ಕಾಂತಾರ ಅಧ್ಯಾಯ 2 ಇಲ್ಲಿಂದ ಶುರು! ಹೊಂಬಾಳೆ ಫಿಲಂಸ್‌ ಅನ್‌ಫಾಲೋ

Published : Mar 21, 2026, 12:40 PM IST
Rishab Shetty

ಸಾರಾಂಶ

ರಿಷಬ್‌ ಶೆಟ್ಟಿ ಯುಗಾದಿ ಹಬ್ಬದ ದಿನ ‘ಅಧ್ಯಾಯ ಎರಡು ಇಲ್ಲಿಂದ ಶುರು’ ಎಂದು ಘೋಷಿಸಿದ್ದಾರೆ. ಈ ಮೂಲಕ ‘ಕಾಂತಾರ ಚಾಪ್ಟರ್‌ 2’ ಸಿನಿಮಾ ಕೆಲಸ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

  ಸಿನಿವಾರ್ತೆ

ರಿಷಬ್‌ ಶೆಟ್ಟಿ ಯುಗಾದಿ ಹಬ್ಬದ ದಿನ ‘ಅಧ್ಯಾಯ ಎರಡು ಇಲ್ಲಿಂದ ಶುರು’ ಎಂದು ಘೋಷಿಸಿದ್ದಾರೆ. ಈ ಮೂಲಕ ‘ಕಾಂತಾರ ಚಾಪ್ಟರ್‌ 2’ ಸಿನಿಮಾ ಕೆಲಸ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಶೇಷ ಎಂದರೆ ಇದರ ನಿರ್ಮಾಣ ಸಂಸ್ಥೆಯಾಗಿ ಹೊಂಬಾಳೆ ಫಿಲಂಸ್‌ ಬದಲಿಗೆ ರಿಷಬ್‌ ಶೆಟ್ಟಿ ಫಿಲಂಸ್‌ ಸಂಸ್ಥೆಯ ಲೋಗೋ ಇದೆ. ಇದೇ ಹೊತ್ತಿಗೆ ಸೋಷಲ್‌ ಮೀಡಿಯಾದಲ್ಲಿ ಹೊಂಬಾಳೆ ಫಿಲಂಸ್‌ ಅನ್ನು ರಿಷಬ್‌ ಹಾಗೂ ಅವರ ಪತ್ನಿ, ನಿರ್ಮಾಪಕಿ ಪ್ರಗತಿ ಶೆಟ್ಟಿ ಅನ್‌ಫಾಲೋ ಮಾಡಿದ್ದಾರೆ. ಅಲ್ಲಿಗೆ ‘ಕಾಂತಾರ’ ಸಿನಿಮಾದ ಮೊದಲೆರಡು ಭಾಗಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್‌ ಜೊತೆಗಿನ ಅಧ್ಯಾಯ ಮುಗಿದುಹೋಗಿದೆ ಎನ್ನಲಾಗುತ್ತಿದೆ.

ಹೋಂ ಬ್ಯಾನರ್‌ನಲ್ಲಿ ‘ಕಾಂತಾರ’ ಸಿನಿಮಾದ ಮುಂದಿನ ಭಾಗ ನಿರ್ಮಾಣ

ರಿಷಬ್‌ ಶೆಟ್ಟಿ ತನ್ನದೇ ಹೋಂ ಬ್ಯಾನರ್‌ನಲ್ಲಿ ‘ಕಾಂತಾರ’ ಸಿನಿಮಾದ ಮುಂದಿನ ಭಾಗ ನಿರ್ಮಾಣ ಮಾಡುವ ನಿರೀಕ್ಷೆ ಇದೆ. ‘ಕಾಂತಾರ’ ಟೀಮ್‌ನ ಬರಹಗಾರರಾಗಿ ಗುರುತಿಸಿಕೊಂಡಿರುವ ‘ಸು ಫ್ರಂ ಸೋ’ ಸಿನಿಮಾ ಖ್ಯಾತಿಯ ಶನೀಲ್‌ ಗೌತಮ್‌, ಛಾಯಾಗ್ರಾಹಕ ಅರವಿಂದ ಕಶ್ಯಪ್‌, ಅನಿರುದ್ಧ್‌ ಮಹೇಶ್‌ ಈ ಸಿನಿಮಾದಲ್ಲಿ ರಿಷಬ್‌ಗೆ ಜೊತೆಯಾಗಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

300 ಕೋಟಿಯತ್ತ ದಾಪುಗಾಲು ಹಾಕುತ್ತಿರುವ ಧುರಂಧರ್‌ 2
ಧುರಂಧರ್‌ 2 ಚಿತ್ರ ನೋಡಿದರೆ ಸಮಯ, ಹಣ ವ್ಯರ್ಥ: ರಮ್ಯಾ