ಪಿ.ಕೆ.
- ಆ್ಯಕ್ಟರ್ ಆಗಬೇಕು ಅನ್ನುವ ಆಸೆ ಚಿಕ್ಕ ವಯಸ್ಸಿಂದಲೇ ಇದೆ. ಮನೆಯಲ್ಲಿ ಹೇಳಿದಾಗ ಮೊದಲು ಓದು ಮುಗಿಸು, ಆಮೇಲೆ ಉಳಿದದ್ದೆಲ್ಲಾ ಅಂದುಬಿಟ್ಟರು. ನನ್ನ ಅಮ್ಮ ಸುರತ್ಕಲ್‌ನ ಎನ್‌ಐಟಿಕೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದವರು. ಅಪ್ಪ, ಅಕ್ಕ ಇಂಜಿನಿಯರಿಂಗ್ ಹಿನ್ನೆಲೆಯವರು. ನಾನೂ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಮುಗಿಸಿದೆ. ಆಮೇಲೆ ಒಂದೂವರೆ ವರ್ಷ ರಂಗಭೂಮಿಯಲ್ಲಿ ತರಬೇತಿ ಪಡೆದು ಸಿನಿಮಾ ರಂಗದತ್ತ ಹೆಜ್ಜೆ ಹಾಕಿದೆ.- ಜೂನಿಯಲ್ಲಿ ನಟಿಸಿದೆ. ಪುರುಷೋತ್ತಮನ ಪ್ರಸಂಗ ಸಿನಿಮಾ ಮುಂದಿನ ವಾರ ಬರಲಿದೆ. ಇನ್ನೆರಡು ಸಿನಿಮಾಗಳಿಗೆ ಸೈನ್ ಮಾಡಿದ್ದೇನೆ. ಒಂದು ಕನ್ನಡದ್ದೇ ಸಿನಿಮಾ. ಇನ್ನೊಂದು ಪರಭಾಷಾ ಚಿತ್ರ.
- ಜೂನಿ ಬಳಿಕ ಚ್ಯೂಸಿಯಾಗಿದ್ದೇನೆ. ಸಿನಿಮಾ ಒಪ್ಪಿಕೊಳ್ಳುವ ಮೊದಲು ಕತೆ ಚೆನ್ನಾಗಿದೆಯಾ ಅಂತ ನೋಡುತ್ತೇನೆ. ಪಾತ್ರ ಹೇಗೆ ಬೆಳವಣಿಗೆ ಸಾಧಿಸಿದೆ ಅನ್ನೋದನ್ನು ಗಮನಿಸುತ್ತೇನೆ. ಆದರೂ ಹುಡುಗಿಯರ ನಟನೆಗೆ ಪ್ರಾಧಾನ್ಯತೆ ಇರುವ ಪಾತ್ರ ಸಿಗುವುದು ಬಹಳ ಕಷ್ಟ. ಜೂನಿ ಥರದ ಪಾತ್ರ ಸಿಕ್ಕಿದ್ದು ನನ್ನ ಅದೃಷ್ಟ. ಪುರುಷೋತ್ತಮನ ಪ್ರಸಂಗ ಮತ್ತು ಇನ್ನೆರಡು ಸಿನಿಮಾಗಳಲ್ಲೂ ಉತ್ತಮ ಪಾತ್ರ ಸಿಕ್ಕಿದೆ.- ಜೂನಿ ಸಿನಿಮಾದ ನನ್ನ ನಟನೆ ನೋಡಿ ಹಲವರು ಇದು ನನ್ನ ಮೊದಲ ಸಿನಿಮಾ ಅನ್ನೋದನ್ನು ಒಪ್ಪಿಕೊಳ್ಳೋಕೆ ಕಷ್ಟ ಆಗುತ್ತೆ ಅಂದರು. ಈ ಪಾತ್ರ ನಿರ್ವಹಿಸಲು ರಂಗಭೂಮಿ ಹಿನ್ನೆಲೆ ಸಹಾಯವಾಯಿತು. ಟೀಮ್‌ನ ಸಪೋರ್ಟ್ ಸಾಕಷ್ಟಿತ್ತು. ಈ ಪಾತ್ರ ಮಾಡುತ್ತಾ ನನಗೆ ನಾನು ಯಾರು ಅಂತಾನೇ ಮರೆತು ಹೋಗುತ್ತಿತ್ತು. ನನ್ನ ಬಾಡಿ ಲ್ಯಾಂಗ್ವೇಜೇ ಬದಲಾಗಿತ್ತು ಅಂತ ಮನೆಯವರೂ ಹೇಳ್ತಿದ್ದರು. ಆ ಪಾತ್ರದಿಂದ ಹೊರಬರಲು ಸ್ವಲ್ಪ ಸಮಯ ಹಿಡಿತು.
- ಪುರುಷೋತ್ತಮನ ಪ್ರಸಂಗ ಚಿತ್ರದಲ್ಲಿ ಬ್ಯಾಂಕ್ ಉದ್ಯೋಗಿಯ ಪಾತ್ರ ನಿರ್ವಹಿಸಿದ್ದೇನೆ. ಮಹತ್ವಾಕಾಂಕ್ಷೆ ಇರುವ ಹುಡುಗಿ ನಾನು.- ನನ್ನ ಮಾತೃಭಾಷೆ ತುಳು. ನಾನು ಮಂಗಳೂರಿನ ಬಂಟ್ಸ್ ಸಮುದಾಯದ ಹುಡುಗಿ. ಕತೆ ಬರೆಯೋದು ನನಗೆ ಇಷ್ಟ. ಈಗಾಗಲೇ ಒಂದು ಸಿನಿಮಾ ಕಥೆ ಬರೆಯುತ್ತಿದ್ದೇನೆ. ಆದರೆ ಅದಕ್ಕಿಂತಲೂ ನಟನೆಗೆ ಫೋಕಸ್ ಮಾಡಬೇಕು ಅಂದುಕೊಂಡಿದ್ದೇನೆ.