;Resize=(412,232))
ಸಿನಿವಾರ್ತೆ
ಮಲಯಾಳಂನ ಪ್ರಸಿದ್ಧ ಸಾಹಿತಿ ಎಂ.ಟಿ. ವಾಸುದೇವ ನಾಯರ್ ಅವರ ಕಾದಂಬರಿ ಆಧರಿತ ‘ರಂಡಮೂಳಂ’ ಸಿನಿಮಾಕ್ಕೆ ಮರುಜೀವ ನೀಡಲು ‘ಕಾಂತಾರ’ ಖ್ಯಾತಿಯ ರಿಷಬ್ ಶೆಟ್ಟಿ ಮುಂದಾಗಿದ್ದಾರೆ ಎನ್ನಲಾಗಿದೆ. ಅವರು ಈ ಸಿನಿಮಾವನ್ನು ನಿರ್ದೇಶಿಸುವ ಜೊತೆಗೆ ನಾಯಕನಾಗಿ ನಟನೆಯನ್ನೂ ಮಾಡಲಿದ್ದಾರಂತೆ.
ಈ ಬಗ್ಗೆ ಎಂ.ಟಿ. ವಾಸುದೇವ ನಾಯರ್ ಕುಟುಂಬದವರು ಪ್ರತಿಕ್ರಿಯೆ ನೀಡಿದ್ದು ಆರಂಭಿಕ ಹಂತದ ಮಾತುಕತೆ ನಡೆದಿರುವುದನ್ನು ದೃಢಪಡಿಸಿದ್ದಾರೆ.
ಒಂದೂವರೆ ವರ್ಷದ ಕೆಳಗೆ ಸಾಹಿತಿ ಎಂ.ಟಿ.ವಿ ಅವರೇ ಈ ವಿಚಾರದಲ್ಲಿ ಮುಂದಡಿ ಇಟ್ಟಿದ್ದು, ಅವರೇ ರಿಷಬ್ ಜೊತೆಗೂ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಎಂ.ಟಿ ವಾಸುದೇವ ನಾಯರ್ ಗತಿಸಿದ ಬಳಿಕ ಅವರ ಪುತ್ರಿ ಅಶ್ವಥಿ ಈ ಪ್ರಾಜೆಕ್ಟ್ ಅನ್ನು ಮುಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಏಷ್ಯಾನೆಟ್ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿ, ‘ವಿಶ್ವಮಟ್ಟದಲ್ಲಿ ಈ ಪ್ರಾಜೆಕ್ಟ್‌ನ ಕೆಲಸಗಳು ನಡೆಯುತ್ತಿವೆ’ ಎಂದಿದ್ದರು.
ಶ್ರೀಕುಮಾರ್ ಮೆನನ್ ಈ ಕಾದಂಬರಿಯನ್ನು ಆಧರಿಸಿ ಸಿನಿಮಾ
ಮೊದಲು ನಿರ್ದೇಶಕ ಶ್ರೀಕುಮಾರ್ ಮೆನನ್ ಈ ಕಾದಂಬರಿಯನ್ನು ಆಧರಿಸಿ ಸಿನಿಮಾ ಮಾಡಲು ಮುಂದಾಗಿದ್ದರು. ಆದರೆ ಸರಿಯಾದ ಸಮಯಕ್ಕೆ ಪ್ರಾಜೆಕ್ಟ್ ಟೇಕಾಫ್ ಆಗಿರಲಿಲ್ಲ. ಅದೀಗ ರಿಷಬ್ ಕೈಯಲ್ಲಿ ಅರಳಲು ಸಮಯ ಕೂಡಿಬಂದಂತಿದೆ.
‘ರಂಡಮೂಳಂ’ ಕಾದಂಬರಿ ಮಹಾಭಾರತವನ್ನು ಆಧರಿಸಿದ್ದು, ಭೀಮನ ನಿರೂಪಣೆಯಲ್ಲಿದೆ. ಆತನ ಬದುಕಿನ ನೋಟವೇ ಈ ಕಾದಂಬರಿಯ ಮುಖ್ಯ ತಿರುಳು.