ಸಿನಿವಾರ್ತೆ
ಅತ್ಯಂತ ಜನಪ್ರಿಯ ಸಿನಿಮಾ ಸರಣಿ ಆಗಿರುವ ‘ದೃಶ್ಯಂ 3’ ಸಿನಿಮಾ ಹಿಂದಿ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತದೆ ಎನ್ನಲಾಗಿತ್ತು. ಆದರೆ ಹಿಂದಿಯವರು ಸ್ವಲ್ಪ ಅರ್ಜೆಂಟ್ ಮಾಡಿ ಮೊದಲೇ ಚಿತ್ರೀಕರಣಕ್ಕೆ ಮುಂದಾಗಿದ್ದರಿಂದ ಮೂಲಕ ನಿರ್ದೇಶಕ ಜೀತು ಜೋಸೆಫ್ ಅದಕ್ಕೆ ತಡೆ ಹಾಕಿದ್ದಾರೆ.
ಹಿಂದಿ ಚಿತ್ರತಂಡಕ್ಕೆ ಮಲಯಾಳಂಗಿಂತ ಮೊದಲು ಹಿಂದಿ ಸಿನಿಮಾ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಜೀತು ಜೋಸೆಫ್, ‘ಮಲಯಾಳಂನಲ್ಲಿ ದೃಶ್ಯಂ 3 ಮೊದಲು ನಿರ್ಮಾಣವಾಗಲಿದೆ. ಇದೇ ಒರಿಜಿನಲ್ ಸಹ. ಹಿಂದಿಯಲ್ಲಿ ಮೊದಲು ನಿರ್ಮಾಣಕ್ಕಿಳಿಯದಂತೆ ತಾಕೀತು ಮಾಡಿದ್ದೇನೆ. ಹಿಂದಿ, ಮಲಯಾಳಂ ಎರಡೂ ಭಾಷೆಗಳಲ್ಲಿ ಒಟ್ಟೊಟ್ಟಿಗೆ ಸಿನಿಮಾ ನಿರ್ಮಿಸುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ’ ಎಂದು ಹೇಳಿದ್ದಾರೆ.
ಮೋಹನ್‌ಲಾಲ್ ನಟನೆಯ ‘ದೃಶ್ಯಂ 3’ ಅಕ್ಟೋಬರ್‌ನಲ್ಲಿ ಸೆಟ್ಟೇರಲಿದೆ. ಮಲಯಾಳಂ ಭಾಷೆಯ ಈ ಸಿನಿಮಾ ಕನ್ನಡ, ತಮಿಳು, ತೆಲುಗು ಭಾಷೆಗಳಿಗೆ ಡಬ್ ಆಗಲಿದೆ. ಹಿಂದಿಯಲ್ಲಿ ಅಜಯ್ ದೇವಗನ್ ನಾಯಕನಾಗಿ ನಟಿಸುತ್ತಿದ್ದಾರೆ. ಅಲ್ಲಿ ಪ್ರತ್ಯೇಕ ನಿರ್ಮಾಣ ಸಂಸ್ಥೆ ಈ ಚಿತ್ರ ನಿರ್ಮಿಸಲಿದೆ.