ರಶ್ಮಿಕಾ ಮಂದಣ್ಣ ಕನ್ನಡ ಮಾತನಾಡಲು ಪರದಾಡುವ ಹಳೆ ವೀಡಿಯೋ ಟ್ರೆಂಡಿಂಗ್‌ : ಟೀಕೆಗೆ ಕಾರಣ

KannadaprabhaNewsNetwork |  
Published : Oct 03, 2024, 01:31 AM ISTUpdated : Oct 03, 2024, 07:31 AM IST
ಗೋಪಿಲೋಲ | Kannada Prabha

ಸಾರಾಂಶ

ರಶ್ಮಿಕಾ ಮಂದಣ್ಣ ಹಳೆ ವೀಡಿಯೋವೊಂದು ಟ್ರೆಂಡಿಂಗ್‌ನಲ್ಲಿದೆ. ಇದರಲ್ಲಿ ರಶ್ಮಿಕಾ ಕನ್ನಡ ಮಾತನಾಡಲು ಕಷ್ಟಪಡುತ್ತಿರುವುದು ಟೀಕೆಗೆ ಕಾರಣವಾಗಿದೆ.

 ಸಿನಿವಾರ್ತೆ : ‘ಕಿರಿಕ್‌ ಪಾರ್ಟಿ’ ಬೆಡಗಿ ರಶ್ಮಿಕಾ ಮಂದಣ್ಣ ಆಡಿಶನ್‌ ಒಂದರಲ್ಲಿ ಕನ್ನಡ ಮಾತನಾಡಲು ಪರದಾಡುವ ವೀಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ ಆಗುತ್ತಿದೆ.

ಈ ವಾರ ರಿಲೀಸ್‌ ಆಗುತ್ತಿರುವ ‘ಗೋಪಿಲೋಲ’ ಚಿತ್ರದ ನಾಯಕಿ ಪಾತ್ರಕ್ಕೆ 8 ವರ್ಷಗಳ ಕೆಳಗೆ ಈ ಆಡಿಶನ್‌ ನಡೆದಿತ್ತು. ಅದರಲ್ಲಿ ರಶ್ಮಿಕಾ ಭಾಗವಹಿಸಿದ್ದರು. ಈ ವೇಳೆ ಅವರು ಕನ್ನಡ ಮಾತನಾಡಲು ಕಷ್ಟಪಡುತ್ತಿದ್ದರು. ಇದು ಈ ವೀಡಿಯೋದಲ್ಲಿ ರಿವೀಲ್‌ ಆಗಿದೆ. ಈ ಬಗ್ಗೆ ‘ಗೋಪಿಲೋಲ’ ನಿರ್ದೇಶಕ ಆರ್‌ ರವೀಂದ್ರ, ‘ರಶ್ಮಿಕಾ ಅವರಿಗೆ ಕನ್ನಡ ಸ್ಪಷ್ಟವಾಗಿ ಮಾತಾಡುವುದಕ್ಕೆ ಬರುತ್ತಿರಲಿಲ್ಲ. ಅವರು ಆಡಿಷನ್‌ಗೆ ಬಂದಾಗ ಈ ಮಟ್ಟಕ್ಕೆ ಬೆಳೆಯುತ್ತಾರೆ ಅಂತ ಅಂದುಕೊಂಡಿರಲೇ ಇಲ್ಲ’ ಎಂದು ಹೇಳಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ದಿ ಡೆವಿಲ್‌ ಕಾಸ್ಟ್ಯೂಮ್‌ನಲ್ಲಿ ದರ್ಶನ್‌ ಪುತ್ರ ವಿನೀಶ್‌
ಪಾಕಿಸ್ತಾನದಲ್ಲಿ ನಿಷೇಧವಿದ್ದರೂ ಧುರಂಧರ್‌ ಸೂಪರ್‌ಹಿಟ್‌