ದರ್ಶನ್‌ ಪುತ್ರ ವಿನೀಶ್‌ ಅವರು ದರ್ಶನ್‌ ಜೊತೆಗೆ ‘ದಿ ಡೆವಿಲ್‌’ ಚಿತ್ರದ ಕಾಸ್ಟ್ಯೂಮ್‌ನಲ್ಲಿರುವ ಫೋಟೋಗಳು ಇದೀಗ ಬಿಡುಗಡೆಯಾಗಿದ್ದು, ಅಭಿಮಾನಿಗಳು ಒಂದೇ ಡ್ರೆಸ್‌ನಲ್ಲಿ ಇಬ್ಬರನ್ನೂ ನೋಡಿ ಸಂಭ್ರಮಿಸುತ್ತಿದ್ದಾರೆ.

 ಸಿನಿವಾರ್ತೆ

ದರ್ಶನ್‌ ಪುತ್ರ ವಿನೀಶ್‌ ಅವರು ದರ್ಶನ್‌ ಜೊತೆಗೆ ‘ದಿ ಡೆವಿಲ್‌’ ಚಿತ್ರದ ಕಾಸ್ಟ್ಯೂಮ್‌ನಲ್ಲಿರುವ ಫೋಟೋಗಳು ಇದೀಗ ಬಿಡುಗಡೆಯಾಗಿದ್ದು, ಅಭಿಮಾನಿಗಳು ಒಂದೇ ಡ್ರೆಸ್‌ನಲ್ಲಿ ಇಬ್ಬರನ್ನೂ ನೋಡಿ ಸಂಭ್ರಮಿಸುತ್ತಿದ್ದಾರೆ.

ಡೆವಿಲ್‌ ವಿಜಯಯಾತ್ರೆ

 ಇದರೊಂದಿಗೆ ವಿಜಯಲಕ್ಷ್ಮಿ ದರ್ಶನ್‌ ಅವರು ಡೆವಿಲ್‌ ವಿಜಯಯಾತ್ರೆ ಕೈಗೊಂಡಿದ್ದಾರೆ. ಮೊದಲ ಹಂತವಾಗಿ ಇಂದು (ಡಿ.20) ಮಧ್ಯಾಹ್ನ 2 ಗಂಟೆಗೆ ಮಂಡ್ಯದ ಮಹಾವೀರ್‌ ಚಿತ್ರಮಂದಿರಕ್ಕೆ ಹಾಗೂ ಡಿ.21ರ ಭಾನುವಾರ ಸಂಜೆ 5 ಗಂಟೆಗೆ ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರಗಳಿಗೆ ಭೇಟಿ ನೀಡಲಿದ್ದಾರೆ.

ದಿ ಡೆವಿಲ್‌ ಸಿನಿಮಾ ವೀಕ್ಷಿಸಿದ ಮೀನಾ ತೂಗುದೀಪ

ಮೈಸೂರಿನ ಡಿಆರ್‌ಸಿ ಚಿತ್ರಮಂದಿರದಲ್ಲಿ ದರ್ಶನ್‌ ತಾಯಿ ಮೀನಾ ತೂಗುದೀಪ ‘ದಿ ಡೆವಿಲ್‌’ ಚಿತ್ರವನ್ನು ನೋಡಿದ್ದಾರೆ. ಶುಕ್ರವಾರ ಬೆಳಗ್ಗೆ ಅಭಿಮಾನಿಗಳು, ಪ್ರೇಕ್ಷಕರ ಜೊತೆಗೆ ಸಾಮಾನ್ಯರಂತೆ ಪುತ್ರನ ಚಿತ್ರ ನೋಡಿದ್ದಾರೆ.