ಪೋಷಕ ನಟ ಜಂಗ್ಲಿ ಪ್ರಸನ್ನ ಸಿನಿಮಾ ಸಾಹಸ

KannadaprabhaNewsNetwork |  
Published : May 10, 2024, 01:35 AM ISTUpdated : May 10, 2024, 07:44 AM IST
ರಣಹದ್ದು | Kannada Prabha

ಸಾರಾಂಶ

ಪೋಷಕ ಕಲಾವಿದ ಜಂಗ್ಲಿ ಪ್ರಸನ್ನ ಕುಮಾರ್ ನಿರ್ದೇಶನದ ರಹಣಹದ್ದು ಚಿತ್ರದ ಆಡಿಯೋ ಹಾಗೂ ಟೀಸರ್ ಬಿಡುಗಡೆ ಆಗಿದೆ.

 ಸಿನಿವಾರ್ತೆ 

ಪೋಷಕ ನಟರಾಗಿ ಗುರುತಿಸಿಕೊಂಡಿದ್ದ ಜಂಗ್ಲಿ ಪ್ರಸನ್ನ ಕುಮಾರ್‌ ಈಗ ನಿರ್ದೇಶಕರಾಗಿದ್ದಾರೆ. ‘ರಣಹದ್ದು’ ಚಿತ್ರಕ್ಕೆ ನಿರ್ದೇಶನ ಮಾಡುವುದರ ಮೂಲಕ ತಮ್ಮ ಇಬ್ಬರು ಮಕ್ಕಳಾದ ಶಶಾಂಕ್‌, ಸೂರಜ್‌ ಅವರನ್ನು ಚಿತ್ರರಂಗಕ್ಕೆ ಕರೆತಂದಿದ್ದಾರೆ.

ಆ ಪೈಕಿ ಒಬ್ಬರು ಹೀರೋ ಆದರೆ, ಮತ್ತೊಬ್ಬರು ವಿಲನ್‌ ಆಗಿ ನಟಿಸಿದ್ದಾರೆ. ಈ ಚಿತ್ರದ ಟೀಸರ್‌ ಹಾಗೂ ಆಡಿಯೋ ಬಿಡುಗಡೆಯನ್ನು ಶರಣ್‌ ಹಾಗೂ ಎಸ್‌.ಎ. ಚಿನ್ನೇಗೌಡ ಮಾಡಿದ್ದಾರೆ.

ಜಂಗ್ಲಿ ಪ್ರಸನ್ನ ಕುಮಾರ್‌, ‘ಇಲ್ಲಿಯವರೆಗೂ ನೂರಾರು ಚಿತ್ರಗಳಲ್ಲಿ ನಟಿಸಿದ್ದೇನೆ. ಈ ಇಳಿ ವಯಸ್ಸಿನಲ್ಲಿ ಸಿನಿಮಾ ಯಾಕೆ ಅಂತ ತುಂಬಾ ಜನ ಕೇಳಿದ್ದರು. ಪೋಷಕ ಕಲಾವಿದನಾಗಿ ಸಿನಿಮಾ ನಿರ್ದೇಶಿಸಿವುದು, ನಿರ್ಮಿಸುವುದು ಎಷ್ಟು ಕಷ್ಟ ಅಂತ ಗೊತ್ತಿದ್ದರೂ ಮಾಡಿದ್ದೇನೆ ಎಂದರೆ ಅದಕ್ಕೆ ಕಾರಣ ಸಿನಿಮಾ ಮೇಲಿನ ಪ್ರೀತಿ. ಡಾ ರಾಜ್‌ಕುಮಾರ್‌ ಕುಟುಂಬದ ಬಂಧುಗಳು ನನ್ನ ಚಿತ್ರಕ್ಕೆ ಆಶೀರ್ವಾದ ಮಾಡಲು ಬಂದಿದ್ದಾರೆ ಎಂದರೆ ಸಿನಿಮಾ ಮತ್ತು ಈ ಪೋಷಕ ಕಲಾವಿದನ ಮೇಲಿರುವ ಗೌರವ. ಚಿತ್ರೀಕರಣ ಮುಗಿದಿದೆ. ಸದ್ಯದಲ್ಲೇ ಸಿನಿಮಾ ಬರಲಿದೆ’ ಎಂದರು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಸಹನಟಿ, ಬದುಕಿಗೆ ಪ್ರೇಮ ರಶ್ಮಿಯಾದಳು! 14 ವರ್ಷದ ಪ್ರೀತಿಗೆ ಸದ್ಯದಲ್ಲೆ ಮದುವೆ ಬಂಧ - ಜೆ.ಪಿ. ತುಮಿನಾಡು
ಅನೌಷ್ಕಾ ಶಂಕರ್ ಸಂಗೀತ ಕಾರ್ಯಕ್ರಮದಲ್ಲಿ ಅರಿಜಿತ್ ಸಿಂಗ್