ಕನ್ನಡಪ್ರಭ ವಾರ್ತೆ ಮಂಡ್ಯ
ಶುಕ್ರವಾರ ನಗರದ ಜಯಲಕ್ಷ್ಮಿ ಚಿತ್ರಮಂದಿರದಲ್ಲಿ ತೆರೆಕಂಡ ನೇಗಿಲ ಧರ್ಮ ಚಲನಚಿತ್ರದ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಬಂಗಾರದ ಮನುಷ್ಯ ಸಿನಿಮಾದಿಂದಾಗಿ ಎಷ್ಟೋ ಜನ ಪದವೀಧರರು ಕೃಷಿಯತ್ತ ಮರಳಿದರು. ಆ ಚಿತ್ರದ ನಾಯಕನ ಹೆಸರಾದ ರಾಜೀವಪ್ಪನ ಹೆಸರನ್ನು ಗ್ರಾಮೀಣ ಪ್ರದೇಶದ ಜನರು ತಮ್ಮ ಮಕ್ಕಳಿಗೆ ನಾಮಕರಣ ಮಾಡಿದರು. ಈಗ ಹಳ್ಳಿ ಹಳ್ಳಿಗಳಲ್ಲೂ ರಾಜೀವ ಎನ್ನುವ ಹೆಸರು ಸಿಗಲೂ ಪ್ರಚಲಿತದಲ್ಲಿದೆ. ಇದಕ್ಕೆ ಡಾ.ರಾಜ್ ಕುಮಾರ್ ಅಭಿನಯದ ಬಂಗಾರ ಮನುಷ್ಯ ಚಲನಚಿತ್ರವೇ ಕಾರಣ. ಹಾಗಾಗಿ ಸದಭಿರುಚಿಯ ಚಲನಚಿತ್ರಗಳು ಜನಸಾಮಾನ್ಯರನ್ನೂ ಪ್ರಭಾವಗೊಳಿಸಿ, ಪ್ರೇರಪಿಸುತ್ತವೆ. ಇದಕ್ಕೆ ಸನಾದಿ ಅಪ್ಪಣ್ಣ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳ ಉದಾಹರಣೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಕೇವಲ ಹೊಡಿಬಡಿ, ಕಥೆಯೇ ಇಲ್ಲದ ಸಿನಿಮಾಗಳ ನಡುವೆ ಗ್ರಾಮೀಣ ಸೊಗಡಿನ ರೈತರ ಬದುಕು ಹಾಗೂ ಗ್ರಾಮೀಣರ ಜೀವನವನ್ನೇ ಎಳೆಯಾಗಿಟ್ಟುಕೊಂಡು ತಯಾರಿಸಿರುವ ನೇಗಿಲಧರ್ಮ ಚಲನಚಿತ್ರ ನಿಜಕ್ಕೂ ಸಮಾಜಕ್ಕೆ ಒಂದು ಸಂದೇಶ ತಲುಪಿಸುವ ಸಿನಿಮಾವಾಗಿದೆ ಎಂದು ಪ್ರಶಂಶಿಸಿದರು.ಚಿತ್ರವೊಂದಕ್ಕ ಕೋಟ್ಯಂತರ ರು. ಹಣ ಖರ್ಚು ಮಾಡಿ ಪ್ಯಾನ್ ಇಂಡಿಯಾ ರೀತಿಯ ಸಿನಿಮಾ ಮಾಡಿ ಕೈಸುಟ್ಟುಕೊಳ್ಳುವ ನಿರ್ಮಾಪಕರೇ ಹೆಚ್ಚಿದ್ದಾರೆ. ಇವರ ನಡುವೆ ತಮ್ಮ ಸೊಗಡಿನಲ್ಲಿ ರೂಪಿಸಿದ ಕಾಂತಾತ ದೇಶವೇ ಮೆಚ್ಚುವ ರೀತಿಯಲ್ಲಿ ದೊಡ್ಡ ಯಶಸ್ವಿ ಸಿನಿಮಾವಾಯಿತು. ಆ ಸಿನಿಮಾ ಮಾದರಿಯಲ್ಲೇ ನೇಗಿಲ ಧರ್ಮ ಯಶಸ್ಸು ಕಾಣಲೆಂದು ಆಶಿಸಿದರು.
ಚಿತ್ರದ ನಿರ್ದೇಶಕ ಎಸ್.ಕೃಷ್ಣಸ್ವರ್ಣಸಂದ್ರ ಮಾತನಾಡಿ, ಮಂಡ್ಯ, ಮೈಸೂರು ಭಾಗದಲ್ಲೇ ನಿರ್ಮಾಣಗೊಂಡಿರುವ ನೇಗಿಲಧರ್ಮ ಚಿತ್ರವು ಇಂದು ಮಂಡ್ಯ ನಗರದ ಜಯಲಕ್ಷ್ಮೀ ಚಿತ್ರಮಂದಿರ, ಮೈಸೂರಿನ ಬಾಲಾಜಿ, ಕೆ.ಎಂ.ದೊಡ್ಡಿಯ ಸುಮಾ, ಶ್ರೀರಂಗಪಟ್ಟಣದ ಶ್ರೀದೇವಿ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ತೆರೆ ಕಂಡಿದ್ದು, ಸಿನಿಮಾವನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಚಿತ್ರದ ನಾಯಕ ನಟ ಮದನ್‌ಗೌಡ, ಜಿ.ಪಂ. ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಪತ್ರಕರ್ತರಾದ ಸೋಮಶೇಖರ್ ಕೆರಗೋಡು, ಕೆ.ಎನ್.ನವೀನ್‌ಕುಮಾರ್, ಜೆ.ಎಂ.ಬಾಲಕೃಷ್ಣ, ಆನಂದ್, ಜಯಕರ್ನಾಟಕ ವೇದಿಕೆ ಜಿಲ್ಲಾಧ್ಯಕ್ಷ ಶಂಕರೇಗೌಡ, ಮುಖಂಡರಾದ ಎಂ.ಆರ್.ಮAಜುನಾಥ್, ಮಂಗಲ ಯೋಗೇಶ್, ರಾಮೇಗೌಡ ಇತರರಿದ್ದರು