ತಂದೆಯವರ ಕನಸಿನ ಪ್ರೊಜೆಕ್ಟ್ ಪ್ರೇಮಲೋಕ 2 : ಮನೋರಂಜನ್‌ ರವಿಚಂದ್ರನ್‌

KannadaprabhaNewsNetwork |  
Published : May 09, 2024, 12:45 AM ISTUpdated : May 09, 2024, 05:17 AM IST
ಮನೋರಂಜನ್‌ | Kannada Prabha

ಸಾರಾಂಶ

ಮನೋರಂಜನ್‌ ರವಿಚಂದ್ರನ್‌ ನಟನೆಯ ಪ್ರೇಮಲೋಕ 2 ಸಿನಿಮಾ ಶೀಘ್ರ ಸೆಟ್ಟೇರಲಿದೆ.

 ಸಿನಿವಾರ್ತೆ :  ರವಿಚಂದ್ರನ್ ಅವರ ಮಹತ್ವಾಕಾಂಕ್ಷೆಯ ಸಿನಿಮಾ ‘ಪ್ರೇಮಲೋಕ 2’ ಶೀಘ್ರದಲ್ಲೇ ಶುರುವಾಗಲಿದೆ. ‘ಚಿತ್ರದ ಸಿನಿಮಾದ ಕೆಲಸಗಳು ವೇಗ ಪಡೆದುಕೊಳ್ಳುತ್ತಿವೆ. ಶೀಘ್ರ ಈ ಸಿನಿಮಾ ಸೆಟ್ಟೇರಲಿದೆ’ ಎಂದು ನಟ ಮನೋರಂಜನ್‌ ರವಿಚಂದ್ರನ್‌ ಹೇಳಿದ್ದಾರೆ.

ಚಿತ್ರಕ್ಕೆ ತಮಿಳು ನಟಿ ತೇಜು ಅಶ್ವಿನಿ ನಾಯಕಿಯಾಗುವ ಸಾಧ್ಯತೆ ಇದೆ. ಆದರೂ ಈ ಕುರಿತು ಅ‍ವರು ಸ್ಪಷ್ಟವಾಗಿ ಏನೂ ಹೇಳಲಿಲ್ಲ. ‘ಇದು ತಂದೆಯವರ ಕನಸಿನ ಪ್ರಾಜೆಕ್ಟ್‌. ಅವರು ಈ ಬಗ್ಗೆ ಶೀಘ್ರ ಅಪ್‌ಡೇಟ್‌ ನೀಡಲಿದ್ದಾರೆ. ತಮಿಳಿನ ನಟಿ ತೇಜು ಅಶ್ವಿನಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಓಡಾಡುತ್ತಿದೆ. ಜನವರಿಯಲ್ಲಿ ಅವರ ಜೊತೆಗೆ ಒಂದು ಫೋಟೋಶೂಟ್‌ ನಡೆದಿತ್ತು ಅಷ್ಟೇ. ಅವರೇ ಫೈನಲ್‌ ಎಂದು ನಾವೆಲ್ಲೂ ಹೇಳಿಲ್ಲ. ಈ ವಿಚಾರದಲ್ಲಿ ತಂದೆ ರವಿಚಂದ್ರನ್‌ ಅವರ ನಿರ್ಧಾರವೇ ಅಂತಿಮ’ ಎಂದು ಹೇಳಿದ್ದಾರೆ.

‘ಹೊಸ ಸಿನಿಮಾಗಳ ಸ್ಕ್ರಿಪ್ಟ್‌ ಕೇಳುತ್ತಿದ್ದೇನೆ. ಆದರೆ ಯಾವುದೇ ಹೊಸ ಸಿನಿಮಾ ಘೋಷಿಸುವುದಿದ್ದರೂ ಇನ್ನೆರಡು ತಿಂಗಳ ನಂತರ ಘೋಷಿಸುತ್ತೇನೆ’ ಎಂದು ಮನೋರಂಜನ್‌ ಸ್ಪಷ್ಟಪಡಿಸಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಸಹನಟಿ, ಬದುಕಿಗೆ ಪ್ರೇಮ ರಶ್ಮಿಯಾದಳು! 14 ವರ್ಷದ ಪ್ರೀತಿಗೆ ಸದ್ಯದಲ್ಲೆ ಮದುವೆ ಬಂಧ - ಜೆ.ಪಿ. ತುಮಿನಾಡು
ಅನೌಷ್ಕಾ ಶಂಕರ್ ಸಂಗೀತ ಕಾರ್ಯಕ್ರಮದಲ್ಲಿ ಅರಿಜಿತ್ ಸಿಂಗ್