ಕನ್ನಡಪ್ರಭ ಸಿನಿವಾರ್ತೆ
- ‘ಮಾರಿಗೋಲ್ಡ್’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ದಿಗಂತ್ ಹೀಗೆ ಹೇಳಿದರು. ದಿಗಂತ್ ನಾಯಕನಾಗಿ, ಸಂಗೀತಾ ಶೃಂಗೇರಿ ನಾಯಕಿಯಾಗಿ ನಟಿಸಿರುವ ಈ ಚಿತ್ರ ಏ.5ರಂದು ಬಿಡುಗಡೆ ಆಗಲಿದೆ. ಚಿನ್ನದ ಬಿಸ್ಕತ್ ಮಾರಲು ಹೊರಟ ನಾಲ್ಕು ಮಂದಿಯ ಕತೆ ಹೊಂದಿರುವ ಈ ಚಿತ್ರವನ್ನು ರಾಘವೇಂದ್ರ ಎಂ ನಾಯ್ಕ್ ನಿರ್ದೇಶಿಸಿದ್ದು, ರಘುವರ್ಧನ್ ನಿರ್ಮಿಸಿದ್ದಾರೆ.
ಈ ಸಂದರ್ಭದಲ್ಲಿ ರಾಘವೇಂದ್ರ ಎಂ ನಾಯ್ಕ್, ‘ಗೋಲ್ಡು, ಹಣ, ಆಸೆ, ಪೊಲೀಸು, ಕ್ರೈಮು ಇತ್ಯಾದಿಗಳ ಸುತ್ತಾ ಸಾಗುವ ಸಿನಿಮಾ ಇದು. ಈ ಚಿತ್ರ ಆಗುವುದಕ್ಕೆ ಮುಖ್ಯ ಕಾರಣ ನಿರ್ಮಾಪಕ ರಘುವರ್ಧನ್ ಹಾಗೂ ಸಿನಿಮಾ ಪತ್ರಕರ್ತ ವಿಜಯ್ ಭರಮಸಾಗರ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ’ ಎಂದರು. ಸಂಗೀತಾ ಶೃಂಗೇರಿ, ‘ಶಾಲಾ ದಿನಗಳಲ್ಲೇ ನನಗೆ ದಿಗಂತ್ ಮೇಲೆ ಕ್ರಷ್ ಆಗಿತ್ತು. ಈಗ ಅವರ ಜತೆ ನಟಿಸಿದ್ದೇನೆ ಎನ್ನುವುದು ಖುಷಿ’ ಎಂದರು. ನಿರ್ಮಾಪಕ ರಘುವರ್ಧನ್, ಸಂಪತ್ ಮೈತ್ರೇಯಾ, ಯಶ್ ಶೆಟ್ಟಿ, ಗಣೇಶ್‌ರಾವ್ ಕೇಸರ್‌ಕರ್, ಮಹಂತೇಶ್ ಹಿರೇಮಠ್, ಸಂಗೀತ ನಿರ್ದೇಶಕ ವೀರ್ ಸಮರ್ಥ್, ಸಂಭಾಷಣೆಕಾರ ರಘು ನಿಡುವಳ್ಳಿ, ಸಾಹಿತಿ ಕವಿರಾಜ್ , ಛಾಯಾಗ್ರಾಹಕ ಕೆ ಎಸ್ ಚಂದ್ರಶೇಖರ್ ಇದ್ದರು.