ಸಿನಿವಾರ್ತೆ

ಯಶ್‌ ನಟನೆಯ ‘ಟಾಕ್ಸಿಕ್‌’ ಮತ್ತು ರಣವೀರ್‌ ಸಿಂಗ್‌ ನಟನೆಯ ‘ಧುರಂಧರ್‌ 2’ ಮಾ.19ರಂದು ಒಂದೇ ದಿನ ಬಿಡುಗಡೆಯಾಗಲಿರುವುದರಿಂದ ಎರಡೂ ಚಿತ್ರಗಳ ಮಧ್ಯೆ ಶೀತಲ ಸಮರ ನಡೆಯುತ್ತಿದೆ. ಈ ಮಧ್ಯೆ ‘ಟಾಕ್ಸಿಕ್‌’ ಚಿತ್ರತಂಡ ಮಾ.8ರಂದು ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಟ್ರೇಲರ್ ಬಿಡುಗಡೆ ಮಾಡುತ್ತಿರುವುದಾಗಿ ಘೋಷಿಸಿದೆ.

ಮಾ.3 ಹೋಳಿ ಹಬ್ಬದಂದು ‘ಧುರಂಧರ್‌ 2’ ಚಿತ್ರ ಟ್ರೇಲರ್‌ ಬಿಡುಗಡೆ

ಮಾ.3 ಹೋಳಿ ಹಬ್ಬದಂದು ‘ಧುರಂಧರ್‌ 2’ ಚಿತ್ರ ಟ್ರೇಲರ್‌ ಬಿಡುಗಡೆಯಾಗಲಿದೆ ಎಂದು ಸೋಷಿಯಲ್‌ ಮೀಡಿಯಾಗಳಲ್ಲಿ ಸುದ್ದಿ ಹಬ್ಬಿತ್ತು. ಆದರೆ ಟ್ರೇಲರ್‌ ಬಿಡುಗಡೆ ಆಗಿರಲಿಲ್ಲ. ಅದರ ಬೆನ್ನಲ್ಲೇ ಟಾಕ್ಸಿಕ್‌ ಟ್ರೇಲರ್‌ ರಿಲೀಸ್‌ ದಿನಾಂಕ ಘೋಷಿಸಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬೆಂಗಳೂರಲ್ಲಿಯೇ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.


‘ಟಾಕ್ಸಿಕ್‌’ ಸಿನಿಮಾದ ತಬಾಹಿ ಹಾಡು ಬಿಡುಗಡೆ

ಈಗಾಗಲೇ ‘ಟಾಕ್ಸಿಕ್‌’ ಸಿನಿಮಾದ ತಬಾಹಿ ಹಾಡು ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.