ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್ ನಗರದಲ್ಲಿರುವ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಭಾರತ 1967ರಿಂದಲೂ ಟೆಸ್ಟ್ ಕ್ರಿಕೆಟ್ ಆಡುತ್ತಿದೆ. ಆದರೆ ಇಲ್ಲಿ ಟೀಂ ಇಂಡಿಯಾ ಚೊಚ್ಚಲ ಗೆಲುವು ದಾಖಲಿಸಲು ಬರೋಬ್ಬರಿ 58 ವರ್ಷ ಕಾಯಬೇಕಾಯಿತು. ಭಾನುವಾರ ಕೊನೆಗೊಂಡ ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್‌ನಲ್ಲಿ ಭಾರತ 00 ರನ್ ಬೃಹತ್ ಗೆಲುವು ದಾಖಲಿಸಿತು. ಇದರೊಂದಿಗೆ ಶುಭ್‌ಮನ್ ಗಿಲ್ ಪಡೆ 5 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿತು.
ರನ್ ಮಳೆಯೇ ಹರಿದ ಈ ಪಂದ್ಯದಲ್ಲಿ ಗೆಲ್ಲಲು ಇಂಗ್ಲೆಂಡ್‌ಗೆ ಲಭಿಸಿದ್ದು ಬರೋಬ್ಬರಿ 608 ರನ್ ಗುರಿ. ಒಂದು ವೇಳೆ ತಂಡ ಚೇಸ್ ಮಾಡಿದ್ದರೆ ಟೆಸ್ಟ್ ಕ್ರಿಕೆಟ್‌ನಲ್ಲೇ ಹೊಸ ಇತಿಹಾಸ ಸೃಷ್ಟಿಯಾಗುತ್ತಿತ್ತು. ಆದರೆ 4ನೇ ದಿನವೇ 72 ರನ್‌ಗೆ 3 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್‌ಗೆ ಕೊನೆ ದಿನ ಜಾದೂ ಮಾಡಲು ಸಾಧ್ಯವಾಗಲಿಲ್ಲ. ಭಾನುವಾರ ಇಂಗ್ಲೆಂಡ್‌ಗೆ 536 ರನ್ ಗಳಿಸಬೇಕಿದ್ದರೆ, ಭಾರತಕ್ಕೆ ಗೆಲ್ಲಲು 7 ವಿಕೆಟ್ ಅಗತ್ಯವಿತ್ತು. ಇದರಲ್ಲಿ ಭಾರತ ಮೇಲುಗೈ ಸಾಧಿಸಿತು.
ಮಳೆ ಅಡ್ಡಿ: ಮಳೆಯಿಂದಾಗಿ ಕೊನೆ ದಿನ ಒಂದೂವರೆ ಗಂಟೆ ತಡವಾಗಿ ಆರಂಭಗೊಂಡಿತು. ಗರಿಷ್ಠ 80 ಓವರ್ ಆಟ ನಿಗದಿಯಾಗಿತ್ತು. ಮೊದಲ ಅವಧಿಯಲ್ಲೇ ಓಲಿ ಪೋಪ್ ಹಾಗೂ ಹ್ಯಾರಿ ಬ್ರೂಕ್ ವಿಕೆಟ್ ಕಿತ್ತ ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಆ ಬಳಿಕ ಜೆಮೀ ಸ್ಮಿತ್(88) ಹೋರಾಡಿದರೂ, ತಂಡದ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. ಬೆನ್ ಸ್ಟೋಕ್ಸ್ 33, ಬ್ರೈಡನ್ ಕಾರ್ಸ್ 00 ರನ್ ಗಳಿಸಿದರು. ಮಾರಕ ದಾಳಿ ಸಂಘಟಿಸಿದ ಆಕಾಶ್‌ದೀಪ್ 5 ವಿಕೆಟ್ ಗೊಂಚಲು ಪಡೆದರು.
ಸ್ಕೋರ್: ಭಾರತ 587/10 ಮತ್ತು 427/6(ಡಿಕ್ಲೇರ್), ಇಂಗ್ಲೆಂಡ್ 407/10 ಮತ್ತು 0000 (ಜೆಮೀ ಸ್ಮಿತ್ 88, ಸ್ಟೋಕ್ಸ್ 33, ಆಕಾಶ್‌ದೀಪ್ 000, ವಾಷಿಂಗ್ಟನ್ 000)
ಎಜ್‌ಬಾಸ್ಟನ್‌ನಲ್ಲಿ 7ರಲ್ಲಿ
ಸೋಲು, ಮೊದಲ ಜಯ
ಭಾರತ ತಂಡ ಎಜ್‌ಬಾಸ್ಟನ್‌ನಲ್ಲಿ ಈ ವರೆಗೂ ಟೆಸ್ಟ್ ಪಂದ್ಯ ಗೆದ್ದಿರಲಿಲ್ಲ. ಈ ಕಳಪೆ ದಾಖಲೆಯನ್ನು ಭಾರತ ಶುಭ್‌ಮನ್ ಗಿಲ್ ನಾಯಕತ್ವದಲ್ಲಿ ಅಳಿಸಿ ಹಾಕಿದೆ. ತಂಡ ಇಲ್ಲಿವರೆಗೂ ಎಜ್‌ಬಾಸ್ಟನ್‌ನಲ್ಲಿ 9 ಟೆಸ್ಟ್ ಆಡಿದ್ದು, 7ರಲ್ಲಿ ಸೋತಿದ್ದು, ಒಂದರಲ್ಲಿ ಗೆದ್ದಿದೆ. ಮತ್ತೊಂದು ಪಂದ್ಯ ಡ್ರಾಗೊಂಡಿದೆ. ಮತ್ತೊಂದೆಡೆ ಇಂಗ್ಲೆಂಡ್ ಈ ಕ್ರೀಡಾಂಗಣದಲ್ಲಿ ಆಡಿರುವ 57 ಪಂದ್ಯಗಳ ಪೈಕಿ 30ರಲ್ಲಿ ಗೆದ್ದಿದೆ.
ವಿಶ್ವದ 60 ಕ್ರೀಡಾಂಗಣಗಳಲ್ಲಿ
ಗೆದ್ದ ಭಾರತ: ಹೊಸ ದಾಖಲೆ
ಭಾರತ ತಂಡ ತವರು ಹಾಗೂ ವಿಶ್ವದ ವಿವಿಧ ದೇಶಗಳ ಒಟ್ಟು 60 ಕ್ರೀಡಾಂಗಣಗಳಲ್ಲಿ ಟೆಸ್ಟ್ ಪಂದ್ಯ ಗೆದ್ದಿದ್ದು, ಈ ಸಾಧನೆ ಮಾಡಿದ ಮೊದಲ ತಂಡ ಎನಿಸಿಕೊಂಡಿದೆ. ಈ ಪೈಕಿ ಭಾರತ 23 ಕ್ರೀಡಾಂಗಣಗಳಿವೆ. ತಂಡ ಅತಿ ಹೆಚ್ಚು ಪಂದ್ಯ ಗೆದ್ದಿದ್ದು ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ. ಭಾರತದ ಬಳಿಕ ವಿಶ್ವದ ಅತಿ ಹೆಚ್ಚು ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯ ಗೆದ್ದ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವುದು ಆಸ್ಟ್ರೇಲಿಯಾ. ತಂಡ 57 ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯ ಗೆದ್ದಿದೆ. ಇಂಗ್ಲೆಂಡ್ 55, ವೆಸ್ಟ್‌ಇಂಡೀಸ್ 50, ಪಾಕಿಸ್ತಾನ 48, ನ್ಯೂಜಿಲೆಂಡ್ 40, ಶ್ರೀಲಂಕಾ 29 ಕ್ರೀಡಾಂಗಣಗಳಲ್ಲಿ ಕನಿಷ್ಠ 1 ಪಂದ್ಯವಾದರೂ ಗೆದ್ದಿವೆ.
04ನೇ ಬಾರಿ
ಈ ಪಂದ್ಯದಲ್ಲಿ 2 ತಂಡಗಳು ಒಟ್ಟು 30 ಸಿಕ್ಸರ್ ಸಿಡಿಸಿದವು. ಟೆಸ್ಟ್ ಪಂದ್ಯವೊಂದರಲ್ಲಿ 30+ ಸಿಕ್ಸರ್ ದಾಖಲಾಗಿದ್ದು 4ನೇ ಬಾರಿ.
ಭಾರತಕ್ಕೆ 4ನೇಅತಿದೊಡ್ಡ ಗೆಲುವು
ಭಾರತ 336 ರನ್‌ಗಳಿಂದ ಗೆದ್ದಿದ್ದು ಟೆಸ್ಟ್‌ನಲ್ಲಿ ತಂಡದ ರನ್ ಅಂತರದ 4ನೇ ಅತಿ ದೊಡ್ಡ ಗೆಲುವು. ಕಳೆದ ವರ್ಷ ಇಂಗ್ಲೆಂಡ್ ವಿರುದ್ಧವೇ 434 ರನ್‌ಗಳಿಂದ ಗೆದ್ದಿದ್ದು ದಾಖಲೆ. ನ್ಯೂಜಿಲೆಂಡ್ ವಿರುದ್ಧ 372, ದ.ಆಫ್ರಿಕಾ ವಿರುದ್ಧ 337 ರನ್ ಜಯಗಳಿಸಿದೆ.