ಧುರಂಧರ್ 2 ಮತ್ತು ನಮ್ಮ ನಡುವೆ ಭಿನ್ನಾಭಿಪ್ರಾಯವಿಲ್ಲ: ಯಶ್

Published : Mar 12, 2026, 12:24 PM IST
dhurandhar 2 advance booking jump after yash kannada pan india toxic postponed ranveer singh movie pre ticket sale high

ಸಾರಾಂಶ

ಧುರಂಧರ್‌ 2 ಸಿನಿಮಾ ನೋಡಲು ತಾನು ಉತ್ಸುಕನಾಗಿರುವುದಾಗಿ ಯಶ್‌ ಹೇಳಿದ್ದಾರೆ. ‘ಧುರಂಧರ್‌ 2 ಚಿತ್ರತಂಡ ಹಾಗೂ ನಮ್ಮ ನಡುವೆ ಯಾವುದೇ ಭಿನ್ನಭಿಪ್ರಾಯವಿಲ್ಲ. ದ್ವೇಷ, ಸ್ಪರ್ಧೆ ಇತ್ಯಾದಿಗಳೆಲ್ಲಾ ಹೊರಗಿನವರ ಸೃಷ್ಟಿಯಷ್ಟೇ’ ಎಂದೂ ಅವರು ಹೇಳಿದ್ದಾರೆ.

  ಸಿನಿವಾರ್ತೆ

ಧುರಂಧರ್‌ 2 ಸಿನಿಮಾ ನೋಡಲು ತಾನು ಉತ್ಸುಕನಾಗಿರುವುದಾಗಿ ಯಶ್‌ ಹೇಳಿದ್ದಾರೆ. ‘ಧುರಂಧರ್‌ 2 ಚಿತ್ರತಂಡ ಹಾಗೂ ನಮ್ಮ ನಡುವೆ ಯಾವುದೇ ಭಿನ್ನಭಿಪ್ರಾಯವಿಲ್ಲ. ದ್ವೇಷ, ಸ್ಪರ್ಧೆ ಇತ್ಯಾದಿಗಳೆಲ್ಲಾ ಹೊರಗಿನವರ ಸೃಷ್ಟಿಯಷ್ಟೇ’ ಎಂದೂ ಅವರು ಹೇಳಿದ್ದಾರೆ.

ಯಶ್‌ ಆಪ್ತರು ಈ ಬಗ್ಗೆ ಹೇಳಿಕೆ ನೀಡಿ, ‘ಯಶ್‌ ಯಾವತ್ತೂ ಧುರಂಧರ್‌ 2 ಸಿನಿಮಾ ಟೀಮ್‌ ಅನ್ನು ವೈರಿಯಂತೆ ಕಂಡಿಲ್ಲ. ಬದಲಿಗೆ ಅವರು ಸಿನಿಮಾ ನೋಡಲು ಕುತೂಹಲದಿಂದಿದ್ದರು. ಆ ಸಿನಿಮಾದ ತೀವ್ರ ಸ್ಪರ್ಧೆಗೆ ಹೆದರಿ ಟಾಕ್ಸಿಕ್‌ ಸಿನಿಮಾ ಮುಂದಕ್ಕೆ ಹೋಗಿದೆ ಅನ್ನುವುದು ಸತ್ಯಕ್ಕೆ ದೂರದ ಮಾತು.

ಧುರಂಧರ್‌ ಮೊದಲ ಭಾಗದಂತೆ ಎರಡನೇ ಭಾಗದ ರಿಲೀಸ್‌ ಅನ್ನೂ ಬ್ಯಾನ್‌

 ಮಧ್ಯಪ್ರಾಚ್ಯದ ಮುಸ್ಲಿಂ ರಾಷ್ಟ್ರಗಳಲ್ಲಿ ಧುರಂಧರ್‌ ಮೊದಲ ಭಾಗದಂತೆ ಎರಡನೇ ಭಾಗದ ರಿಲೀಸ್‌ ಅನ್ನೂ ಬ್ಯಾನ್‌ ಮಾಡಿದ್ದಾರೆ. ಹೀಗಾಗಿ ಯುದ್ಧದ ಬಿಸಿ ಆ ಟೀಮ್‌ಗೆ ತಟ್ಟಿಲ್ಲ. ಆದರೆ ಟಾಕ್ಸಿಕ್‌ ಸಿನಿಮಾ ಅಲ್ಲೂ ಸಾಕಷ್ಟು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗುತ್ತಿರುವ ಕಾರಣ ಸದ್ಯದ ಸ್ಥಿತಿಯಲ್ಲಿ ರಿಲೀಸ್‌ ಮಾಡಿದರೆ ನಷ್ಟ ಕಟ್ಟಿಟ್ಟಬುತ್ತಿ. ಹೀಗಾಗಿ ರಿಲೀಸ್‌ ಮುಂದಕ್ಕೆ ಹಾಕುವ ತೀರ್ಮಾನಕ್ಕೆ ಬರಲಾಗಿದೆ’ ಎಂದಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಧುರಂಧರ್‌ 2 ಪ್ರೀಮಿಯರ್‌ ಶೋಗೆ ಟಿಕೆಟ್‌ ದರ ರು.2900
ವಿಷ್ಣು ಸರ್ ಥರ ನಾನೂ ಕೈಗೆ ಕಡಗ ಹಾಕಿಕೊಳ್ಳುತ್ತೇನೆ : ಗಣೇಶ್‌