ದೇಶಭಕ್ತ ಸೈನಿಕನ ಜೀವನ ಪ್ರಯಾಣ

KannadaprabhaNewsNetwork |  
Published : Mar 02, 2024, 01:45 AM ISTUpdated : Mar 02, 2024, 01:46 AM IST
ನಮೋ | Kannada Prabha

ಸಾರಾಂಶ

ದೇಶಭಕ್ತಿ, ಸಾಹಸ, ಶೌರ್ಯದ ಜೊತೆಗೆ ಕೇಂದ್ರ ಸರ್ಕಾರದ ಯಶಸ್ವಿ ಯೋಜನೆಗಳ ಬಗೆಗಿನ ಸಿನಿಮಾ ನಮೋ ಭಾರತ್‌.

ನಮೋ ಭಾರತ್

ತಾರಾಗಣ: ರಮೇಶ್ ಎಸ್‌ ಪರವಿನಾಯ್ಕರ್‌, ಸುಷ್ಮಾ ರಾಜ್‌, ಸೊನಾಲಿ, ಭವ್ಯಾ, ದೊಡ್ಡರಂಗೇಗೌಡ, ಮೈಕೋ ನಾಗರಾಜ್‌ನಿರ್ದೇಶನ: ರಮೇಶ್‌ ಎಸ್‌ ಪರವಿನಾಯ್ಕರ್‌ರೇಟಿಂಗ್‌: 3

- ಪೀಕೆ‘ನಮೋ ಭಾರತ್‌’ ಸಿನಿಮಾವನ್ನು ಎರಡು ಭಾಗವಾಗಿ ವಿಂಗಡಿಸಬಹುದು. ಮೊದಲ ಭಾಗದಲ್ಲಿ ಗಡಿ ಕಾಯುವ ಸೈನಿಕನ ಶೌರ್ಯ, ಸಾಹಸಗಳಿದ್ದರೆ ಎರಡನೇ ಭಾಗದಲ್ಲಿ ದೇಶ ಆಳುವ ನಾಯಕನ ಗುಣಗಾನವಿದೆ. ದೇಶಭಕ್ತಿಯೇ ಚಿತ್ರದ ಜೀವದ್ರವ್ಯ. ಮನರಂಜನೆಯ ಜೊತೆಗೆ ಕೇಂದ್ರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯನ್ನೂ ಇಲ್ಲಿ ಪಡೆಯಬಹುದು. ಚಿತ್ರದ ನಾಯಕನ ಹೆಸರು ಭರತ್‌. ಶಿವಾಜಿಗೆ ಅವರ ತಾಯಿ ಬಾಲ್ಯದಿಂದಲೇ ಶೌರ್ಯ ಪರಾಕ್ರಮದ ಕಥೆ ಹೇಳಿ ಬೆಳೆಸಿದಂತೆ ಈ ಕಥಾನಾಯಕನಿಗೂ ತಾಯಿ ಯೋಧನಾಗುವ ಕನಸು ಬಿತ್ತಿರುತ್ತಾಳೆ, ಆ ಪ್ರಕಾರವೇ ಆತನನ್ನು ಬೆಳೆಸುತ್ತಾಳೆ. ದೊಡ್ಡವನಾದ ಮೇಲೆ ಸೇನಾಧಿಕಾರಿಯಾಗಿ ಪರಾಕ್ರಮ ಮೆರೆಯುವ ಈತ ದೇಶಸೇವೆಯಲ್ಲಿ ಎಷ್ಟು ಮಗ್ನನಾಗಿರುತ್ತಾನೆ ಎಂದರೆ ಮನೆಯಿಂದ ಬಂದ ಪತ್ರವನ್ನೂ ಓದುವುದಿಲ್ಲ. ಓದಿದರೆ ಮನೆ ನೆನಪಾಗಿ ಕೆಲಸಕ್ಕೆ ಎಲ್ಲಿ ಚ್ಯುತಿ ಯಾಗುತ್ತದೋ ಎಂಬ ಆತಂಕ. ಎರಡನೇ ಭಾಗದಲ್ಲಿ ಹಳ್ಳಿಗಳಲ್ಲಿ ಇನ್ನೂ ಜೀವಂತವಾಗಿರುವ ಬಯಲು ಶೌಚಾಲಯ ಪದ್ಧತಿ ಮತ್ತದರ ಅಪಾಯದ ಬಗ್ಗೆ ಹೇಳಲಾಗಿದೆ. ಜೊತೆಗೆ ದುರಂತದ ನೆವದಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ವಿವರ ನೀಡಲಾಗಿದೆ. ಈ ವೇಳೆ ಚಿತ್ರಕ್ಕೆ ಸಾಕ್ಷ್ಯಚಿತ್ರದ ರೂಪ ಬರುವುದು ವಿಶೇಷ. ಉಳಿದಂತೆ ಮಂಜು ಸುರಿವ ಕಾಶ್ಮೀರದ ದೃಶ್ಯಗಳನ್ನು ಆಸ್ವಾದಿಸಬಹುದು. ಭಯೋತ್ಪಾದಕ ದಾಳಿಯಲ್ಲಿ ಅಸುನೀಗಿದ ಆರ್‌ಎಸ್‌ಎಸ್‌ ಪ್ರಮುಖ ಚಂದ್ರಕಾಂತ್‌ ಜೀ ಅವರನ್ನು ಚಿತ್ರದಲ್ಲಿ ನೆನಪು ಮಾಡಿಕೊಳ್ಳಲಾಗಿದೆ. ಬುಲೆಟ್‌ನಂಥಾ ರೋಷಾವೇಶದ ಡೈಲಾಗ್‌ಗಳ ಜೊತೆಗೆ ಅಲ್ಲಲ್ಲಿ ಹಿಮಗಾಳಿಯಂಥಾ ಹಾಡುಗಳಿವೆ. ಒಟ್ಟಾರೆ ಜನರಲ್ಲಿ ದೇಶಭಕ್ತಿ ಜಾಗೃತಗೊಳಿಸುವ ಸಿನಿಮಾವಿದು ಎನ್ನಬಹುದು.

PREV

Recommended Stories

ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಶ್ರುತಿ ಹ್ಯಾಪಿ ಬರ್ತ್‌ಡೇ
ಓಂಪ್ರಕಾಶ್‌ ರಾವ್‌ ಪುತ್ರನ ಮೊದಲ ಚಿತ್ರ ಎನ್‌ಹೆಚ್‌ 41