ರಾಜಮೌಳಿ ಚಿತ್ರಕ್ಕೆ ₹30 ಕೋಟಿ ಸಂಭಾವನೆ ಪಡೆದ ಪ್ರಿಯಾಂಕಾ ಚೋಪ್ರಾ ದಾಖಲೆ ! 2025ರ ಏಪ್ರಿಲ್‌ ವೇಳೆಗೆ ಟೇಕಾಫ್‌

Published : Feb 03, 2025, 07:48 AM IST
Priyanka Chopra Interview

ಸಾರಾಂಶ

‘ಬಾಹುಬಲಿ’ ಖ್ಯಾತಿಯ ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಟನೆ ಮಾಡಲಿದ್ದು ₹30 ಕೋಟಿ ಸಂಭಾವನೆ ಪಡೆದು ದಾಖಲೆ ನಿರ್ಮಿಸಿದ್ದಾರೆ. ‘ಕಲ್ಕಿ’ ಚಿತ್ರಕ್ಕೆ ದೀಪಿಕಾ ಪಡುಕೋಣೆ ₹20 ಕೋಟಿ ಪಡೆದು ನಿರ್ಮಿಸಿದ್ದ ರೆಕಾರ್ಡ್‌ ಬ್ರೇಕ್‌ ಮಾಡಿದ್ದಾರೆ

ರಾಜಮೌಳಿ ಅವರ ಬಹುನಿರೀಕ್ಷಿತ ಹೊಸ ಸಿನಿಮಾಗೆ ಪ್ರಿಯಾಂಕಾ ಚೋಪ್ರಾ ನಾಯಕಿ. ಈ ಸುದ್ದಿಯನ್ನು ಪ್ರಿಯಾಂಕಾ ಅವರೇ ಅಧಿಕೃತಗೊಳಿಸಿದ್ದಾರೆ. ಈ ಮೂಲಕ ಹಾಲಿವುಡ್‌ನಲ್ಲಿ ಬ್ಯುಸಿ ಆಗಿದ್ದ ಪ್ರಿಯಾಂಕಾ ಸಾಕಷ್ಟು ವರ್ಷಗಳ ಬಳಿಕ ಇಂಡಿಯನ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

‘ಎಸ್‌ಎಸ್‌ಎಂಬಿ 29’ ಹೆಸರಿನ ಈ ಪ್ರಾಜೆಕ್ಟ್‌ 2025ರ ಏಪ್ರಿಲ್‌ ವೇಳೆಗೆ ಟೇಕಾಫ್‌ ಆಗಲಿದೆ.

ಇದು ಆಫ್ರಿಕನ್‌ ಕಾಡಿನಲ್ಲಿ ನಡೆಯುವ ಪ್ಯಾನ್‌ ವರ್ಲ್ಡ್‌ ಜಂಗಲ್‌ ಅಡ್ವೆಂಚರ್‌ ಸಿನಿಮಾ ಎನ್ನಲಾಗಿದೆ. ಸದ್ಯ ಈ ಸಿನಿಮಾದ ಸ್ಕ್ರಿಪ್ಟ್‌ ವರ್ಕ್‌ ಮುಕ್ತಾಯದ ಹಂತದಲ್ಲಿದೆ.

ತೆಲುಗಿನ ಸ್ಟಾರ್‌ ನಟ ಮಹೇಶ್‌ ಬಾಬು ಈ ಅಡ್ವೆಂಚರ್‌ ಥ್ರಿಲ್ಲರ್‌ನ ಹೀರೋ. 2026 ವರ್ಷಾಂತ್ಯದವರೆಗೆ ಈ ಸಿನಿಮಾ ಶೂಟಿಂಗ್‌ ನಡೆಯಲಿದ್ದು, 2027ರಲ್ಲಿ ತೆರೆಗೆ ಬರಲಿದೆ ಎನ್ನಲಾಗಿದೆ. ಆಫ್ರಿಕನ್‌ ಕಾಡುಗಳ ಜೊತೆಗೆ ಅಮೆರಿಕಾ, ಭಾರತದ ವಿವಿಧ ಸ್ಟುಡಿಯೋಗಳಲ್ಲಿ ಶೂಟಿಂಗ್‌ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

PREV

Recommended Stories

ಆ.24ಕ್ಕೆ ಇದ್ರೆ ನೆಮ್ದಿಯಾಗ್‌ ಇರ್ಬೇಕ್‌ ಹಾಡು ಬಿಡುಗಡೆ
ಯಶ್ ಟಾಕ್ಸಿಕ್‌ ಸಿನಿಮಾದಲ್ಲಿ ಐವರು ನಾಯಕಿಯರು ..!