ಕಾನ್ಸ್‌ ಚಿತ್ರೋತ್ಸವದಲ್ಲಿ ಕನ್ನಡ ಜಾನಪದ ಕಿರುಚಿತ್ರ ಪ್ರದರ್ಶ

Published : May 23, 2024, 09:00 AM IST
Film theater

ಸಾರಾಂಶ

ವಿಶ್ವವಿಖ್ಯಾತ ಕಾನ್ಸ್‌ ಚಲನಚಿತ್ರೋದ್ಯಮದಲ್ಲಿ ಕನ್ನಡ ಜಾನಪದ ಕಿರುಚಿತ್ರ ‘ಸನ್‌ಫ್ಲವರ್ಸ್‌ ವರ್‌ ದಿ ಫಸ್ಟ್‌ ಒನ್ಸ್‌ ಟು ನೋ’ ಮಂಗಳವಾರ ಪ್ರದರ್ಶನಗೊಂಡಿದೆ.

ಕಾನ್ಸ್ (ಫ್ರಾನ್ಸ್‌): ವಿಶ್ವವಿಖ್ಯಾತ ಕಾನ್ಸ್‌ ಚಲನಚಿತ್ರೋದ್ಯಮದಲ್ಲಿ ಕನ್ನಡ ಜಾನಪದ ಕಿರುಚಿತ್ರ ‘ಸನ್‌ಫ್ಲವರ್ಸ್‌ ವರ್‌ ದಿ ಫಸ್ಟ್‌ ಒನ್ಸ್‌ ಟು ನೋ’ ಮಂಗಳವಾರ ಪ್ರದರ್ಶನಗೊಂಡಿದೆ.

 ಶಿವಮೊಗ್ಗ ಮೂಲದವರಾದ ಹಾಗೂ ಈಗ ಮೈಸೂರಿನಲ್ಲಿ ವಾಸಿಸುತ್ತಿರುವ ಚಿದಾನಂದ ಎಸ್‌ ನಾಯ್ಕ್‌ ಅವರು ನಿರ್ದೇಶಿಸಿರುವ 16 ನಿಮಿಷದ ಕಿರುಚಿತ್ರದಲ್ಲಿ ಬಂಜಾರ ಸಮುದಾಯದ ಹಳ್ಳಿಯೊಂದರಲ್ಲಿ ಹುಂಜವನ್ನು ಕದ್ದೊಯ್ದಾಗ ಗ್ರಾಮದಲ್ಲಿ ಬೆಳಕೇ ಮೂಡದೆ ಅಂಧಕಾರದಲ್ಲಿ ವೃದ್ಧೆ ಪರಿತಪಿಸುತ್ತಿರುವ ಕುರಿತು ಚಿತ್ರಿಸಲಾಗಿದೆ. ಈ ನಿಮಿತ್ತ ಚಿತ್ರೋತ್ಸವಕ್ಕಾಗಿ ನಾಯಕ್‌, ಫೋಟೋಗ್ರಫಿ ನಿರ್ದೇಶಕ ಊರಜ್ ಠಾಕೂರ್‌, ಸೌಂಡ್‌ ಡಿಸೈನರ್‌ ಅಭಿಷೇಕ್‌ ಕದಂ, ಪ್ರೊಡಕ್ಷನ್‌ ಡಿಸೈನರ್‌ ಪ್ರಣವ್‌ ಖೋತ್‌ ಕಾನ್ಸ್‌ಗೆ ಆಗಮಿಸಿದ್ದಾರೆ.

ಈ ಚಿತ್ರವನ್ನು ಚಲನಚಿತ್ರ ಶಾಲಾ ಪ್ರಶಸ್ತಿ ವಿಭಾಗದಲ್ಲಿ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯನ್ನು ಪ್ರತಿನಿಧಿಸಿದ್ದು, ಗುರುವಾರ ಈ ವಿಭಾಗದಲ್ಲಿ ಪ್ರದರ್ಶನಗೊಂಡ ಚಿತ್ರಗಳಿಗೆ ಪ್ರಶಸ್ತಿ ಘೋಷಣೆಯಾಗಲಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಮೊದಲು ದಕ್ಷಿಣ ಭಾರತದಲ್ಲಿ, ವಾರ ಬಿಟ್ಟು ಹಿಂದಿಯಲ್ಲಿ ಬರಲಿದೆ 45
75ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್‌