16 ದಿನಗಳಲ್ಲಿ ₹1000 ಕೋಟಿ ಬಾಚಿದ ‘ಕಲ್ಕಿ 2898 ಎಡಿ’ ಚಿತ್ರ!

KannadaprabhaNewsNetwork |  
Published : Jul 14, 2024, 01:32 AM ISTUpdated : Jul 14, 2024, 05:17 AM IST
ಕಲ್ಕಿ | Kannada Prabha

ಸಾರಾಂಶ

ನಟ ಪ್ರಭಾಸ್‌, ಅಮಿತಾಭ್‌ ಬಚ್ಚನ್‌, ದೀಪಿಕಾ ಪಡುಕೋಣೆ ಅಭಿನಯದ ‘ಕಲ್ಕಿ 2898 ಎಡಿ’ ಚಿತ್ರವು ಬಿಡುಗಡೆ ಆದ 16 ದಿನದಲ್ಲಿ ವಿಶ್ವಾದ್ಯಂತ 1000 ಕೋಟಿ ರು. ಗಳಿಸಿದೆ ಎಂದು ಚಿತ್ರತಂಡ ತಿಳಿಸಿದೆ.

ಮುಂಬೈ: ನಟ ಪ್ರಭಾಸ್‌, ಅಮಿತಾಭ್‌ ಬಚ್ಚನ್‌, ದೀಪಿಕಾ ಪಡುಕೋಣೆ ಅಭಿನಯದ ‘ಕಲ್ಕಿ 2898 ಎಡಿ’ ಚಿತ್ರವು ಬಿಡುಗಡೆ ಆದ 16 ದಿನದಲ್ಲಿ ವಿಶ್ವಾದ್ಯಂತ 1000 ಕೋಟಿ ರು. ಗಳಿಸಿದೆ ಎಂದು ಚಿತ್ರತಂಡ ತಿಳಿಸಿದೆ. ವೈಜಯಂತಿ ಮೂವೀಸ್‌ ನಿರ್ಮಾಣದ ‘ಕಲ್ಕಿ’ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಜೂ.27ರಂದು ಬಿಡುಗಡೆಯಾಗಿ ಸಾಕಷ್ಟು ಜನಮನ್ನಣೆ ಗಳಿಸಿದೆ. ಅಲ್ಲದೇ ಭಾರತದಲ್ಲಿ ಇದುವರೆಗೂ ಅತಿ ಹೆಚ್ಚು ಬಜೆಟ್‌ (600 ಕೋಟಿ ರು.) ಸಿನೆಮಾ ಎಂಬ ಖ್ಯಾತಿ ಪಡೆದಿದೆ.ಚಿತ್ರದಲ್ಲಿ ಪ್ರಭಾಸ್‌ ಜೊತೆಗೆ ದಿಶಾ ಪಾಟ್ನಿ, ಶಾಶ್ವತಾ ಚಟರ್ಜಿ ಸಹ ನಟಿಸಿದ್ದಾರೆ.

ಟ್ಚೀಟರ್‌ನಲ್ಲಿ ಡಿಸ್‌ಲೈಕ್ ಬಟನ್ ಸೇರ್ಪಡೆಗೆ ಮಸ್ಕ್‌ ಚಿಂತನೆ

ನವದೆಹಲಿ: ಟ್ವೀಟರ್‌ (ಎಕ್ಸ್‌) ಅನ್ನು ತನ್ನ ಸ್ವಾಧೀನಕ್ಕೆ ಪಡೆದ ಬಳಿಕ ಎಲಾನ್‌ ಮಸ್ಕ್‌ ಹಲವಾರು ಬದಲಾವಣೆಗಳನ್ನು ಮಾಡುತ್ತಿದ್ದು, ಇದೀಗ ಡಿಸ್‌ಲೈಕ್ ಬಟನ್ ಪರಿಚಯಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ದೊರಕಿದೆ. ಈ ಬಗ್ಗೆ ಕಂಪನಿಯಿಂದ ಅಧಿಕೃತ ಮಾಹಿತಿ ದೊರಕಿಲ್ಲವಾದರೂ ಮುರಿದ ಹೃದಯದಂತಹ ಬಟನ್‌ ಸೇರಿಸಲಾಗುತ್ತದೆ ಎನ್ನಲಾಗಿದೆ. ಈ ಆಯ್ಕೆಯನ್ನು ಕಂಪನಿ ಮಸ್ಕ್‌ ಒಡತನಕ್ಕೆ ಸೇರುವ ಮೊದಲು 2021ರಲ್ಲಿ ಪರೀಕ್ಷಿಸಲಾಗಿತ್ತು. ಆರಂಭದಲ್ಲಿ ಅಪ್‌ವೋಟಿಂಗ್ ಹಾಗೂ ಡೌನ್‌ವೋಟಿಂಗ್ ಎರಡನ್ನೂ ಪರೀಕ್ಷಿಸಲಾಗಿತ್ತಾದರೂ ಇತ್ತೀಚೆಗೆ ಪ್ರತಿಕ್ರಿಯೆಗಳಿಗೆ ಡೌನ್‌ವೋಟ್ ಮಾಡಲು ಮಾತ್ರ ಅವಕಾಶ ನೀಡಲಾಗಿತ್ತು. ಈ ಮುಂಚೆ ಜೂನ್‌ನಲ್ಲಿ ಲೈಕ್‌ಗಳನ್ನು ಮರೆಮಾಚುವ ವಿಧಾನವನ್ನು ಮಸ್ಕ್‌ ಪರಿಚಯಿಸಿದ್ದರು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಮೊದಲು ದಕ್ಷಿಣ ಭಾರತದಲ್ಲಿ, ವಾರ ಬಿಟ್ಟು ಹಿಂದಿಯಲ್ಲಿ ಬರಲಿದೆ 45
75ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್‌