ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮದ ಅರಿವು ಮೂಡಿಸುವ ಚಿತ್ರ

KannadaprabhaNewsNetwork |  
Published : Feb 10, 2024, 01:52 AM IST
ಮಾಯೆ ಆ್ಯಂಡ್‌  | Kannada Prabha

ಸಾರಾಂಶ

ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮ ಬಿಂಬಿಸುವ ಚಿತ್ರ

ಮಾಯೆ ಆ್ಯಂಡ್ ಕಂಪನಿ

ತಾರಾಗಣ: ಯಶಸ್ವಿನಿ, ಅರ್ಜುನ್‌ ಕಿಶೋರ್‌, ಅನೂಷಾ ಆನಂದ್‌, ನವೀಂದ್ರ ಗಂಗಾಧರ್‌ನಿರ್ದೇಶನ: ಸಂದೀಪ್‌ ಕುಮಾರ್‌- ಕೆಪ್ಪಿ

ಸೋಷಿಯಲ್‌ ಮೀಡಿಯಾದಿಂದ ಗೆಳೆಯರು ಸಿಗ್ತಾರೆ, ಮನರಂಜನೆ ಸಿಗುತ್ತೆ, ಜೊತೆಗೆ ಜನರನ್ನು ಯಾಮಾರಿಸೋ ಬಗ್ಗೆಯೂ ಕೇಳಿ ಗೊತ್ತು. ಮಾಯೆ ಆ್ಯಂಡ್‌ ಕಂಪನಿ ಸಿನಿಮಾದಲ್ಲಿ ಅಂಥಾ ಮತ್ತೊಂದು ಕಥೆ ಸಿಗುತ್ತೆ. ಆ ಮೂಲಕ ಈ ಸಿನಿಮಾ ಸೋಷಿಯಲ್‌ ಮೀಡಿಯಾ ಬಳಕೆಯ ಬಗ್ಗೆ ಮಹತ್ವದ ಸಂದೇಶವೊಂದನ್ನು ಚಿತ್ರ ಪ್ರೇಕ್ಷಕರಿಗೆ ರವಾನಿಸುತ್ತದೆ.ಸ್ನೇಹಿತೆ ಬಳಿ ಚಿನ್ನದ ನೆಕ್ಲೇಸ್‌ ಇದೆ. ತಾನೂ ಅಂಥದ್ದೊಂದು ನೆಕ್ಲೇಸ್‌ ಕೊಂಡುಕೊಂಡು ಅವಳಿಗೂ ಹೊಟ್ಟೆ ಉರಿಸಬೇಕು ಎಂಬ ಮಾನ್ಸಿಗೆ ನೆನಪಾಗೋದು ಫೇಸ್‌ಬುಕ್‌ ಗೆಳೆಯ ರಾಘವ. ಹಣ ಹೊಂದಿಸುವ ಆತನ ಪ್ಲಾನ್‌ ಏನು? ಆಸೆ ತೀರಿಸಿಕೊಳ್ಳಲು ಶಾರ್ಟ್‌ಕಟ್‌ ದಾರಿಯಲ್ಲಿ ಹೋದಾಗ ಎದುರಾಗುವ ಸವಾಲುಗಳೇನು, ಇಲ್ಲಿ ಹೊರಬೀಳುವ ಸತ್ಯಗಳೇನು ಎಂಬುದನ್ನು ತಿಳಿಯಲು ‘ಮಾಯೆ ಆ್ಯಂಡ್‌ ಕಂಪನಿ’ ಸಿನಿಮಾ ನೋಡಬಹುದು. ಈ ಸಿನಿಮಾದಲ್ಲಿ ಕೋವಿಡ್‌ ಬಳಿಕ ಮಧ್ಯಮ ವರ್ಗ, ಕೆಳ ಮಧ್ಯಮ ವರ್ಗದವರ ಬದುಕಿನಲ್ಲಾದ ಸ್ಥಿತ್ಯಂತರಗಳನ್ನೂ ಹೇಳುತ್ತದೆ. ಅದೇ ರೀತಿ, ‘ಇಂಥಾ ಹತ್ತು ಕೋವಿಡ್‌ ಬಂದರೂ ನಮ್ ಜನ ಪಾಠ ಕಲಿಯಲ್ಲ ಸಾರ್‌’ ಎಂಬ ಆಟೋ ಡ್ರೈವರ್‌ ಮಾತು ವಾಸ್ತವವನ್ನು ತೆರೆದಿಡುತ್ತದೆ. ಸಿನಿಮಾದ ಮೊದಲ ಭಾಗ ರಾಘವ ಹಾಗೂ ಮಾನ್ಸಿ ಏನು ಮಾಡಲು ಹೊರಟಿದ್ದಾರೆ ಎಂಬ ಕುತೂಹಲ ಮೂಡಿಸಿದರೆ, ಎರಡೇ ಭಾಗದಲ್ಲಿ ಊಹಿಸಲಾಗದ ತಿರುವುಗಳಿವೆ. ಕೊನೆಯಲ್ಲೊಂದು ಸಂದೇಶವಿದೆ. ಊಹೆಗೂ ಮೀರಿ ಸೋಷಿಯಲ್‌ ಮೀಡಿಯಾ ನೆವದಲ್ಲಿ ನಾವು ಹೇಗೆ ಯಾಮಾರಬಹುದು ಎಂಬುದನ್ನು ಈ ಸಿನಿಮಾ ಪ್ರೇಕ್ಷಕರಿಗೆ ಮನದಟ್ಟು ಮಾಡಿಸುತ್ತದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಈ ಲೆವೆಲ್‌ಗೆ ಜನ ವಿಲನ್‌ನ ಇಷ್ಟಪಡ್ತಾರೆ ಅಂತ ನಿರೀಕ್ಷಿಸಿರಲಿಲ್ಲ : ಅನಿರುದ್ದ ಭಟ್
ಯಶ್‌ ಮಗನ ಪಾತ್ರದಲ್ಲಿ ರಾಘವ್‌ ಜುಯಲ್‌