ಕನ್ನಡಪ್ರಭ ಸಿನಿವಾರ್ತೆ
ಪಂಚಾಯತ್ ವೆಬ್ ಸೀರೀಸಿನ ಈ ಹಿಂದಿನ ಎರಡೂ ಸೀಸನ್‌ಗಳು ಸೂಪರ್ ಹಿಟ್ ಆಗಿದ್ದುವು. ಗ್ರಾಮೀಣ ಹಿನ್ನೆಲೆಯಲ್ಲಿ ನಡೆಯುವ ಕಥಾ ಹಂದರವುಳ್ಳ ಈ ಸೀರೀಸ್‌ನ ಮೂರನೇ ಸೀಸನ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದರು. ಹಿಂದಿ ಭಾಷೆಯಲ್ಲಿರುವ ಈ ಕಾಮಿಡಿ ಡ್ರಾಮಾದ ಉತ್ತರ ಭಾರತದ ಹಳ್ಳಿ ಬದುಕಿನ ಚಿತ್ರಣ ಎಲ್ಲರಿಗೂ ಹಿಡಿಸಿತ್ತು. ಜೊತೆಗೆ ಈ ಚಿತ್ರದ ಪ್ರಧಾನ ಪಾತ್ರಧಾರಿ ಜಿತೇಂದ್ರ ಕುಮಾರ್ ವೆಬ್ ಸೀರೀಸ್ ನೋಡುಗನ ಮನ ಸೆಳೆದಿದ್ದರು.
ದೀಪಕ್ ಕುಮಾರ್ ಮಿಶ್ರಾ ನಿರ್ದೇಶನದ ವೆಬ್ ಸೀರೀಸಿನ ಮೂರನೇ ಸೀಸನ್‌ಗೆ ಕಾದು ಕುಳಿತಿದ್ದ ಬಹುತೇಕ ಅಭಿಮಾನಿಗಳು ಈಗಾಗಲೇ ಬಿಂಜ್ ವೀಕ್ಷಣೆ ಮಾಡಿ ಮುಗಿಸಿದ್ದು, 3ನೇ ಸೀಸನ್‌ಗೆ ಮೆಚ್ಚುಗೆ ಸಲ್ಲಿಸಿದ್ದಾರೆ.