ಕನ್ನಡಪ್ರಭ ಸಿನಿವಾರ್ತೆ ಉಪೇಂದ್ರ ಅವರ ‘ಕಬ್ಜ’ ಸೇರಿದಂತೆ ನಾಲ್ಕೈದು ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿರುವ ರತನ್ ಚೆಂಗಪ್ಪ ನಾಯಕನಾಗಿ ನಟಿಸುತ್ತಿರುವ ‘ರಾವಣ್’ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆಯಿತು. ಈ ಹಿಂದೆ ‘ಮಿಸ್ ನಂದಿನಿ’ ಚಿತ್ರವನ್ನು ನಿರ್ದೇಶಿಸಿದ್ದ ಗುರುದತ್ ಎಸ್ ಆರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕಡೂರು ಮೂಲದ ನೀಲಕಂಠಸ್ವಾಮಿ ಚಿತ್ರದ ನಿರ್ಮಾಪಕರು. ಒಂದು ಕೇಸ್ ಅನ್ನು ಹತ್ತು ರೀತಿಯಲ್ಲಿ ಯೋಚಿಸಿ ಹೇಗೆ ಆರೋಪಿಯನ್ನು ಕಂಡು ಹಿಡಿಯುತ್ತಾರೆ, ಕ್ಲೈಮಾಕ್ಸ್‌ದಲ್ಲಿ ರಾವಣ್ ಯಾರು ಎಂಬುದೇ ಸಿನಿಮಾ ಕತೆ. ತಪಸ್ವಿ ಪೂಣಚ್ಚ ಪತ್ರಕರ್ತೆಯಾಗಿ ನಾಯಕಿ ಪಾತ್ರದಲ್ಲಿ, ಸಮೀಕ್ಷಾ ಎರಡನೇ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿದ್ಲಿಂಗು ಶ್ರೀಧರ್, ಪ್ರಮೋದ್ ಶೆಟ್ಟಿ, ರಂಗಾಯಣ ರಘು, ರಘು ಪಾಂಡೇಶ್ವರ್, ಟಗರು ಸರೋಜ, ಕಾರ್ತಿಕ್ ಹಾಗೂ ಜಗ್ಗಪ್ಪ ತಾರಾಗಣದಲ್ಲಿದ್ದಾರೆ.