ಯಾರದೋ ತಪ್ಪಿಗೆ ನನ್ನ ಮೇಲೆ ಕೋಪ ಬೇಡ: ಜಗ್ಗೇಶ್

KannadaprabhaNewsNetwork |  
Published : Mar 18, 2024, 01:54 AM IST
ಜಗ್ಗೇಶ್ | Kannada Prabha

ಸಾರಾಂಶ

ರಂಗನಾಯಕ ಚಿತ್ರಕ್ಕಾಗಿ ಪ್ರೇಕ್ಷಕರಲ್ಲಿ ಕ್ಷಮೆ ಕೋರಿದ ಜಗ್ಗೇಶ್. ಮಂತ್ರಾಲಯದಲ್ಲಿ ರಾಯರ ದರ್ಶನದ ಬಳಿಕ ಮನಸ್ಸು ಬಿಚ್ಚಿ ಮಾತನಾಡಿದ ಜಗ್ಗೇಶ್.

ಕನ್ನಡಪ್ರಭ ಸಿನಿವಾರ್ತೆ‘ಇತ್ತೀಚೆಗೆ ಒಂದು ಸಿನಿಮಾ ಮಾಡಿದೆ. ಅದರಿಂದ ಎಲ್ಲರಿಗೂ ನೋವಾಗಿದೆ. ಅದರಲ್ಲಿ ನನ್ನ ತಪ್ಪಿಲ್ಲ. ಅದು ನನ್ನ ಸಿನಿಮಾ ಅಲ್ಲ. ಒಬ್ಬ ನಿರ್ದೇಶಕ ತನ್ನ ಆಸೆಯ ಪ್ರಕಾರ ಸಿನಿಮಾ ಮಾಡಿದ್ದಾನೆ. ಯಾರದೋ ತಪ್ಪಿಗೆ ನನ್ನ ಮೇಲೆ ಕೋಪ ಬೇಡ. ಲೋಪ-ದೋಷಗಳಿಗೆ ಕ್ಷಮೆ ಇರಲಿ’.- ಇದು ಜಗ್ಗೇಶ್ ಹೇಳಿದ ಮಾತುಗಳು. ಮಾರ್ಚ್ 17ರಂದು ಹುಟ್ಟುಹಬ್ಬ ಆಚರಿಸಿಕೊಂಡ ಜಗ್ಗೇಶ್ ಮಂತ್ರಾಲಯಕ್ಕೆ ತೆರಳಿ ರಾಯರ ಆಶೀರ್ವಾದ

ಪಡೆದುಕೊಂಡರು. ಆ ಸಂದರ್ಭದಲ್ಲಿ ಲೈವ್ ಬಂದು ಮನಸಿನ ಮಾತುಗಳನ್ನು ಕೇಳಿದರು.

‘ಹಳ್ಳಿಯಿಂದ ಬಂದವನು ನಾನು. ನೇರ ಮಾತಾಡುತ್ತೇನೆ. ನನ್ನ ಮಾತಿನಿಂದ ಯಾರಿಗಾದರೂ ಹರ್ಟ್ ಆಗಿದ್ದರೆ ದಯವಿಟ್ಟು ಕ್ಷಮಿಸಿ. ಎಲ್ಲರೂ ಎಲ್ಲರಿಗೂ ಒಳ್ಳೆಯದನ್ನು ಬಯಸಿ. ನಾನು ‘ಪ್ರೀಮಿಯರ್ ಪದ್ಮಿನಿ’, ‘ಕಾಳಿದಾಸ ಕನ್ನಡ ಮೇಷ್ಟ್ರು’ ಥರದ ಸಿನಿಮಾ ಮಾಡಿದ್ದೇನೆ. ಇನ್ನೂ ಸುಮಾರು ಸಿನಿಮಾ ಮಾಡುವುದಿದೆ. ‘ರಾಯರ ಸನ್ನಿಧಿಯಲ್ಲಿ ಮನಸ್ಸು ಬಿಚ್ಚಿ ಮಾತನಾಡುತ್ತಿದ್ದೇನೆ, ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ’ ಎಂದು ಮತ್ತೆ ಮತ್ತೆ ಕೇಳಿಕೊಂಡರು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಕಿಚ್ಚನ ವೀರಾವೇಶ ದರ್ಶನ್ ವಿರುದ್ಧ ಅಲ್ಲ, ಪೈರಸಿ ಬಗ್ಗೆ!
ಯುದ್ಧಕ್ಕೆ ಸಿದ್ಧ, ನಾವು ನಮ್ಮ ಮಾತಿಗೆ ಬದ್ಧ : ಸುದೀಪ್‌