ಜೂನಿ ಚಿತ್ರದ ನಿರೂಪಣೆಯಲ್ಲೇ ಮ್ಯಾಜಿಕ್ ಇದೆ: ಪೃಥ್ವಿ ಅಂಬರ್‌

KannadaprabhaNewsNetwork |  
Published : Feb 09, 2024, 01:48 AM ISTUpdated : Feb 09, 2024, 01:04 PM IST
Juni Film

ಸಾರಾಂಶ

ಸೈಕಲಾಜಿಕಲ್‌ ಲವ್‌ ಸ್ಟೋರಿ ಜೂನಿ ಬಗ್ಗೆ ಚಿತ್ರದ ನಾಯಕ ಪೃಥ್ವಿ ಅಂಬರ್‌ ಮಾತನಾಡಿದ್ದಾರೆ.

ಪ್ರಿಯಾ ಕೆರ್ವಾಶೆ

ಈ ತಿಂಗಳು ನಿಮ್ಮ ನಟನೆಯ ಬ್ಯಾಕ್‌ ಟು ಬ್ಯಾಕ್‌ ಮೂರು ಸಿನಿಮಾಗಳು ರಿಲೀಸ್‌ ಆಗ್ತಿವೆ?
ಹೌದು. ಇದು ಸಿನಿಮಾ ತಂಡಗಳ ನಿರ್ಧಾರ. ನಾನು ಸಾಧ್ಯವಾದಷ್ಟು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೇನೆ. ಐಪಿಎಲ್‌ ಹತ್ತಿರ ಬರುತ್ತಿದ್ದ ಹಾಗೆ ಇಂಥದ್ದೊಂದು ಒತ್ತಡ ಅನಿವಾರ್ಯ. 

ನಿಮ್ಮ ಸಿನಿಮಾ ಜರ್ನಿಯಲ್ಲಿ ಒಂದರಿಂದ ಒಂದು ವಿಭಿನ್ನ ಪಾತ್ರ ಮಾಡಿದ್ದೀರಿ. ಇದು ಉದ್ದೇಶಪೂರ್ವಕವಾ, ಆಕಸ್ಮಿಕವಾ?
ಒಂದು ಪಾತ್ರದಂತೆ ಇನ್ನೊಂದು ಪಾತ್ರ ಇರಬಾರದು ಅನ್ನುವುದು ನನ್ನ ಮನಸ್ಸಲ್ಲಿದೆ. ಹೀಗಾಗಿ ಟೀಮ್‌, ಉಳಿದ ಅಂಶಗಳಿಗಿಂತಲೂ ಕಥೆಯಲ್ಲಿರುವ ಹೊಸತನ, ತಂಡದಲ್ಲಿರುವ ಕ್ರಿಯೇಟಿವಿಟಿ ನೋಡಿ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತೇನೆ.

ಜೂನಿ ಸಿನಿಮಾದಲ್ಲಿ ಶೆಫ್‌ ಆಗಿದ್ದೀರಿ. ಇದಕ್ಕಾಗಿ ಹೋಂವರ್ಕ್‌ ಮಾಡಿದ್ದು?
ನಂಗೆ ಅಡುಗೆ ಬರಲ್ಲ. ನಮ್ಮ ನಿರ್ದೇಶಕ ವೈಭವ್‌ ಒಳ್ಳೆ ಶೆಫ್‌. ಅವರೇ ಈ ವಿದ್ಯೆಯನ್ನು ನನಗೆ ಕಲಿಸಿದ ಮಾಸ್ಟರ್‌. ಪಾರ್ಥ ಎಂಬ ಲವಲವಿಕೆಯ ಪಾತ್ರ ಮಾಡುವ ಖುಷಿಯ ಜೊತೆಗೆ ಅಡುಗೆ ಕಲಿತದ್ದು ಮಜಾ ಕೊಟ್ಟಿತು. 

ಪಾರ್ಥ ಪಾತ್ರದ ಜೊತೆಗಿನ ಜರ್ನಿ ಹೇಗಿತ್ತು?
ಈ ಪಾತ್ರ ಬಹಳ ಸೊಗಸಾಗಿದೆ. ಸಿನಿಮಾದುದ್ದಕ್ಕೂ ಲವಲವಿಕೆ ಈ ಪಾತ್ರದ ಜೊತೆಗೆ ಟ್ರಾವೆಲ್‌ ಆಗೋದು ಒಂದು ಕಡೆಯಾದರೆ ಎದುರಾಗುವ ತಿರುವು, ಪಾತ್ರದ ರೂಪಾಂತರ ನೀಡುವ ಥ್ರಿಲ್‌ ಮತ್ತೊಂದು ಕಡೆ. 

ಜೂನಿ ಎಂಬ ಮಲ್ಟಿಪಲ್‌ ಪರ್ಸನಾಲಿಟಿ ಡಿಸಾರ್ಡರ್‌ ಇರುವ ವ್ಯಕ್ತಿಯ ಜೊತೆಗೆ ಈ ಪಾತ್ರದ ಹೊಂದಾಣಿಕೆಯ ಚಂದ ಮಗದೊಂದು ಕಡೆ. ನಟನಾಗಿ, ಸಿನಿಮಾ ವ್ಯಾಮೋಹಿಯಾಗಿ ನನಗೆ ಒಂದೊಳ್ಳೆ ಅನುಭವ ಕೊಟ್ಟ ಸಿನಿಮಾ ಜೂನಿ. 

ಸಿನಿಮಾದ ಶಕ್ತಿ?
ಜೂನಿ ನಿರೂಪಣೆಯಲ್ಲೇ ಒಂದು ಮ್ಯಾಜಿಕ್‌ ಇದೆ. ಪಾರ್ಥನ ಪಾತ್ರ ನೇರ ಪ್ರೇಕ್ಷಕರ ಜೊತೆಗೇ ಸಂವಹನ ನಡೆಸೋದ್ರಲ್ಲಿ ಒಂದು ಕಿಕ್‌ ಇದೆ. ಇಂಥಾ ಸೈಕಲಾಜಿಕಲ್‌ ಸಬ್ಜೆಕ್ಟ್ ಇರುವ ಸಿನಿಮಾಗಳು ಸಾಮಾನ್ಯವಾಗಿ ಥ್ರಿಲ್ಲರ್‌ಗಳಾಗಿರುತ್ತವೆ. 

ಆದರೆ ನಮ್ಮ ಸಿನಿಮಾದಲ್ಲಿ ಮಲ್ಟಿಪಲ್‌ ಪರ್ಸನಾಲಿಟಿ ಡಿಸಾರ್ಡರ್‌ ಹಿನ್ನೆಲೆಯಲ್ಲಿ ಪ್ರೇಮ, ಅಡುಗೆಯಂಥಾ ಸಬ್ಜೆಕ್ಟ್‌ಗಳು ಬರುತ್ತದೆ. ಇದು ಚಿತ್ರವನ್ನು ಉಳಿದ ಚಿತ್ರಗಳಿಗಿಂತ ಭಿನ್ನವಾಗಿಸುತ್ತದೆ. 

ಇಡೀ ಸಿನಿಮಾವನ್ನು ಹೊಸತನದಲ್ಲಿ ಕಟ್ಟಿ ಲವಲವಿಕೆಯಲ್ಲಿ ಮುನ್ನಡೆಸಿಕೊಂಡು ಹೋಗುವುದೂ ಸಿನಿಮಾದ ವಿಶೇಷತೆ. ಮಲ್ಟಿಪಲ್‌ ಪರ್ಸನಾಲಿಟಿ ಡಿಸಾರ್ಡರ್‌ ಇರುವ ಜೂನಿ ಪಾತ್ರದಲ್ಲಿ ರಿಷಿಕಾ ಅವರ ಅಭಿನಯ, ಇಡೀ ಸಿನಿಮಾವನ್ನು ಸೊಗಸಾಗಿ ಕಟ್ಟಿಕೊಟ್ಟ ನಿರ್ದೇಶಕ ವೈಭವ್‌ ಕ್ರಿಯೇಟಿವಿಟಿಯೂ ಸಿನಿಮಾದ ದೊಡ್ಡ ಶಕ್ತಿ.

 ಥಿಯೇಟರ್‌ ಸಮಸ್ಯೆ ಹೊಡೆತ ಕೊಟ್ಟಂತಿದೆ?
ನಿಜ. ಆರೇಳು ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುತ್ತಿವೆ. ಜೊತೆಗೆ ಹಿಂದಿನ ವಾರ ರಿಲೀಸ್‌ ಆದ ಸಿನಿಮಾಗಳೂ ರೇಸ್‌ನಲ್ಲಿವೆ. ಸದ್ಯಕ್ಕೆ ಮೌತ್‌ ಪಬ್ಲಿಸಿಟಿಯೇ ಸಿನಿಮಾವನ್ನು ಹೆಚ್ಚೆಚ್ಚು ಜನರಿಗೆ ತಲುಪಿಸಬೇಕಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ತಿಥಿ ಚಿತ್ರದ ನಟ ‘ಸೆಂಚುರಿ’ಗೌಡ ಸೊಂಟದ ಮೂಳೆ ಮುರಿದು ನಿಧನ
ಸತ್ಯ ಮತ್ತು ಕಲ್ಪನೆಯ ನಡುವಿನ ಕಥೆ ವಿಕಲ್ಪ : ಪೃಥ್ವಿರಾಜ್‌ ಪಾಟೀಲ್‌