ಕಾಂಗರೂ ಚಿತ್ರ ನನ್ನ ಕೆರಿಯರ್‌ನಲ್ಲಿ ಮೈಲಿಗಲ್ಲು: ರಂಜನಿ ರಾಘವನ್‌

KannadaprabhaNewsNetwork |  
Published : Apr 15, 2024, 01:21 AM ISTUpdated : Apr 15, 2024, 06:57 AM IST
ರಂಜನಿ ರಾಘವನ್‌ | Kannada Prabha

ಸಾರಾಂಶ

ಕಾಂಗರೂ ಸಿನಿಮಾದಲ್ಲಿ ಮಹತ್ವದ ಪಾತ್ರದಲ್ಲಿ ರಂಜನಿ ರಾಘವನ್

  ಸಿನಿವಾರ್ತೆ

‘ನಾನು ಈವರೆಗೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದರೂ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಗುರುತಿಸಿಕೊಳ್ಳಲು ಕಷ್ಟವಾಗುತ್ತಿದೆ. ಆದರೆ ಕಾಂಗರೂ ಸಿನಿಮಾ ನನ್ನ ಕೆರಿಯರ್‌ನಲ್ಲಿ ಮೈಲಿಗಲ್ಲಾಗುವ ವಿಶ್ವಾಸವಿದೆ’ ಎಂದು ನಾಯಕಿ ರಂಜನಿ ರಾಘವನ್‌ ಹೇಳಿದ್ದಾರೆ.

ಆದಿತ್ಯ ಹಾಗೂ ರಂಜನಿ ರಾಘವನ್‌ ನಟನೆಯ ‘ಕಾಂಗರೂ’ ಸಿನಿಮಾದ ಟ್ರೇಲರ್‌ ಬಿಡುಗಡೆ ಇತ್ತೀಚೆಗೆ ನಡೆಯಿತು. ಈ ಸಿನಿಮಾ ಮೇ 3ಕ್ಕೆ ತೆರೆಗೆ ಬರಲಿದೆ.

ಈ ವೇಳೆ ಮಾತನಾಡಿದ ರಂಜನಿ, ‘ರಿಯಾಲಿಟಿ ಶೋ ಒಂದರಲ್ಲಿ ಥಿಯೇಟರ್‌ಗೆ ಜನರನ್ನು ಕರೆಸುವಂಥಾ ನಾಯಕಿಯರಾದ ಮಾಲಾಶ್ರೀ, ಶ್ರುತಿ ಬಗ್ಗೆ ಮಾತನಾಡುತ್ತಿದ್ದೆ. ಆ ವೇಳೆ ಕಾಂಗರೂ ಸಿನಿಮಾದಲ್ಲಿ ನನ್ನ ನಟನೆ ನೋಡಿದ್ದ ಸಾಧುಕೋಕಿಲ, ಆ ಸಾಮರ್ಥ್ಯ ನಿನಗೂ ಇದೆಯಮ್ಮಾ ಎಂದಿದ್ದರು. ಈ ಮಾತು ನನ್ನಲ್ಲಿ ಸ್ಫೂರ್ತಿ ತುಂಬಿದೆ’ ಎಂದರು.

ನಾಯಕ ಆದಿತ್ಯ ಅವರೂ ರಂಜನಿ ನಟನೆಯನ್ನು ಶ್ಲಾಘಿಸಿದರು. ‘ಆ್ಯಕ್ಷನ್‌ ಹೀರೋನನ್ನು ಆ್ಯಕ್ಷನ್‌ ಇಲ್ಲದೇ ಪರಿಣಾಮಕಾರಿಯಾಗಿ ತೋರಿಸಿದ್ದು ನಿರ್ದೇಶಕರ ಪ್ರತಿಭೆಗೆ ಹಿಡಿದ ಕನ್ನಡಿ’ ಎಂದರು.

ನಿರ್ದೇಶಕ ಕಿಶೋರ್‌ ಮೇಗಳಮನೆ, ‘ಎದೆಗಾರಿಕೆ ಚಿತ್ರದಲ್ಲಿ ಆದಿತ್ಯ ನಿರ್ವಹಿಸಿದ ಪಾತ್ರದಂತೆ ಈ ಸಿನಿಮಾದ ಅವರ ಪಾತ್ರವಿದೆ. ಮಗು ಹುಟ್ಟಿದ ಮೇಲೂ ಅದನ್ನು ಜತನದಿಂದ ಕಾಪಾಡುವ ಕಾಂಗರೂವನ್ನು ಚಿತ್ರದ ನಾಯಕ ಪ್ರತಿನಿಧಿಸುತ್ತಾನೆ. ಆ ಮಗು ಯಾವುದು ಎಂಬುದು ಸಸ್ಪೆನ್ಸ್‌. ಇದೊಂದು ಕ್ರೈಮ್‌ ಥ್ರಿಲ್ಲರ್‌’ ಎಂದರು.

ಚಲನಚಿತ್ರ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್‌ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ಈ ಸಿನಿಮಾಕ್ಕೆ ನಿರ್ಮಾಪಕ ಚನ್ನಕೇಶವ ಬಿ ಸಿ ಸೇರಿ ಒಟ್ಟು ಆರು ಮಂದಿ ನಿರ್ಮಾಪಕರು. ಕಲಾವಿದರಾದ ನಾಗೇಂದ್ರ ಅರಸ್‌, ಅಶ್ವಿನ್‌ ಹಾಸನ್‌, ಡಿಓಪಿ ಉದಯ್‌ ಲೀಲಾ ಕಾರ್ಯಕ್ರಮದಲ್ಲಿದ್ದರು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಮೊದಲು ದಕ್ಷಿಣ ಭಾರತದಲ್ಲಿ, ವಾರ ಬಿಟ್ಟು ಹಿಂದಿಯಲ್ಲಿ ಬರಲಿದೆ 45
75ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್‌