ಒಳ್ಳೆಯ ಕಾರಣಕ್ಕೆ ಚಿತ್ರರಂಗ ಹೆಸರಾಗಲಿ : ಕಿಚ್ಚ ಸುದೀಪ್ - ಸ್ಯಾಂಡಲ್‌ವುಡ್‌ ಕಪ್‌ ಶಟಲ್‌ ಬ್ಯಾಡ್ಮಿಂಟನ್‌ ಸ್ಪರ್ಧೆಯ ಜೆರ್ಸಿ ಬಿಡುಗಡೆ

Published : Sep 23, 2024, 11:09 AM IST
Kichch sudeep

ಸಾರಾಂಶ

ಸ್ಯಾಂಡಲ್‌ವುಡ್‌ ಕಪ್‌ 2024 ಶಟಲ್‌ ಬ್ಯಾಡ್ಮಿಂಟನ್‌ ಸ್ಪರ್ಧೆ ಸೆ.28 ಮತ್ತು ಸೆ.29ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಪಂದ್ಯಾವಳಿಗೆ 10 ತಂಡಗಳನ್ನು ಮಾಡಲಾಗಿದ್ದು, ಸ್ಯಾಂಡಲ್‌ವುಡ್‌ ತಾರೆಯರು, ಕಿರುತೆರೆ ಕಲಾವಿದರು, ಮಾಧ್ಯಮದವರು ಈ ತಂಡಗಳ ಭಾಗವಾಗಿದ್ದಾರೆ.

ಸಿನಿವಾರ್ತೆ :  ‘ಕನ್ನಡ ಚಿತ್ರರಂಗ ಬೇಡದ ವಿಷಯಕ್ಕೆ ಸುದ್ದಿಯಲ್ಲಿದೆ. ಯಾರು ಏನು ಎಷ್ಟೇ ಮಾತನಾಡಿದರೂ ಚಿತ್ರರಂಗ ಒಳ್ಳೆಯ ರೀತಿಯಲ್ಲಿಯೇ ಇರುತ್ತದೆ. ಈಗ ಬ್ಯಾಡ್ಮಿಂಟನ್‌ ಕಾರಣಕ್ಕೆ ಎಲ್ಲರೂ ಸೇರಿದ್ದೇೆವೆ. ಒಳ್ಳೆಯ ಕಾರಣಕ್ಕೆ ಚಿತ್ರರಂಗ ಹೆಸರಾಗಲಿ’.

- ಹೀಗೆ ಹೇಳಿದ್ದು ಕಿಚ್ಚ ಸುದೀಪ್. ಸ್ಯಾಂಡಲ್‌ವುಡ್‌ ಕಪ್‌ ಶಟಲ್‌ ಬ್ಯಾಡ್ಮಿಂಟನ್‌ ಸ್ಪರ್ಧೆಯ ಜೆರ್ಸಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸ್ಯಾಂಡಲ್‌ವುಡ್‌ ಕಪ್‌ 2024 ಶಟಲ್‌ ಬ್ಯಾಡ್ಮಿಂಟನ್‌ ಸ್ಪರ್ಧೆ ಸೆ.28 ಮತ್ತು ಸೆ.29ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಪಂದ್ಯಾವಳಿಗೆ 10 ತಂಡಗಳನ್ನು ಮಾಡಲಾಗಿದ್ದು, ಸ್ಯಾಂಡಲ್‌ವುಡ್‌ ತಾರೆಯರು, ಕಿರುತೆರೆ ಕಲಾವಿದರು, ಮಾಧ್ಯಮದವರು ಈ ತಂಡಗಳ ಭಾಗವಾಗಿದ್ದಾರೆ.

ಈ ಪಂದ್ಯಾವಳಿಯ ಜೆರ್ಸಿ ಬಿಡುಗಡೆ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಹಿರಿಯ ನಟ, ಮಾಜಿ ಸಚಿವ ಬಿ.ಸಿ. ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಾ.ರಾ. ಗೋವಿಂದ್, ಎನ್ಎಂ ಸುರೇಶ್, ಭಾ.ಮಾ. ಹರೀಶ್, ಭಾ.ಮಾ. ಸುರೇಶ್, ಎ. ಗಣೇಶ್, ಜಯಸಿಂಹ ಮುಸುರಿ ಇದ್ದರು.

ಪಂದ್ಯಾವಳಿಯ 10 ತಂಡಗಳ ಹೆಸರು, ನಾಯಕ, ಉಪನಾಯಕ ಮತ್ತು ಮೆಂಟರ್‌ ಹೆಸರುಗಳು ಇಲ್ಲಿವೆ:

1. ಗಂಧದಗುಡಿ ಗ್ಯಾಂಗ್

ನಾಯಕ: ಅಜಯ್ ರಾವ್

ಉಪನಾಯಕಿ: ಸಿಂಧೂ ಲೋಕನಾಥ್

ಮೆಂಟರ್: ಜೋಗಿ

2. ರಣಧೀರ ರೈಡರ್ಸ್

ನಾಯಕ: ಮನುರಂಜನ್ ರವಿಚಂದ್ರನ್

ಉಪನಾಯಕಿ: ಶ್ರುತಿ ಹರಿಹರನ್

ಮೆಂಟರ್: ರಂಗನಾಥ್ ಭಾರದ್ವಾಜ್

3. ಬುದ್ಧಿವಂತ ಬ್ಲಾಸ್ಟರ್ಸ್

ನಾಯಕ: ಚೇತನ್ ಚಂದ್ರ

ಉಪನಾಯಕಿ: ಜಾಹ್ನವಿ

ಮೆಂಟರ್: ಸದಾಶಿವ ಶೆಣೈ

4. ಅಂತ ಹಂಟರ್ಸ್

ನಾಯಕ: ವಸಿಷ್ಠ ಸಿಂಹ

ಉಪನಾಯಕಿ: ದಿವ್ಯಾ ಸುರೇಶ್

ಮೆಂಟರ್: ಯಮುನಾ ಶ್ರೀನಿಧಿ

5. ಅಮೃತವರ್ಷಿಣಿ ಅವೆಂಜರ್ಸ್

ನಾಯಕ: ವಿಕ್ರಮ್ ರವಿಚಂದ್ರನ್

ಉಪನಾಯಕಿ: ಕಾರುಣ್ಯಾರಾಮ್

ಮೆಂಟರ್: ಕವಿತಾ ಲಂಕೇಶ್

6. ಟೈಗರ್ ಟೈಟಾನ್ಸ್

ನಾಯಕ: ಮಯೂರ್ ಪಟೇಲ್

ಉಪನಾಯಕಿ: ಸಂಜನಾ ಗಲ್ರಾನಿ

ಮೆಂಟರ್: ಆರೂರು ಜಗದೀಶ್

7. ಸೂರ್ಯವಂಶ ಸ್ಕ್ವಾಡ್

ನಾಯಕ: ಶ್ರೀನಗರ ಕಿಟ್ಟಿ

ಉಪನಾಯಕಿ: ತನಿಷಾ ಕುಪ್ಪಂಡ

ಮೆಂಟರ್: ಟಿ.ಪಿ. ಸಿದ್ದರಾಜು

8. ಸಾಂಗ್ಲಿಯಾನ ಸ್ಮ್ಯಾಷರ್ಸ್

ನಾಯಕ: ಪೃಥ್ವಿ ಅಂಬಾರ್

ಉಪನಾಯಕಿ: ಶ್ರಾವ್ಯಾ ಶೆಟ್ಟಿ

ಮೆಂಟರ್: ತಾರಾ ಅನುರಾಧ

9. ಓಂ ವಾರಿಯರ್ಸ್

ನಾಯಕ: ಪ್ರಮೋದ್ ಶೆಟ್ಟಿ

ಉಪನಾಯಕಿ: ಸುಕೃತಾ ವಾಗ್ಲೆ

ಮೆಂಟರ್: ರಾಜೇಶ್ ರಾಮನಾಥ್

10. ಅಪ್ಪು ಪ್ಯಾಂಥರ್ಸ್

ನಾಯಕ: ಸೃಜನ್ ಲೋಕೇಶ್

ಉಪನಾಯಕಿ: ಮೇಘನಾ ರಾಜ್

ಮೆಂಟರ್: ಇಂದ್ರಜಿತ್ ಲಂಕೇಶ್

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌
ಡಿ.15ಕ್ಕೆ 45 ಚಿತ್ರದ ಟ್ರೇಲರ್‌ ಬಿಡುಗಡೆ- 7 ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ನೇರ ಪ್ರಸಾರ