;Resize=(412,232))
ಸಿನಿವಾರ್ತೆ
ಸೂಪರ್‌ಸ್ಟಾರ್ ರಜನಿಕಾಂತ್ ಶುಕ್ರವಾರ 75ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ‘ಜೈಲರ್ 2’ ಚಿತ್ರದ ಸೆಟ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ರಜನಿಕಾಂತ್ ಅವರ ಹುಟ್ಟುಹಬ್ಬದ ಪ್ರಯುಕ್ತ, ‘ಪಡೆಯಪ್ಪ’ ಸ್ಟೈಲ್‌ನಲ್ಲಿ ವಿಶೇಷ ವಿಡಿಯೋ ಬಿಡುಗಡೆ ಕೂಡ ಮಾಡಲಾಗಿದೆ.
ಅಭಿಮಾನಿಗಳು, ಚಿತ್ರರಂಗದವರು, ಆಪ್ತರು, ಸ್ನೇಹಿತರು ರಜನಿಕಾಂತ್ ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ರಜನಿಕಾಂತ್ ಸಾಧನೆಯನ್ನು ಮೆಚ್ಚಿಕೊಳ್ಳುವ, ಹೊಗಳುವ ಸಂದೇಶಗಳು, ವಿಡಿಯೋಗಳು ವೈರಲ್ ಆಗಿವೆ. ಒಬ್ಬ ಸಾಮಾನ್ಯ ಬಸ್ ಕಂಡಕ್ಟರ್‌ನಿಂದ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಬೆಳೆದಿದ್ದು, ತಿಂಗಳಿಗೆ 750 ರು. ಸಂಬಳ ಪಡೆಯುತ್ತಿದ್ದ ಶಿವಾಜಿರಾವ್ ಗಾಯಕ್ವಾಡ್ ಹೀರೋ ಆಗಿ ಒಂದು ಚಿತ್ರಕ್ಕೆ ಕೋಟಿಗಳ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಿರುವುದು, ಬೆಂಗಳೂರಿನ ಬಡ ಕುಟುಂಬದ ಪ್ರತಿಭಾವಂತ ಇಂದು 430 ಕೋಟಿ ಒಡೆಯನಾಗಿ ಬೆಳೆದದ್ದು... ಹೀಗೆ ಹಲವು ರೀತಿಯಲ್ಲಿ ಅಭಿಮಾನಿಗಳು ರಜನಿಕಾಂತ್ ಅವರ ಪಯಣವನ್ನು ನೆನಪಿಸಿಕೊಂಡಿದ್ದಾರೆ.