ಬಾಲಿವುಡ್‌ನ ಸಂಜು ಬಾಬು ದಕ್ಷಿಣ ಭಾರತ ಚಿತ್ರರಂಗದಲ್ಲೇ ಗಟ್ಟಿಯಾಗಿ ನೆಲೆಯೂರುತ್ತಿದ್ದಾರೆ. ‘ಕೆಜಿಎಫ್’ ಚಿತ್ರದ ಮೂಲಕ ದಕ್ಷಿಣ ಸಿನಿಮಾ ಪರದೆಗೆ ಕಾಲಿಟ್ಟ ಸಂಜಯ್ ದತ್, ಇಲ್ಲೇ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ಕನ್ನಡದಲ್ಲೇ ನಟರಾದ ಯಶ್, ಧ್ರುವ ಸರ್ಜಾ ನಂತರ ಈಗ ದರ್ಶನ್ ಅವರ ಚಿತ್ರಕ್ಕೂ ಜತೆಯಾಗಿದ್ದಾರೆ.
ಇತ್ತೀಚೆಗಷ್ಟೆ ನಿರ್ಮಾಪಕ ಕೋನಾ ವೆಂಕಟ್, ಸುಪ್ರೀತ್, ರಕ್ಷಿತಾ ಪ್ರೇಮ್ ಹಾಗೂ ದರ್ಶನ್ ಅವರು ಸಂಜಯ್ ದತ್ ಅವರನ್ನು ಭೇಟಿ ಮಾಡಿದ್ದಾರೆ.
ಆ ಮೂಲಕ ದರ್ಶನ್ ಅವರ ಡಿ58 ಚಿತ್ರಕ್ಕೆ ಸಂಜಯ್ ದತ್ ಎಂಟ್ರಿ ಆಗಿದ್ದಾರೆ. ಇದು ಜೋಗಿ ಪ್ರೇಮ್ ನಿರ್ದೇಶನದ, ಕೆ ವಿ ಎನ್ ಪ್ರೊಡಕ್ಷನ್ ನಿರ್ಮಾಣದ ಸಿನಿಮಾ.