ಜಾಕಿ ಕೊಟ್ಟ ಗೆಲುವಿನಿಂದ ಮತ್ತೆರಡು ಪುನೀತ್‌ ಸಿನಿಮಾ ತೆರೆಗೆ

KannadaprabhaNewsNetwork |  
Published : May 05, 2024, 02:07 AM ISTUpdated : May 05, 2024, 05:34 AM IST
ಪುನೀತ್ 1 | Kannada Prabha

ಸಾರಾಂಶ

ಜಾಕಿ ಯಶಸ್ಸಿನ ಹಿನ್ನೆಲೆಯಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಮತ್ತಷ್ಟು ಚಿತ್ರಗಳು ಮರು ಬಿಡುಗಡೆ ಆಗಲಿವೆ.

 ಸಿನಿವಾರ್ತೆ

ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬಕ್ಕೆ ‘ಜಾಕಿ’ಮರು ಬಿಡುಗಡೆಗೊಂಡು ದೊಡ್ಡ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುವಂತೆ ಮಾಡಿತು. ಹೀಗೆ ‘ಜಾಕಿ’ ಗೆಲುವಿನಿಂದ ಮೇ 10ರಂದು ಪುನೀತ್‌ ನಟನೆಯ ಮತ್ತೆರಡು ಚಿತ್ರಗಳು ಮರು ಬಿಡುಗಡೆ ಆಗುತ್ತಿವೆ. ಆ ಸಿನಿಮಾಗಳೆಂದರೆ ಎ ಹರ್ಷ ನಿರ್ದೇಶನದ ‘ಅಂಜನಿಪುತ್ರ’ ಹಾಗೂ ಕೆ ಮಾದೇಶ ನಿರ್ದೇಶನದ ‘ಪವರ್‌’.

‘ಈಗ ಸ್ಟಾರ್‌ ನಟರ ಆ್ಯಕ್ಷನ್‌ ಸಿನಿಮಾಗಳು ಇಲ್ಲ. ಕನ್ನಡದಲ್ಲಿ ಮಾಸ್‌ ಹಾಗೂ ಮನರಂಜನೆಯನ್ನು ಇಷ್ಟಪಡುವ ಪ್ರೇಕ್ಷಕರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಪ್ರೇಕ್ಷಕರಿಗೆ ಮಾಸ್‌, ಎಂಟರ್‌ಟೇನ್‌ಮೆಂಟ್‌ ಚಿತ್ರಗಳು ಬೇಕಿದೆ. ಅಲ್ಲದೆ ಪುನೀತ್‌ ಅವರ ಚಿತ್ರಗಳನ್ನು ನೋಡುವ ಬಹು ದೊಡ್ಡ ಪ್ರೇಕ್ಷಕ ವರ್ಗ ಇದೆ. ಹೀಗಾಗಿ ಅವರ ಚಿತ್ರಗಳನ್ನು ಮರು ಬಿಡುಗಡೆ ಮಾಡುವ ಮೂಲಕ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಕರೆತರಲಿದ್ದೇವೆ’ ಎನ್ನುತ್ತಾರೆ ‘ಅಂಜನಿಪುತ್ರ’ ಚಿತ್ರದ ನಿರ್ಮಾಪಕ ಎನ್‌ ಕುಮಾರ್‌.

ಮುಂದೆ ಮತ್ತಷ್ಟು ಚಿತ್ರಗಳು

‘ಅಂಜನಿಪುತ್ರ’ ಹಾಗೂ ‘ಪವರ್‌’ ಚಿತ್ರಗಳು ಗೆದ್ದರೆ ಪುನೀತ್‌ ಅವರ ಮತ್ತಷ್ಟು ಚಿತ್ರಗಳು ಮರು ಬಿಡುಗಡೆ ಆಗಲಿವೆ. ಈ ಸಾಲಿನಲ್ಲಿ ‘ರಾಜಕುಮಾರ’, ‘ನಟ ಸಾರ್ವಭೌಮ’, ‘ಜೇಮ್ಸ್‌’, ‘ಜಂಗ್ಲಿ’, ‘ಅಣ್ಣಾ ಬಾಂಡ್‌’, ‘ದೊಡ್ಮನೆ ಹುಡ್ಗ’ ಚಿತ್ರಗಳು ಇವೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಸಹನಟಿ, ಬದುಕಿಗೆ ಪ್ರೇಮ ರಶ್ಮಿಯಾದಳು! 14 ವರ್ಷದ ಪ್ರೀತಿಗೆ ಸದ್ಯದಲ್ಲೆ ಮದುವೆ ಬಂಧ - ಜೆ.ಪಿ. ತುಮಿನಾಡು
ಅನೌಷ್ಕಾ ಶಂಕರ್ ಸಂಗೀತ ಕಾರ್ಯಕ್ರಮದಲ್ಲಿ ಅರಿಜಿತ್ ಸಿಂಗ್