ಲವ್‌ ಮಾಕ್ಟೇಲ್‌ 3 ಸ್ಕ್ರಿಪ್ಟ್‌ ಸಂಪೂರ್ಣ : ಶೀಘ್ರ ಸೆಟ್ಟೇರಲಿರುವ ಡಾರ್ಲಿಂಗ್ ಕೃಷ್ಣ ನಿರ್ದೇಶನದ ಚಿತ್ರ

Published : Jun 16, 2025, 09:37 AM IST
 Darling Krishna

ಸಾರಾಂಶ

ಡಾರ್ಲಿಂಗ್‌ ಕೃಷ್ಣ ನಿರ್ದೇಶನದ ‘ಲವ್‌ ಮಾಕ್ಟೇಲ್ 3’ ಸಿನಿಮಾದ ಸ್ಕ್ರಿಪ್ಟ್‌ ಕೆಲಸ ಸಂಪೂರ್ಣವಾಗಿದೆ. ಶೀಘ್ರ ಚಿತ್ರ ಸೆಟ್ಟೇರಲಿದೆ.

 ಸಿನಿವಾರ್ತೆ

ಡಾರ್ಲಿಂಗ್‌ ಕೃಷ್ಣ ನಿರ್ದೇಶನದ ‘ಲವ್‌ ಮಾಕ್ಟೇಲ್ 3’ ಸಿನಿಮಾದ ಸ್ಕ್ರಿಪ್ಟ್‌ ಕೆಲಸ ಸಂಪೂರ್ಣವಾಗಿದೆ. ಶೀಘ್ರ ಚಿತ್ರ ಸೆಟ್ಟೇರಲಿದೆ.

ಕೃಷ್ಣ ನಿರ್ದೇಶನ, ನಟನೆಯಲ್ಲಿ ತೆರೆಕಂಡ ‘ಲವ್‌ ಮಾಕ್ಟೇಲ್‌’ ಸೀರೀಸ್‌ನ ಎರಡು ಚಿತ್ರಗಳೂ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿದ್ದವು. ಇದೀಗ ಅವರು ಮೂರನೇ ಭಾಗಕ್ಕೆ ಶ್ರೀಕಾರ ಹಾಕಿದ್ದಾರೆ. ಈ ಸಿನಿಮಾಗಳಿಗೆ ಮಿಲನಾ ನಾಗರಾಜ್ ನಿರ್ಮಾಪಕಿ. ಈ ಹಿಂದಿನ ಎರಡೂ ಭಾಗಗಳಲ್ಲಿ ಅವರು ನಾಯಕಿಯಾಗಿ ನಟಿಸಿದ್ದರು. ಇನ್ನೂ ವರ್ಷ ತುಂಬದ ಮಗುವಿನ ತಾಯಾಗಿರುವ ಕಾರಣ ಅವರು ಈ ಸಿನಿಮಾದಲ್ಲಿ ನಟಿಸುತ್ತಾರ ಎಂಬುದು ಸ್ಪಷ್ಟವಾಗಿಲ್ಲ.

ಸದ್ಯ ಕೃಷ್ಣ ಅವರು ‘ಫಾದರ್’ ಹಾಗೂ ‘ಬ್ರ್ಯಾಟ್’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಆ ಬಳಿಕ ‘ಲವ್‌ ಮಾಕ್ಟೇಲ್‌ 3’ ಸಿನಿಮಾ ಶೂಟಿಂಗ್ ಆರಂಭಿಸಲಿದ್ದಾರೆ.

PREV
Read more Articles on

Recommended Stories

ವೈರಲ್ ಆಗುತ್ತಿರುವ ಸುದೀಪ್‌ ಹೊಸ ಲುಕ್ಕು : ಗಮನ ಸೆಳೆಯುತ್ತಿರುವ ಹೊಸ ಹೇರ್ ಸ್ಟೈಲ್‌
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮಿಳು ನಟ ಮದನ್ ಬಾಬ್ ನಿಧನ