ಸಿನಿವಾರ್ತೆ
‘ಕೆಜಿಎಫ್ 1’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು 2018ರ ನ.6ರಂದು. ಮೊದಲ ಕೆಜಿಎಫ್ ಚಿತ್ರದ ಶೂಟಿಂಗ್ ಶುರುವಾಗಿದ್ದು 2017ರ ಜನವರಿಯಲ್ಲಿ. ಅಲ್ಲಿಂದ ನಿನ್ನೆ ಮೊನ್ನೆವರೆಗೂ ಯಶ್ ಭರ್ಜರಿ ಗಡ್ಡವಿಲ್ಲದೆ ಎಲ್ಲಿಯೂ ಕಾಣಿಸಿಕೊಂಡಿದ್ದಿರಲಿಲ್ಲ. ಆದರೆ ಇದೀಗ ತನ್ನ ಭರ್ಜರಿ ಗಡ್ಡಕ್ಕೆ ಮುಕ್ತಿ ನೀಡಿದ್ದಾರೆ. ಸುಮಾರು 8 ವರ್ಷಗಳ ಬಳಿಕ ‘ಟಾಕ್ಸಿಕ್’ನಲ್ಲಿ ಗಡ್ಡ ರಹಿತ ಯಶ್ ಪ್ರಕಟವಾಗಿದ್ದಾರೆ. ‘ಟಾಕ್ಸಿಕ್’ನಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದು, ಅದರಲ್ಲಿನ ‘ಟಿಕೆಟ್’ ಎಂಬ ಪಾತ್ರಕ್ಕಾಗಿ ಯಶ್ ಗಡ್ಡದ ಸ್ಟೈಲ್ ಬದಲಿಸಿದ್ದಾರೆ. ಆರಂಭದಿಂದಲೂ ಯಶ್ ಗಡ್ಡ ಟ್ರಿಮ್ ಮಾಡಿಸಿಕೊಂಡು ಕಾಣಿಸಿಕೊಳ್ಳುತ್ತಿದ್ದರು. ‘ಲಕ್ಕಿ’ ಚಿತ್ರದಲ್ಲಿ ವಿಶಿಷ್ಟ ಶೈಲಿಯಲ್ಲಿ ಗಡ್ಡ ಬಿಟ್ಟಿದ್ದರು.
. ‘ಕೆಜಿಎಫ್’ ವೇಳೆಗೆ ಗಡ್ಡ ಜೇನುಗೂಡಾಗಿತ್ತು
‘ಗೂಗ್ಲಿ’ ಬಳಿಕ ‘ಗಜಕೇಸರಿ’ ಸೇರಿದಂತೆ ನಂತರ ಚಿತ್ರಗಳಲ್ಲಿ ಗಡ್ಡ ಕೊಂಚ ಕೊಂಚವೇ ಜಾಸ್ತಿಯಾಗುತ್ತಿತ್ತು. ‘ಕೆಜಿಎಫ್’ ವೇಳೆಗೆ ಗಡ್ಡ ಜೇನುಗೂಡಾಗಿತ್ತು. ‘ಕೆಜಿಎಫ್ 2’ ವೇಳೆಗೆ ಯಶ್ ಗಡ್ಡ ಇಂಡಿಯನ್ ಸಿನಿಮಾದಲ್ಲೇ ಟ್ರೆಂಡ್ ಸೆಟ್ಟರ್ ಆಗಿದ್ದು, ನಂತರ ಕ್ಲೀನ್ ಶೇವ್ ಮಾಡುತ್ತಿದ್ದ ಬಾಲಿವುಡ್ ಹೀರೋಗಳೆಲ್ಲ ಯಶ್ ಸ್ಟೈಲಿನ ಗಡ್ಡದಲ್ಲಿ ಮಿಂಚತೊಡಗಿದ್ದು ಇತಿಹಾಸ.
ಈಗ ಮತ್ತೊಂದು ಗಡ್ಡ ರಹಿತ ಸ್ಟೈಲಿನಲ್ಲಿ ಕಾಣಿಸಿಕೊಂಡಿರುವ ಯಶ್ ಮತ್ತೊಂದು ಗಡ್ಡ ಟ್ರೆಂಡ್ ಹುಟ್ಟುಹಾಕುವ ಸಾಧ್ಯತೆ ದಟ್ಟವಾಗಿದೆ. ಮಾ.19ರವರೆಗೆ ಕಾಯಬೇಕಿದೆ.
ಭೀರ ಪಾತ್ರದಲ್ಲಿ ಬಾಲಾಜಿ ಮನೋಹರ್
ಟಾಕ್ಸಿಕ್ ಚಿತ್ರದಲ್ಲಿ ಕನ್ನಡಿಗ ಬಾಲಾಜಿ ಮನೋಹರ್ ನಟಿಸುತ್ತಿದ್ದಾರೆ, ಅವರ ಪಾತ್ರದ ಪೋಸ್ಟರ್ ಬಿಡುಗಡೆಯಾಗಿದೆ.
