ಮಾರ್ನಮಿ ಚಿತ್ರದ ಟೀಸರ್‌ ಬಿಡುಗಡೆ - ಕರಾವಳಿ ಭಾಗದ ನೆತ್ತರಿನ ಪ್ರೇಮ ಕತೆ ಹೇಳುವ ಚಿತ್ರ

Published : Jun 16, 2025, 10:15 AM IST
Film theater

ಸಾರಾಂಶ

ಪ್ರೀತಿ, ಪ್ರೇಮದ ಜತೆಗೆ ಕರಾವಳಿ ನೆತ್ತರಿನ ಕತೆಯನ್ನು ಹೇಳುವ ‘ಮಾರ್ನಮಿ’ ಚಿತ್ರದ ಟೀಸರ್‌ ಅನ್ನು ನಟ ರಿಷಿ, ನಿರ್ದೇಶಕ ಸಿಂಪಲ್‌ ಸುನಿ, ಬಿಗ್‌ ಬಾಸ್‌ ಖ್ಯಾತಿಯ ಕಾರ್ತಿಕ್‌ ಮಹೇಶ್‌, ದಿವ್ಯ ಉರುಡುಗ, ಕೆಪಿ ಅರವಿಂದ್‌ ಬಿಡುಗಡೆ ಮಾಡಿದರು.

 ಸಿನಿವಾರ್ತೆ

ಪ್ರೀತಿ, ಪ್ರೇಮದ ಜತೆಗೆ ಕರಾವಳಿ ನೆತ್ತರಿನ ಕತೆಯನ್ನು ಹೇಳುವ ‘ಮಾರ್ನಮಿ’ ಚಿತ್ರದ ಟೀಸರ್‌ ಅನ್ನು ನಟ ರಿಷಿ, ನಿರ್ದೇಶಕ ಸಿಂಪಲ್‌ ಸುನಿ, ಬಿಗ್‌ ಬಾಸ್‌ ಖ್ಯಾತಿಯ ಕಾರ್ತಿಕ್‌ ಮಹೇಶ್‌, ದಿವ್ಯ ಉರುಡುಗ, ಕೆಪಿ ಅರವಿಂದ್‌ ಬಿಡುಗಡೆ ಮಾಡಿದರು. ‘ಅನುರೂಪ’, ‘ಗಿಣಿರಾಮ’, ‘ನಿನಗಾಗಿ’ ಧಾರಾವಾಹಿಗಳ ಮೂಲಕ ಜನಪ್ರಿಯರಾಗಿದ್ದ ರಿತ್ವಿಕ್‌ ಮಠದ್‌ ಅವರು ಈ ಚಿತ್ರದಲ್ಲಿ ಮಾಸ್‌ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾರೆ. 

ಗುಣಾದ್ಯಾ ಪ್ರೊಡಕ್ಷನ್ಸ್‌ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿರುವ ಟೀಸರ್‌ ಕುತೂಹಲ ಹೆಚ್ಚಿಸಿದ್ದು, ಚರಣ್‌ ರಾಜ್‌ ಹಿನ್ನೆಲೆ ಸಂಗೀತ ಹೈಲೆಟ್‌.‌ ನಿಶಾಂತ್‌ ಚಿತ್ರದ ನಿರ್ಮಾಪಕ. ಚೈತ್ರಾ ಆಚಾರ್‌ ನಾಯಕಿ. ನಿರ್ದೇಶಕ ರಿಶಿತ್‌ ಶೆಟ್ಟಿ, ‘ಈ ಹಿಂದೆ ಬಂದ ನಾಯಕಿ ಪಾತ್ರವನ್ನು ಪರಿಚಯಿಸುವ ಟೀಸರ್‌ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಈಗ ಚಿತ್ರದ ಟೀಸರ್‌ ಬಂದಿದೆ. ಇದು ನನ್ನ ಸ್ನೇಹಿತ ಸುಧೀ ಬರೆದ ಕತೆ. ಕರಾವಳಿ ಭಾಗದ ಕತೆಯನ್ನು ಇಲ್ಲಿ ಹೇಳಲಾಗಿದೆ. ನೆತ್ತರು, ಪ್ರೀತಿ ಮತ್ತು ಅಲ್ಲಿನ ಸಂಸ್ಕೃತಿ ಚಿತ್ರದಲ್ಲಿದೆ’ ಎಂದರು. ಸುಮನ್‌ ತಲ್ವಾರ್‌, ಪ್ರಕಾಶ್‌ ತುಮಿನಾಡು, ಸೋನು ಗೌಡ, ಜ್ಯೋತೀಶ್‌ ಶೆಟ್ಟಿ, ಸ್ವರಾಜ್‌ ಶೆಟ್ಟಿ, ಮೈಮ್‌ ರಾಮದಾಸ್‌, ಚೈತ್ರಾ ಶೆಟ್ಟಿ ಅವರು ಚಿತ್ರದ ಮುಖ್ಯ ಪಾತ್ರಧಾರಿಗಳು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಈ ಸಲದ ಚಿತ್ರೋತ್ಸವಕ್ಕೆ 2 ಲಕ್ಷ ಮಂದಿ ಬರುತ್ತಾರೆ: ಸಾಧು ಕೋಕಿಲ
ಕನ್ನಡಕ್ಕೆ ಹೊಸತನದ ಕತೆ ಕೊಟ್ಟ ಲ್ಯಾಂಡ್‌ಲಾರ್ಡ್‌