲ್ಲಿ ಚಿತ್ರರಂಗವನ್ನು ಮತ್ತೆ ಗೆಲುವಿನ ಪಥದಲ್ಲಿ ಕರೆದೊಯ್ಯಲು ಬೇಕಾಗುವ ಕೆಲವು ಐಡಿಯಾಗಳನ್ನು ಖ್ಯಾತ ನಿರ್ದೇಶಕರು ನೀಡಿದ್ದಾರೆ.

ಒಂದು ವರ್ಷದವರೆಗೂ ಥಿಯೇಟರ್‌ ಬಿಟ್ಟು ಬೇರೆ ಕಡೆ ಸಿನಿಮಾ ಸಿಗಬಾರದು

- ಕೆ.ಎಂ. ಚೈತನ್ಯ

1. ನಿರ್ಮಾಪಕರು ಅಥವಾ ಸರ್ಕಾರ ಧೈರ್ಯ ಮಾಡಿ ಒಂದು ಹೊಸ ರೂಲ್ಸ್‌ ತರಬೇಕಿದೆ. ಆ ರೂಲ್ಸ್‌ ಪ್ರಕಾರ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಗೊಂಡ ಒಂದು ವರ್ಷದ ತನಕ ಬೇರೆ ಎಲ್ಲೂ ಚಿತ್ರ ನೋಡಲು ಸಿಗಬಾರದು. ಅಂದರೆ ಓಟಿಟಿ, ಟೀವಿ ಸೇರಿದಂತೆ ಯಾವುದೇ ಡಿಜಿಟಲ್‌ ಪ್ಲಾಟ್‌ಫಾರಂಗಳಲ್ಲಿ ಸಿನಿಮಾ ನೋಡಲು ಸಿಗಬಾರದು. ಕೇವಲ ಚಿತ್ರಮಂದಿರಗಳಿಗೇ ಬಂದು ಚಿತ್ರ ನೋಡಬೇಕು.

2. 50 ರಿಂದ 100 ಸೀಟುಗಳನ್ನು ಒಳಗೊಂಡ ಜನತಾ ಟಾಕೀಸ್‌ಗಳನ್ನು ನಿರ್ಮಾಣ ಮಾಡಬೇಕು. ಈ ಚಿತ್ರಮಂದಿರಗಳು ಕನ್ನಡ ಸಿನಿಮಾಗಳ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿರಬೇಕು. ಈ ಜನತಾ ಚಿತ್ರಮಂದಿರಗಳಲ್ಲಿ ಸಣ್ಣ ಸಣ್ಣ ಮಳಿಗೆಗಳೂ ಇರಬೇಕು. ಕೈಗೆಟುಕುವ ಬೆಲೆಯಲ್ಲಿ ಈ ಮಳಿಗೆಗಳಲ್ಲಿ ಆಹಾರ ಪದಾರ್ಥಗಳು ಸಿಗಬೇಕು. ಸರ್ಕಾರವೇ ಅವುಗಳನ್ನು ನಡೆಸುವಂತಿರಬೇಕು.

3. ಬಾಹುಬಲಿಯಂತಹ ಅದ್ದೂರಿ ಚಿತ್ರಗಳಿಗೆ ಮಾತ್ರ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ. ಲಾರ್ಜರ್‌ ದ್ಯಾನ್‌ ಲೈಫ್‌ ಚಿತ್ರಗಳನ್ನು ದೊಡ್ಡ ಪರದೆಯಲ್ಲಿ ನೋಡಬೇಕು ಎಂದುಕೊಳ್ಳುವ ಪ್ರೇಕ್ಷಕರೇ ಈಗ ಇರೋದು. ಇದು ತಪ್ಪಲ್ಲ. ಆದರೆ, ಕಂಟೆಂಟ್‌ ಚೆನ್ನಾಗಿರುವ ದೇಸಿ ಸೊಗಡಿನ ಚಿತ್ರಗಳನ್ನೂ ಥಿಯೇಟರ್‌ಗಳಲ್ಲಿ ನೋಡಬೇಕು.

4. ಈಗಿನ ಪರಿಸ್ಥಿತಿಯಲ್ಲಿ ದುಡ್ಡು ಹಾಕಿ ಸಿನಿಮಾ ಮಾಡುತ್ತಿರುವುದು ಚಿತ್ರರಂಗ ಮಾಡುತ್ತಿರುವ ಬಹು ದೊಡ್ಡ ಸಾಹಸ ಎಂಬುದು ನನ್ನ ಅಭಿಪ್ರಾಯ. ಯಾಕೆಂದರೆ ತಾವು ಹೂಡಿಕೆ ಮಾಡಿದ್ದಕ್ಕೆ ಎಷ್ಟು ಲಾಭ ಬರುತ್ತದೆ ಎನ್ನುವ ಭರವಸೆ ಇಲ್ಲದಿದ್ದರೂ ಸಿನಿಮಾ ಮಾಡುತ್ತಿದ್ದಾರೆ. ಇದಕ್ಕಿಂತ ಇನ್ನೇನು ಮಾಡಕ್ಕೆ ಸಾಧ್ಯ ಎಂಬುದು ನನ್ನ ಪ್ರಶ್ನೆ.